ಒಳಚರಂಡಿ ಕಾಮಗಾರಿಗಳಿಂದ ರಸ್ತೆ ಹಾಳು
Team Udayavani, Jun 23, 2018, 6:00 AM IST
ಕುಂದಾಪುರ: ವಾರ್ಡ್‌ಗಳ ಪೈಕಿ ಅತಿ ಹೆಚ್ಚು, ಅತಿ ದೊಡ್ಡ ತೋಡುಗಳಿರುವ ವಾರ್ಡು ಬಹುಶಃ ಚಿಕ್ಕನ್‌ಸಾಲ್ ಎಡಬದಿ ವಾರ್ಡ್ ಇರಬಹುದು ಎನಿಸುತ್ತಿದೆ. ಈ ವಾರ್ಡಿಗೆ ಭೇಟಿ ಕೊಟ್ಟಾಗ ಕಾಣಿಸುತ್ತಿದ್ದುದು ಹರಿಯುತ್ತಿದ್ದ ತೋಡುಗಳೇ. ಸದಸ್ಯರ ಮಾತು, ಈ ಭಾಗದ ಜನರ ಮಾತು ಕೂಡಾ ಇದಕ್ಕೆ ಪೂರಕವಾಗಿತ್ತು. ಸುಮಾರು 800 ಮತದಾರರು, 240ರಷ್ಟು ಮನೆಗಳಿರುವ ವಾರ್ಡು ಇದು.
ಮಳೆಗಾಲದ ಸಿದ್ಧತೆ ಆಗಿದೆ
ಮಳೆಗಾಲಕ್ಕೆ ಮುನ್ನ ಚರಂಡಿಗಳ ದುರಸ್ತಿಯಾಗಿದೆ. ಹೂಳೆತ್ತಲಾಗಿದೆ. ಆದರೆ ಅನೇಕ ಕಡೆ ಚರಂಡಿಯೇ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿರುವುದು ದೊಡ್ಡ ತೋಡಿಗೆ ಸ್ಲಾಬ್ ಹಾಕಿ ರಸ್ತೆಯನ್ನಾಗಿ ಮಾಡಿಕೊಡಿ ಎನ್ನುವುದು. ಆದರೆ ಅದಕ್ಕೆ ಅನುದಾನದ ಕೊರತೆ ಇರುವ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಗದ್ದೆಬೈಲಿನ ಬದಿ ತೋಡುಗಳ ಕಾಮಗಾರಿಗೆ ಅಂದಿನಿಂದ ಇಂದಿನವರೆಗೂ ಜನರ ಬೇಡಿಕೆ ಇರುವುದು ಪೂರೈಕೆಯಾಗಲೇ ಇಲ್ಲ.
ಒಳಚರಂಡಿ ಅವಸ್ಥೆ
ಕಾಂಕ್ರಿಟ್ ರಸ್ತೆ ಆದ ಬಳಿಕ ಒಳಚರಂಡಿ ಕಾಮಗಾರಿ ಮಾಡಿದ ಕಾರಣ ರಸ್ತೆಯ ಅಂದವೆಲ್ಲ ಹಾಳಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟಂತೆ ಕಾಣುವ ತೇಪೆ ಕಾರ್ಯಗಳು ವಾಹನಗಳ ಸುಗಮ ಓಡಾಟಕ್ಕೆ ತಡೆಯೊಡ್ಡಿವೆ. ಕೆಲವೆಡೆ ಕಂದಕದಂತೆ ರಸ್ತೆ ಬಾಯಿಬಿಟ್ಟು ನಿಂತಿದೆ.
ಪರ್ಯಾಯ ರಸ್ತೆ
ಚಿಕ್ಕಮ್ಮನ ಸಾಲ್ ರಸ್ತೆಗೆ ಪರ್ಯಾಯ ವಾಗಿ ರಸ್ತೆ ಮಾಡಬೇಕೆಂದು ಬಂದ ಬೇಡಿಕೆಯನ್ವಯ ಇಲ್ಲಿ ಬಾದ್‌ಶಾ ರಸ್ತೆಮೂಲಕ ಸೇತುವೆ ನಿರ್ಮಾಣ ಮಾಡಿ ಗದ್ದೆಯಲ್ಲಿ ರಸ್ತೆ ಮಾಡಲಾಗಿದೆ. ಆದರೆ ಅದಕ್ಕೆ ಕಾಂಕ್ರೀಟ್ ಹಾಕುವ ಕಾರ್ಯವಾಗಲೀ, ಇಂಟರ್‌ಲಾಕ್ ಅಳವಡಿಸುವ ಕಾರ್ಯ ಆಗಲಿಲ್ಲ. ಕಾರಣ ಮತ್ತದೇ ಅನುದಾನದ ಕೊರತೆ.
ಇಂಟರ್‌ಲಾಕ್ ಕಾಮಗಾರಿ
ಜೈನ್‌ಹೋಟೆಲ್ ಕೆಳಗಡೆಯಿಂದ ರಾಮಕೃಷ್ಣ ಅವರ ಮನೆವರೆಗೆ ಚರಂಡಿ ರಚಿಸಿ ಇಂಟರ್‌ಲಾಕ್ ಹಾಕಲಾಗಿದೆ. ಹೆಲೆನ್ ಡಿಸೋಜಾ ಅವರ ಮನೆಯಿಂದ ರಾಮಕೃಷ್ಣ ಅವರ ಮನೆವರೆಗೆ ಇಂಟರ್‌ಲಾಕ್ ಅಳವಡಿಸಲಾಗಿದ್ದು ನಾರಾಯಣ ನಾಯ್ಕ ಅವರ ಮನೆಯಿಂದ ನಾಗಬನ ರಸ್ತೆಗೆ ಡಾಮರು ಹಾಕಲಾಗಿದೆ. ನಾರಾಯಣ ನಾಯ್ಕ ಅವರ ಮನೆಯ ನಂತರ ಚರಂಡಿಗೆ ಸ್ಲಾಬ್ ಹಾಕಬೇಕೆಂಬ ಬೇಡಿಕೆ ಇದೆ. ಹಳೆಕೋಟೆ ಅಂಗನವಾಡಿ ಯನ್ನು ದುರಸ್ತಿ ಮಾಡಲಾಗಿದೆ. ಗದ್ದೆಬೈಲಿ ನಲ್ಲಿ ಇಂಟರ್‌ಲಾಕ್ ಹಾಕಿ ರಸ್ತೆ ಮಾಡಲು ಸಿದ್ಧತೆ ನಡೆದಿದೆ. ಕಾಮಗಾರಿ ನಡೆದಿಲ್ಲ.
ಬಾಕಿ ಇಲ್ಲ
ಮೊಗೇರಭವನ, ಮೈಲಾರೇಶ್ವರ ದೇವಸ್ಥಾನ, ರಾಯಲ್ ಸಭಾಭವನ ಬಳಿ ಚರಂಡಿ ಕಾಮಗಾರಿ ಮಾಡಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ಗ್ಯಾರೇಜ್ ನಂತರ ಸ್ವಲ್ಪ ಸಮಸ್ಯೆ ಇದೆ.
– ರಾಧಾಕೃಷ್ಣ, ಸ್ಥಳೀಯರು
2 ಕೋ. ರೂ. ಅನುದಾನ ಬೇಕು
ನಮ್ಮ ವಾರ್ಡಿನಲ್ಲಿರುವ ತೋಡುಗಳಿಗೆ ಮುಚ್ಚಿಗೆ ಹಾಕಿ ರಸ್ತೆಯಾಗಿಸಬೇಕಿದೆ. ಗದ್ದೆಬೈಲಿನಲ್ಲಿ ರಸ್ತೆಗೆ ಇಂಟರ್‌ಲಾಕ್ ಹಾಕಬೇಕಿದೆ. ಬೇಡಿಕೆ ಇರುವ ಎಲ್ಲ ಕಾಮಗಾರಿ ಮಾಡಬೇಕಾದರೆ ಇನ್ನೂ 2 ಕೋ.ರೂ. ಅನುದಾನ ಬೇಕು. ಈ ಬಾರಿ 50ರಿಂದ 60 ಲಕ್ಷ ರೂ.ಗಳ ಕಾಮಗಾರಿ ಮಾಡಲಾಗಿದೆ.
– ಶಕುಂತಲಾ ಗುಲ್ವಾಡಿ, ಸದಸ್ಯರು, ಪುರಸಭೆ
ದೀಪದ ಬೆಳಕಿಲ್ಲ
ಬೀದಿ ದೀಪ ಸರಿ ಇರುವುದಿಲ್ಲ. ಚರಂಡಿಯನ್ನು ಮಳೆಗಾಲಕ್ಕೆ ಮೊದಲೇ ದುರಸ್ತಿ ಮಾಡಲಾಗಿದೆ. ಹಾಗಾಗಿ ನೀರು ಹರಿಯುವ ಸಮಸ್ಯೆ ಇಲ್ಲ.
– ಕೃಷ್ಣಮೂರ್ತಿ, ಸ್ಥಳೀಯರು
ಅನುದಾನ ಕೊರತೆ
ಹಳೆಯ ಆಡಳಿತ ಮಾಡಿದ ಕಾಮಗಾರಿಗಳಿವೆ. ಈ ಆಡಳಿತದ ಅವಧಿಯಲ್ಲಿ ಅಂತಹ ನಿರೀಕ್ಷಿತ ಕಾಮಗಾರಿ ನಡೆಯುವಷ್ಟು ಅನುದಾನ ಬಂದಂತಿಲ್ಲ. ಮೂಲಸೌಕರ್ಯ ಪರವಾಗಿಲ್ಲ. ಬಂದ ಅನುದಾನದ ಬಳಕೆಯಾಗಿದೆ. ಹೊಸ ಅನುದಾನ ಬಂದಿಲ್ಲ.
– ಅರುಣ್ ಕುಮಾರ್ ಬಾಣ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.