ಡಾ| ಆಮ್ಟೆ ದಂಪತಿಗೆ ಯಕ್ಷ ಕಲೆಯ ಬಲೆ!
Team Udayavani, Feb 3, 2017, 3:45 AM IST
ಉಡುಪಿ: ಬಾಬಾ ಆಮ್ಟೆ ಅವರು ಮಹಾರಾಷ್ಟ್ರದ ನಾಗ್ಪುರ ಸಮೀಪದ ಹೇಮಲ್ಕಸ ಗ್ರಾಮದಲ್ಲಿ ಆರಂಭಿಸಿದ ಬುಡಕಟ್ಟು ಜನಾಂಗದವರ ಸೇವಾ ಕ್ಷೇತ್ರಕ್ಕೆ ಬಂದು ಇಲ್ಲಿನ ಯಕ್ಷಗಾನ ಕಲೆ ಪ್ರದರ್ಶಿಸಿ. ಅವರು ಅದರಿಂದ ಆನಂದಿತರಾಗುತ್ತಾರೆ ಎಂದು ಬಾಬಾ ಆಮ್ಟೆ ಅವರ ಪುತ್ರ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ| ಪ್ರಕಾಶ ಆಮ್ಟೆ ಮತ್ತು ಪತ್ನಿ ಡಾ| ಮಂದಾಕಿನಿ ಆಮ್ಟೆ ತಿಳಿಸಿದರು.
ಗುರುವಾರ ಎಂಜಿಎಂ ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಮಕ್ಕಳ ಯಕ್ಷರೂಪಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಬೆಂಗಳೂರು ಬಿ.ವಿ. ಕಾರಂತ ರಂಗ ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ತ ಎಂ. ಜಯರಾಮ ಪಾಟೀಲ್ ಮಾತನಾಡಿ, ಗಾಂಧೀಜಿ ಅವರಂತಾಗಲು ಖಾದಿ ಬಟ್ಟೆಯನ್ನೇ ತೊಡಬೇಕೆಂದಿಲ್ಲ. ನಿರ್ಮಲ ಮನಸ್ಸಿನಿಂದ ಕಾಯಕವೆಸಗಿದರೆ ಸಾಕು ಎಂದರು.
ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಡಾ| ಪಿ.ಎಲ್.ಎನ್. ರಾವ್, ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ ಉಪಸ್ಥಿತರಿದ್ದರು.
ವೀಸಾ ನಿರಾಕರಣೆ
2007ರಲ್ಲಿ ಅಮೆರಿಕದಲ್ಲಿ ನಡೆದ ಮರಾಠಿಗರ ಸಮ್ಮೇಳನಕ್ಕೆ ಆಮ್ಟೆ ಅವರನ್ನು ಆಹ್ವಾನಿಸಲಾಗಿತ್ತು. ಅವರ ವೃತ್ತಿ ಸಮಾಜಸೇವೆ, ಆದಾಯ 3,000 ರೂ. ಎಂಬ ಉಲ್ಲೇಖ ಕಂಡ ರಾಯಭಾರ ಕಚೇರಿ ಅವರು ವೀಸಾ ನೀಡಲು ನಿರಾಕರಿಸಿ
ದರು. ಹೇಮಲ್ಕಸದಿಂದ ಮುಂಬಯಿಗೆ 1,200 ಕಿ. ಮೀ. ಕ್ರಮಿಸಿ ಬರಲು ಮೂರು ದಿನ ಬೇಕಾದರೆ ಅಧಿಕಾರಿ ಎರಡೇ ನಿಮಿಷದಲ್ಲಿ ನಿರಾಕರಿಸಿದ್ದ. ಮರುದಿನ ಪತ್ರಿಕೆಗಳಲ್ಲಿ ಪ್ರಕಾಶ್ ಆಮ್ಟೆಗೆ ವೀಸಾ ನಿರಾಕರಣೆ ಎಂಬ ಸುದ್ದಿ ಬಂತು. ಅನಂತರ ರಾಯಭಾರ ಕಚೇರಿಯಿಂದ ದೂರವಾಣಿ ಕರೆ ಬಂತು. ವಿಷಾದ ಕೇಳಿ ಮತ್ತೆ ವಾಪಸು ಕರೆದರು ಎಂದು ಪ್ರಕಾಶ್ ಆಮ್ಟೆ ನೆನಪಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.