“ಕಲೆ, ಸಂಸ್ಕೃತಿ ಉಳಿಸುವಲ್ಲಿ ಡಾ| ಶಾಂತಾರಾಮ್ ಪಾತ್ರ ಹಿರಿದು’
Team Udayavani, Apr 22, 2019, 6:30 AM IST
ಉಡುಪಿ: ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಡಾ| ಎಚ್. ಶಾಂತಾರಾಮ್ ಅವರ ಪಾತ್ರ ಅಪಾರವಾದುದು. ಇವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿವೆ ಎಂದು ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಹೇಳಿದರು.
ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ಹಿರಿಯ ಚಿಂತಕ, ರಂಗತಪಸ್ವಿ ಡಾ| ಎಚ್. ಶಾಂತಾರಾಮ್ ಅವರಿಗೆ ತಲ್ಲೂರು ಗಿರಿಜಾ ಡಾ| ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.
ಇಲ್ಲಿನ ರವೀಂದ್ರ ಕಲಾ ಮಂಟಪದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಕಲಾ ಚಟುವಟಿಕೆ ಇನ್ನಷ್ಟು ಬೆಳೆಯುವ ನಿಟ್ಟಿನಲ್ಲಿ ಮಾಹೆ ವತಿಯಿಂದ ಆರು ತಿಂಗಳೊಳಗೆ ರವೀಂದ್ರ ಕಲಾ ಮಂಟಪಕ್ಕೆ ಹವಾನಿಯಂತ್ರಕ ಅಳವಡಿಸಲಾಗುವುದು. ಶಾಂತಾರಾಮ್ ಅವರು ಬಹುಮುಖ ವ್ಯಕ್ತಿತ್ವ ಹೊಂದಿ
ದ್ದಾರೆ. ಶಿಕ್ಷಣ ತಜ್ಞರೂ ಹೌದು ಅವರ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ| ಎಚ್.ಶಾಂತಾರಾಮ್ ಮಾತನಾಡಿ, ನಮ್ಮವರೇ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಈ ಮೂಲಕ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.
ಕೇಳಿದರೆ ಮಾತ್ರ ಉಪದೇಶ ಕೊಡಿ
ಜೀವನ ನಡೆಸುವ ರೀತಿಯನ್ನು ಅಳವಡಿಸಿಕೊಳ್ಳಬೇಕು. ಕೇಳಿದರೆ ಮಾತ್ರ ಉಪದೇಶ ಕೊಡುವುದು ಸೂಕ್ತ ಎಂಬ ತತ್ವವನ್ನು ಅಳವಡಿಸಿ ಕೊಳ್ಳಿ ಎಂದರು. ಆಧುನಿಕ ತಂತ್ರಜ್ಞಾನಗಳಿಂದ ನೈಸರ್ಗಿಕ ವಸ್ತುಗಳ ಉಪಯೋಗ ಆಗುತ್ತಿಲ್ಲ. ಇದರಿಂದಾಗಿಯೇ ಮೆದುಳಿನ ಕಾರ್ಯವೈಖರಿಯನ್ನು ನಾವು ಮರೆಯುತ್ತಿದ್ದೇವೆ ಎಂದರು.
ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಆರ್‌ಆರ್‌ಸಿಯ ಆಡಳಿತಾಧಿಕಾರಿ ಡಾ| ಎಂ.ಎಲ್. ಸಾಮಗ ಮಾತನಾಡಿ, ಡಾ| ಎಚ್ .ಶಾಂತಾರಾಮ್ ಅವರ ಕನ್ನಡದಲ್ಲಿ ಗ್ರಾಂಥಿಕ ಸ್ಪರ್ಶ ಇದೆ.
ಆಡಳಿತಗಾರರಾಗಿ ಅವರು ತುಂಬಾ ಹತ್ತಿರವಾದವರು. ಅವರ ಚಿಂತನೆ, ಕಾರ್ಯವೈಖರಿ, ಮಾತುಗಾರಿಕೆ ಶಿಸ್ತಿನಿಂದ ಕೂಡಿದೆ ಎಂದರು.
ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.