ಧಾರ್ಮಿಕ ಪ್ರವಾಸ ತಾಣವಾಗಿ ಹಿರಿಯಡಕ ಕ್ಷೇತ್ರ: ಡಾ| ಹೆಗ್ಗಡೆ
Team Udayavani, Apr 26, 2018, 8:00 AM IST
ಹೆಬ್ರಿ: ಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಅತ್ಯುತ್ತಮವಾಗಿ ನಿರ್ಮಾಣಗೊಂಡಿದ್ದು ಧಾರ್ಮಿಕ ಪ್ರವಾಸಿ ತಾಣವಾಗಿ ಮೂಡಿಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಹಿರಿಯಡಕ ದೇವಸ್ಥಾನದಲ್ಲಿ ಎ. 16ರಿಂದ ಎ. 25ರವರೆಗೆ ನಡೆಯುತ್ತಿರುವ ನವೀಕೃತ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಬುಧವಾರ ದೇಗುಲಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಕಾಲ ಬದಲಾಗಬಹುದು. ಆದರೆ ನಂಬಿಕೆ, ಶ್ರದ್ಧೆ, ಭಕ್ತಿ ಬದಲಾಗದು. ಯುವಪೀಳಿಗೆ ಧಾರ್ಮಿಕ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಅಂತಹ ಯುವಸಮೂಹವನ್ನು ಇಂದು ಹಿರಿಯಡಕದಲ್ಲಿ ಕಾಣುತ್ತಿದ್ದೇವೆ. ಆಕರ್ಷಕ ಕೆತ್ತನೆಗಳಿಂದ ದಾರುಶಿಲ್ಪ ಹಾಗೂ ಶಿಲ್ಪಕಲೆ ಇಲ್ಲಿ ಅದ್ಭುತವಾಗಿ ಮೂಡಿಬಂದಿದ್ದು ಇದರ ಹಿಂದಿರುವ ಶ್ರಮ ಪ್ರಶಂಸನೀಯ. ಪ್ರತಿಯೊಬ್ಬರೂ ಕ್ಷೇತ್ರದ ದರ್ಶನ ಮಾಡಲೇಬೇಕು ಎಂದರು.
ಸಮ್ಮಾನ
ದೇವಸ್ಥಾನ ನಿರ್ಮಾಣದ ಶಿಲ್ಪಿ ರಾಜು ಎಚ್. ನಾಯ್ಕ, ಪ್ರಾಜೆಕ್ಟ್ ಕನ್ಸಲ್ಟೆಂಟ್ ಪ್ರಸಾದ್ ಶೆಟ್ಟಿ, ದಾರುಶಿಲ್ಪಿ ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ, ಹರೀಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಧರ್ಮಸ್ಥಳ ಗ್ರಾ. ಯೋಜನೆಯ ಹಿರಿಯಡಕ ಘಟಕದ ವತಿಯಿಂದ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಸಮ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಗೋವರ್ಧನದಾಸ ಹೆಗ್ಡೆ, ಕಾರ್ಯದರ್ಶಿ ಅಮರನಾಥ ಆರ್. ಶೆಟ್ಟಿ, ಅರ್ಚಕ ರಂಗನಾಥ ಭಟ್ ಮೊದಲಾದವರಿದ್ದರು. ಪ್ರಸಾದ್ ಶೆಟ್ಟಿ ಕುತ್ಯಾರು ಸ್ವಾಗತಿಸಿ, ನರ್ಜೆ ವಾಸು ಪ್ರಭು ವಂದಿಸಿದರು. ಸಂತೋಷ ಅವರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.