ವೈದ್ಯರ ಮೇಲೆ ಅಪನಂಬಿಕೆ ಬೇಡ, ವಿಶ್ವಾಸ ಅಗತ್ಯ
Team Udayavani, Jul 3, 2017, 3:45 AM IST
ಉಡುಪಿ: ವೈದ್ಯರ ಮೇಲಾಗುತ್ತಿರುವ ಹಲ್ಲೆಗಳಿಂದ ಅವರ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ವೈದ್ಯಕೀಯ ವೃತ್ತಿ ಎನ್ನುವುದು ಶ್ರೇಷ್ಠವಾದುದು. ವೈದ್ಯರ ಬಗ್ಗೆ ಅತೀವ ವಿಶ್ವಾಸವಿರಲಿ. ಅಪನಂಬಿಕೆಗೆ ಅವಕಾಶ ಮಾಡಿಕೊಡುವುದು ಬೇಡ. ಅವರ ಒತ್ತಡವನ್ನು ಕಡಿಮೆ ಮಾಡುವುದರಿಂದ ಉತ್ತಮ ಶುಶ್ರೂಷೆ ನೀಡಲು ಸಾಧ್ಯ. ವೈದ್ಯರು ಸಹ ಎಲ್ಲ ರೋಗಿಗಳನ್ನು ಸಮಾನ ದೃಷ್ಟಿಯಲ್ಲಿ ನೋಡಬೇಕು ಎಂದು ಸಚಿವ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದರು.
ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ರವಿವಾರ ವಿಶ್ವ ವೈದ್ಯರ ದಿನಾಚರಣೆ ಹಾಗೂ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮರಾಜ್ಯದ ಕನಸು ಅಸಾಧ್ಯ
ಎಲ್ಲ ಕಡೆ ವೈದ್ಯರ ಮೇಲೆ ಹಲ್ಲೆಗಳಾಗುತ್ತಿದೆ. ಇದರಿಂದ ಅವರಲ್ಲಿ ಒತ್ತಡಗಳು ಹೆಚ್ಚುತ್ತಿವೆ. ಎಲ್ಲೆಡೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದರಿಂದ ರಾಮರಾಜ್ಯದ ಕನಸು ಅಸಾಧ್ಯ. ಹುಟ್ಟು- ಸಾವು ಯಾರ ಕೈಯಲ್ಲೂ ಇಲ್ಲ. ಬೇರೊಬ್ಬರನ್ನು ಸಾಯಿಸಲು ಹಿಂದೆ ಮುಂದೆ ಯೋಚಿಸದ ಜನ, ಅವರ ಸಂಬಂಧಿಕರು, ಬಂಧುಗಳು ಆಸ್ಪತ್ರೆಯಲ್ಲಿ ಮರಣವನ್ನಪ್ಪಿದರೆ ವೈದ್ಯರ ಮೇಲೆ ಆರೋಪ ಮಾಡುತ್ತಾರೆ. ಈ ರೀತಿಯ ಸ್ವಾರ್ಥ ಜಗತ್ತು ಸೃಷ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾವಿಗೆ ವೈದ್ಯರನ್ನು ಹೊಣೆಗಾರರಾಗಿ ಮಾಡುವುದು ಸರಿಯಲ್ಲ ಎಂದರು.
ವೈದ್ಯಲೋಕಕ್ಕೆ ಸವಾಲು
ಪ್ರಾಸ್ತವಿಕವಾಗಿ ಮಾತನಾಡಿದ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ. ಎಸ್. ಚಂದ್ರಶೇಖರ್, ಪ್ರಸ್ತುತ ಕಾಲದಲ್ಲಿ ವೈದ್ಯರು ಹಾಗೂ ರೋಗಿಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡುತ್ತಿದೆ. ರೋಗಿಗಳ ಬೇಡಿಕೆ ಹೆಚ್ಚುತ್ತಿರುವುದು ಅದಕ್ಕೆ ಕಾರಣ. ಆ ನೆಲೆಯಲ್ಲಿ ಉತ್ತಮ ಸವಲತ್ತು, ಉತ್ಕೃಷ್ಟ ಸೇವೆ, ಶ್ರೇಷ್ಠ ಚಿಕಿತ್ಸೆ ಕೊಡುವುದು ವೈದ್ಯಲೋಕಕ್ಕೆ ಸವಾಲಾಗಿದ್ದು, ವೈದ್ಯರಿಗೆ ಜನರ ಸಹಕಾರ ಸಹ ಅಗತ್ಯವಾಗಿದೆ ಎಂದರು.
ಉಪಸ್ಥಿತಿ
ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ| ಎನ್. ಆರ್. ರಾವ್, ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ| ಎಂ. ರಾಜಾ, ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ವೃಂದ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ವೈದ್ಯರಿಗೆ ಸಮ್ಮಾನ
ವಿಶ್ವ ವೈದ್ಯ ದಿನಾಚರಣೆ ಪ್ರಯುಕ್ತ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸಚಿವ ಪ್ರಮೋದ್ ಮಧ್ವರಾಜ್ ಅವರು ಸಮ್ಮಾನಿಸಿದರು. ಕಾರ್ಕಳ ಬೈಲೂರಿನ ಗುರುಕೃಪಾ ನರ್ಸಿಂಗ್ ಹೋಮ್‌ನ ಡಾ| ರಾಮಕೃಷ್ಣ ನಾಯಕ್, ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ಡಾ| ರಾಮಚಂದ್ರ ಐತಾಳ್, ಬೆಳ್ಮಣ್ ಗಣೇಶ್ ಕ್ಲಿನಿಕ್ ಮತ್ತು ಲ್ಯಾಬೊರೇಟರಿಯ ಡಾ| ಪ್ರಭಾಕರ ನಾಯಕ್, ಕುಂದಾಪುರ ಕಂಡೂÉರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಲತಾ ನಾಯಕ್ ಅವರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.