Dr| ಕಾಸರಗೋಡು ರಮಾನಂದ ಕಾಮತ್ ಅವರಿಗೆ ಆಸ್ಟ್ರೇಲಿಯಾದ ಅತ್ಯುಚ್ಚ ಗೌರವ
Team Udayavani, Feb 6, 2024, 7:25 AM IST
ಮಣಿಪಾಲ: ಕಾಸರಗೋಡು ಮೂಲದ ಡಾ| ಕೆ. ರಮಾನಂದ ಕಾಮತ್ ಅವರು “ಆಸ್ಟ್ರೇಲಿಯಾ ಡೇ’ಯ “ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ’ ಗೌರವಕ್ಕೆ ಪಾತ್ರರಾಗಿದ್ದಾರೆ.
87ರ ಹರೆಯದ ಡಾ| ಕಾಮತ್ ಅವರು ಮಕ್ಕಳ ಗ್ಯಾಸ್ಟ್ರೊ ಎಂಟರಾಲಜಿ ವಿಭಾಗದಲ್ಲಿ ಆಳವಾದ ಅಧ್ಯಯನ ನಡೆಸಿದವರು. ಸಿಡ್ನಿಯ ಮಕ್ಕಳ ಆಸ್ಪತ್ರೆಯಲ್ಲಿ ತೆರೆದ ಈ ವಿಶೇಷ ವಿಭಾಗ ಆಸ್ಟ್ರೇಲಿ ಯಾದಲ್ಲಿ ಮೊದಲನೆಯದ್ದು. ಈಗ ಈ ಆಸ್ಪತ್ರೆಯನ್ನು ವೆಸ್ಟ್ ಮೆಡ್ ಚಿಲ್ಡ್ರನ್ಸ್ ಹಾಸ್ಪಿಟಲ್ ಎನ್ನಲಾಗುತ್ತದೆ.
ಆಸ್ಟ್ರೇಲಿಯಾದಲ್ಲಿ ಮಕ್ಕಳ ಲಿವರ್ ಟ್ರಾನ್ಸ್ ಪ್ಲಾಂಟ್ ಅನ್ನು ಮೊದಲು ನಿರ್ವಹಿಸಿದ ಕೀರ್ತಿಯೂ ಡಾ| ಕಾಮತ್ ಅವರದು. 2003ರಲ್ಲಿ ನಿವೃತ್ತರಾದರೂ ಈ ಕ್ಷೇತ್ರದ ನವೀನ ಬೆಳವಣಿಗೆಗಳ ಬಗೆಗೆ ಅಧ್ಯಯನ ನಡೆಸುತ್ತಿದ್ದಾರೆ. ಮದ್ರಾಸ್ ವಿ.ವಿ.ಯಲ್ಲಿ ಎಂಬಿಬಿಎಸ್, ವೆಲ್ಲೂರು ಸಿಎಂಸಿಯಲ್ಲಿ ಎಂಡಿ, ಡಿಸಿಎಚ್ ಅಧ್ಯಯನ ನಡೆಸಿ ವೆಲ್ಲೂರಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಲಂಡನ್, ಮಲೇಶ್ಯಾದಲ್ಲಿ ಕಾರ್ಯನಿರ್ವಹಿಸಿ ಆಸ್ಟ್ರೇಲಿ ಯಾದಲ್ಲಿ ಸೇವೆ ಸಲ್ಲಿಸಿದರು. ಆರಂಭದಲ್ಲಿ ಮಣಿ ಪಾಲ ಕೆಎಂಸಿಯಲ್ಲೂ ಪ್ರಾಧ್ಯಾಪಕರಾ ಗಿದ್ದರು.
“ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್/ ಮೆಟಬಾಲಿಕ್ ಅಸೋಸಿಯೇಟೆಡ್ ಫ್ಯಾಟಿ ಲಿವರ್ ಡಿಸೀಸ್’ಗೆ ಸಂಬಂಧಿಸಿ ನಾನು ಕಾರ್ಯ ನಿರ್ವಹಿಸುವಾಗ ಒಂದೇ ಒಂದು ಪ್ರಕರಣವನ್ನೂ ಕಂಡಿರಲಿಲ್ಲ. ಈಗ ಪ್ರತೀ ನಾಲ್ವರು ಆಸ್ಟ್ರೇಲಿಯಾದ ಯುವಕರು/ಮಕ್ಕಳಲ್ಲಿ ಒಬ್ಬರಲ್ಲಿ ಕಂಡುಬರುತ್ತಿದೆ. ಬೊಜ್ಜು ಕಂಡುಬರುವುದಕ್ಕೆ ತಪ್ಪಾದ ಆಹಾರಕ್ರಮ, ಕಳಪೆ ಜೀವನಶೈಲಿ ಕಾರಣವಾಗಿದೆ. ಆರಂಭದಲ್ಲಿಯೇ ಇಂತಹ ಸಮಸ್ಯೆಯನ್ನು ಪತ್ತೆಹಚ್ಚಿದರೆ ನಿಯಂತ್ರಿಸಬಹುದು’ ಎನ್ನುತ್ತಾರೆ ಡಾ| ಕಾಮತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.