Navy: ಪಶ್ಚಿಮ ಕಮಾಂಡ್ನ ಮೆಡಿಕಲ್ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ
Team Udayavani, Dec 14, 2024, 11:53 AM IST
ಉಡುಪಿ: ನೌಕಾಪಡೆಯ ಮುಂಬಯಿ ಮುಖ್ಯ ಕಚೇರಿಯ ಪಶ್ಚಿಮ ಕಮಾಂಡ್ನ ವೈದ್ಯಕೀಯ ಮುಖ್ಯಸ್ಥರಾಗಿ ಉಡುಪಿ ಮೂಲದ ಡಾ| ಕೃಷ್ಣಮೂರ್ತಿ ಅಧಿಕಾರಿಯವರು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ನೌಕಾಪಡೆಯ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಉಡುಪಿ ಭಾಗದ ಮೊದಲಿಗರು ಇವರಾಗಿದ್ದಾರೆ.
ಕಳೆದ 33 ವರ್ಷದಿಂದ ನೌಕಾಪಡೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಐಎನ್-ಅಸ್ವಿನಿ ಮತ್ತು ಎಎಫ್ಎಂಸಿ (ಆರ್ಮ್ ಫೋರ್ಸ್ ಮೆಡಿಕಲ್ ಕಾಲೇಜ್) ಹಾಗೂ ಐಎನ್ಎಚ್ಎಸ್ ಧನ್ವಂತರಿ ಹಾಗೂ ಐಎನ್ಎಚ್ಎಸ್ ಪತಂಜಲಿ ಆಸ್ಪತ್ರೆಯಲ್ಲೂ ಉನ್ನತ ಹುದ್ದೆ ಅಲಂಕರಿಸಿದ್ದರು. ಸಿಎಂಒ ಆಗಿ ಅಧಿಕಾರ ಸ್ವೀಕರಿಸುವ ಮೊದಲು ಭಾರತೀಯ ಸೇನೆಯಲ್ಲಿ ಸೆಕೆಂಡ್ಮೆಂಟ್ನಲ್ಲಿ ಎಡಿಜಿಎಂಎಸ್ ಆಗಿದ್ದರು.
ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು, ಪುಣೆಯ ಎಎಫ್ಎಂಸಿಯಲ್ಲಿ ಪಿಡಿಯಾಟ್ರಿಕ್ಸ್ನಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಇವರು ನ್ಯೂರಾಲಜಿ ತಜ್ಞರಾಗಿದ್ದು, ವೈದ್ಯಕೀಯ ಶಿಕ್ಷಣದ ಇಂಟರ್ನ್ಯಾಷನಲ್ ಫೈಮೆರ್ ಫೆಲೊಶಿಪ್ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ಬಾರಕೂರು ಗ್ರಾಮದ ಕುರಾಡಿಯ ಮಹಾಬಲೇಶ್ವರ ಅಧಿಕಾರಿ ಮತ್ತು ಸುಮಿತ್ರಾ ದಂಪತಿ ಪುತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು
ಅಲೆವೂರು-ಮಣಿಪಾಲ ರಸ್ತೆ: ಟಿಪ್ಪರ್- ಬೈಕ್ ನಡುವೆ ಢಿಕ್ಕಿ; ಓರ್ವ ಸಾವು, ಮತ್ತೊಬ್ಬ ಗಂಭೀರ
Manipal: ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿದ್ರೆ ಉನ್ನತ ಸ್ಥಾನ ಲಭ್ಯ: ಡಾ| ಸುಧಾಕರ ಶೆಟ್ಟಿ
Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ
Udupi ಬೀದಿಗಳಲ್ಲಿ ತಾಳೆ ಬೊಂಡ ವ್ಯಾಪಾರ ಜೋರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.