ಸರಕಾರಿ ಕಚೇರಿಗೆ ಬರಬೇಡಿ: ಉಡುಪಿ ಡಿಸಿ
ಸಂದೇಶ / ಕರೆ ಮಾಡಿದರೆ ನಾನೇ ಕೆಲಸ ಮಾಡಿಕೊಡುತ್ತೇನೆ: ಜಿ. ಜಗದೀಶ್
Team Udayavani, Mar 20, 2020, 6:56 AM IST
ಮಣಿಪಾಲದಲ್ಲಿ ಗೂಡಂಗಡಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡಿರುವುದು.
ಉಡುಪಿ: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಾರ್ವಜನಿಕರು ತುರ್ತು ಅಗತ್ಯದ ಹೊರತು ಯಾವುದೇ ಕಾರಣಕ್ಕೂ ಸರಕಾರಿ ಕಚೇರಿಗಳಿಗೆ ಬರುವುದು ಬೇಡ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಸಾರ್ವಜನಿಕರ ಯಾವುದೇ ಕೆಲಸವಿದ್ದರೂ ತಮ್ಮಲ್ಲಿರುವ ಅಧಿಕಾರಿಯ ಮೊಬೈಲ್ ನಂಬರ್‌ಗೆ ವಾಟ್ಸ್‌ಆ್ಯಪ್ ಅಥವಾ ಕರೆಯ ಮೂಲಕ ತಿಳಿಸಿದರೆ ಆ ಕೆಲಸವನ್ನು ಮಾಡಿಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡುತ್ತೇನೆ ಎಂದರು.
ಐಸೋಲೇಟೆಡ್ ವಾರ್ಡ್
ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪಾಲದ ಕಸ್ತೂìಬಾ ಆಸ್ಪತ್ರೆಯಲ್ಲಿ 10, ಜಿಲ್ಲಾಸ್ಪತ್ರೆಯಲ್ಲಿ 10, ಕುಂದಾಪುರ ಹಾಗೂ ಕಾರ್ಕಳ ಆಸ್ಪತ್ರೆಯಲ್ಲಿ ತಲಾ 5 ಐಸೋಲೇಟೆಡ್ ವಾರ್ಡ್‌ಗಳಿವೆ. ಜತೆಗೆ ಜಿಲ್ಲೆಯ ಎಲ್ಲ ಆಸ್ಪತ್ರೆಯಲ್ಲಿ ಎರಡು ಬೆಡ್ ವಾರ್ಡ್ ತೆರೆಯುವಂತೆ ಸೂಚನೆ ನೀಡಲಾಗಿದೆ. ತುರ್ತು ಚಿಕಿತ್ಸೆ ಬೇಕಾದವರು ಮಾತ್ರ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು.
ಗ್ರಂಥಾಲಯ – ಐಸೋಲೇಟೆಡ್ ವಾರ್ಡ್
ಅಜ್ಜರಕಾಡಿನಲ್ಲಿರುವ ನಗರ ಗ್ರಂಥಾಲಯದ ನೂತನ ಕಟ್ಟಡವನ್ನು ಐಸೋಲೇಟೆಡ್ ವಾರ್ಡ್ ಆಗಿ ಪರಿವರ್ತಿಸಲಾಗುತ್ತದೆ. ಇಲ್ಲಿ 100 ಬೆಡ್ ಅಳವಡಿಸಲಾಗುತ್ತದೆ. ಮೊದಲ ಹಂತವಾಗಿ 30 ಬೆಡ್‌ಗಳನ್ನು ಹಾಕಲಾಗುತ್ತದೆ. ಈಗಾಗಲೇ ಎಸ್‌ಡಿಆರ್ ಅನುದಾನದಲ್ಲಿ 30 ಲ.ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯವಿರುವ ಸಿದ್ಧತೆಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಡಲಿದ್ದಾರೆ ಎಂದು ತಿಳಿಸಿದರು.
ವಿದೇಶದಿಂದ 230 ಜನ ಉಡುಪಿಗೆ
ಜಿಲ್ಲೆಗೆ ಫೆ. 29ರಿಂದ ಇಲ್ಲಿಯವರೆಗೆ ವಿವಿಧ ದೇಶಗಳಿಂದ 230 ಜನರು ಉಡುಪಿಗೆ ಹಿಂದಿರುಗಿದ್ದಾರೆ. ಅವರೆಲ್ಲರನ್ನು ಗೃಹಬಂಧನದಲ್ಲಿರಿಸಿ ಆರೋಗ್ಯದ ಕಡೆ ಗಮನ ಹರಿಸಲಾಗಿದೆ. ಇಲ್ಲಿಯವರೆ 21 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ 16 ನೆಗೆಟಿವ್ ಬಂದಿದ್ದು, ಇನ್ನೂ 5 ಮಂದಿಯ ವೈದ್ಯಕೀಯ ವರದಿ ಇನ್ನಷ್ಟೆ ಬರಬೇಕಿದೆ ಎಂದರು.
ಹೊರ ಬರುವಂತಿಲ್ಲ
ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ದೃಢಪಟ್ಟ ವ್ಯಕ್ತಿ ಸಂಚರಿಸಿದ ವಿಮಾನದಲ್ಲಿ ಉಡುಪಿ ಜಿಲ್ಲೆಯ 13 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ ಸೋಂಕಿನ ಲಕ್ಷಣ ಇಲ್ಲವಾದರೂ ಮನೆಗಳಲ್ಲೇ ಇರುವಂತೆ ಸೂಚಿಸಲಾಗಿದೆ. ಅವರು ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿ ಸಾರ್ವಜನಿಕರ ಆರೋಗ್ಯದ ಜತೆಗೆ ಚೆಲ್ಲಾಟವಾಡಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಂದು ಕಡೆಯಲ್ಲಿ 5 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಈ ನಿಟ್ಟಿನಲ್ಲಿ ಸಭೆ, ಸಮಾರಂಭ, ಮದುವೆ, ದೇವಸ್ಥಾನದ ಜಾತ್ರೆ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಆದೇಶ ಮೀರಿದರೆ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ
ಎಂದು ಹೇಳಿದರು.
ಸಂತೆ ರದ್ದು
ಜಿಲ್ಲೆಯಾದ್ಯಂತ ವಾರದ ಸಂತೆ ನಿಷೇಧಿಸಲಾಗಿದೆ. ಪರ್ಯಾಯವಾಗಿ ಅಂಗಡಿಯವರು, ಹೊಟೇಲ್ ಮಾಲಕರು ಸಂತೆಯನ್ನು ಅವಲಂಬಿಸಿದೆ ಸಗಟು ಮಾರಾಟ ವಾಹನದಲ್ಲಿ ಬರುವ ತರಕಾರಿ, ಹಣ್ಣುಹಂಪಲು ಖರೀದಿಸಬೇಕು. ಆದೇಶ ಉಲ್ಲಂ ಸಿದ್ದಕ್ಕೆ ಗುರುವಾರ ಶಿರೂರು ಸಂತೆಯನ್ನು ನಿಲ್ಲಿಸಲಾಗಿದೆ. ಪಿಡಿಒಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದರು.
ವಿಶೇಷ ತಂಡ ರಚನೆ
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಸಿಇಒ, ಎಡಿಸಿ, ಎಸ್ಪಿ, ಜಿಲ್ಲಾಮಟ್ಟದ ಅಧಿಕಾರಿಗಳು ಇದರಲ್ಲಿದ್ದಾರೆ. ಜತೆಗೆ ತಾಲೂಕು ಮಟ್ಟದಲ್ಲಿ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ತರಲಾದ ಕಾನೂನು ಕಟ್ಟುನಿಟ್ಟು ಜಾರಿಗೊಳಿಸುವಲ್ಲಿ ಇಒ, ತಹಶೀಲ್ದಾರ್, ಪಿಡಿಒ ನೇತೃತ್ವದ ತಂಡ ಕಾರ್ಯನಿರ್ವಹಿಸಲಿದೆ ಎಂದರು.
ಲ್ಯಾಬ್‌ಗ ಮನವಿ
ಕೊರೊನಾ ವೈರಸ್‌ಗೆ ಸಂಬಂಧಿಸಿ ದಂತೆ ಗಂಟಲ ದ್ರವವನ್ನು ಪರೀಕ್ಷೆ ಮಾಡಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲ್ಯಾಬ್ ತೆರೆಯುವ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ಜಿ.ಪಂ. ಸಿಇಒ ಪ್ರೀತಿ ಗೆಹೋಲೊಟ್ ಉಪಸ್ಥಿತರಿದ್ದರು.
24×7 ಸಹಾಯವಾಣಿಗೆ ಕರೆಮಾಡಿ
ಜಿಲ್ಲಾ ಮಟ್ಟದ ಕೊರೊನಾ ವೈರಸ್ ಸಹಾಯ ವಾಣಿಯಲ್ಲಿ 24×7 ಗಂಟೆ ಕರೆ ಸ್ವೀಕರಿಸಲಿದ್ದಾರೆ. ಸೋಂಕು, ಐಸೋಲೇಶನ್ ವಾರ್ಡ್, ಲ್ಯಾಬ್ ಮತ್ತು ಸೋಂಕಿತ ರೋಗಿಗಳನ್ನು ಸ್ಥಳಾಂತರಿಸುವ ಬಗ್ಗೆ ಸುಸಜ್ಜಿತ ತಾಂತ್ರಿಕ ಸೇವೆಗಳ ಬಗ್ಗೆ ಸಹಾಯವಾಣಿ ಮೂಲಕ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 966 395 7222 / 9663 950 222ಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ.
3 ಪ್ರಕರಣ ಸೇರ್ಪಡೆ
ಉಡುಪಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 21 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. 16 ಮಂದಿಯ ವರದಿ ಬಂದಿದ್ದು, ನೆಗೆಟಿವ್ ಆಗಿವೆ. ಬಾಕಿ ಇರುವ 5 ವರದಿ ಇನ್ನಷ್ಟೇ ಬರಬೇಕಿದೆ. ಮಾ. 19ರಂದು ಹೊಸದಾಗಿ ಕುಂದಾಪುರ ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ ಕಸ್ತೂìಬಾ ಆಸ್ಪತ್ರೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಇವರು ಜರ್ಮನಿ, ಯುಎಇ, ದುಬಾೖಯಿಂದ ಬಂದವರಾಗಿದ್ದಾರೆ. ಅವರು ಗಂಟಲ ದ್ರವವನ್ನು ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡಾ ತಿಳಿಸಿದರು.
ಸುಳ್ಳು ಸುದ್ದಿ ವಿರುದ್ಧ ಎಚ್ಚರಿಕೆ!
ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಹಬ್ಬಿಸಿದರೆ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಸರಕಾರದ ಆದೇಶ ಉಲ್ಲಂ ಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.