ಬಂಟಕಲ್ ತಾಂತ್ರಿಕ ಕಾಲೇಜಿನ ಡಾ| ಸಚಿನ್ ಭಟ್ ಅವರಿಗೆ ಸ್ಟಾರ್ಟ್ ಅಪ್ ಅನುದಾನ
Team Udayavani, Aug 28, 2022, 12:58 PM IST
ಶಿರ್ವ : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ| ಸಚಿನ್ ಭಟ್ ಅವರು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಪ್ರತಿಷ್ಠಿತ ರಾಜ್ಯ ಮಟ್ಟದ ಅರ್ಬನ್ ಮೊಬಿಲಿಟಿ ಗ್ರ್ಯಾಂಡ್ ಚಾಲೆಂಜ್ ಗೆದ್ದುಕೊಂಡಿದ್ದಾರೆ.
ಪೊಲೀಸರಿಗೆ ಅಪಘಾತ ಸಂದರ್ಭಗಳಲ್ಲಿ ಮಾನವ ಸಹಾಯದೊಂದಿಗೆ ಮಾಹಿತಿ ಕಲೆಹಾಕಲು ಹಾಗೂ ಮಾಹಿತಿ ವರದಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಲು ನೆರವಾಗುವ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಹತ್ತು ಲಕ್ಷ ರೂಪಾಯಿಗಳ ಸ್ಟಾರ್ಟ್ ಅಪ್ ಅನುದಾನ ಪಡೆದಿದ್ದಾರೆ.
ಕೃತಕ ಬುದ್ಧಿಮತ್ತೆಯನ್ನಾಧರಿಸಿದ ಈ ತಂತ್ರಜ್ಞಾನವು ಅಪಘಾತ ಸ್ಥಳದಲ್ಲಿ ತೆಗೆದ ಚಿತ್ರಗಳಿಂದ ಅಪಘಾತ ಸ್ಥಳ ಹಾಗೂ ತೀವ್ರತೆಯನ್ನು ಲೆಕ್ಕಹಾಕಿ ಹತ್ತಿರದ ಆಸ್ಪತ್ರೆಗೆ ಮಾಹಿತಿಯನ್ನು ಕಳಿಸುತ್ತದೆ. ಮಾತ್ರವಲ್ಲದೆ ಅಪಘಾತವಾದ ವಾಹನದ ನಂಬರ್ ಪ್ಲೇಟ್ ಗುರುತಿಸಿ ಪೊಲೀಸರಿಗೆ ಮಾಹಿತಿ ರವಾನಿಸುತ್ತದೆ.
ಅಪಘಾತ ದತ್ತಾಂಶ ಮತ್ತು ಅಪಘಾತದ ಕಾರಣಗಳು ಮತ್ತು ಪರಿಹಾರಗಳನ್ನು ವಿಶ್ಲೇಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ಇವರ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.