ಕೆರೆಗಳ ಹೂಳೆತ್ತಿ ಸುವ್ಯವಸ್ಥಿತಗೊಳಿಸಿ
ಕಾಂಕ್ರೀಟ್ ಹಾಕಿ ರಸ್ತೆ ಅಭಿವೃದ್ಧಿಗೊಳಿಸಿ
Team Udayavani, Feb 27, 2020, 5:41 AM IST
ಕುಂದಾಪುರ: ನಂದಿಕೇಶ್ವರ ದೇವಸ್ಥಾನ ಬಳಿ ಮಣ್ಣಿನ ರಸ್ತೆಯಿದೆ. ಸ್ವಲ್ಪ ದೂರವರೆಗೆ ಈಚೆಗೆ ಕಾಂಕ್ರೀಟ್ ರಸ್ತೆಯಾಗಿದೆ. ದೇವಸ್ಥಾನವರೆಗೆ ಕಾಂಕ್ರಿಟ್ ರಸ್ತೆ ಮಾಡಿದರೆ ಕೆಲವು ಮನೆಗಳಿಗೆ ದಾರಿಯಾಗುತ್ತದೆ. ದೇವಸ್ಥಾನಕ್ಕೆ ಬರುವವರಿಗೂ ರಸ್ತೆ ಬೇಕಿದೆ. ಮಣ್ಣಿನ ರಸ್ತೆಯ ಧೂಳು ಆಚೀಚೆ ಮನೆಗಳನ್ನು ತುಂಬುವುದು ತಪ್ಪುತ್ತದೆ. ಅಂದ ಹಾಗೆ ಪುರಸಭೆ ಸದಸ್ಯರ ಮನೆಯೂ ಇದೇ ಪರಿಸರದಲ್ಲಿ ಇದೆ. ಹಾಗಾಗಿ ಕಾಮಗಾರಿ ಆಗಬಹುದು ಎಂಬ ನಿರೀಕ್ಷೆ ಜನರಲ್ಲಿದ್ದರೆ ನನ್ನ ಮನೆಗೆ ಮೊದಲ ಆದ್ಯತೆ ನೀಡಿದೆ ಎಂಬ ಅಪವಾದ ಬರಬಾರದು ಎಂಬ ಕಾಳಜಿ ಸದಸ್ಯರಿಗೆ ಇದೆ. ಇದರಿಂದಾಗಿ ವಿಳಂಬವಾಗುತ್ತಿದೆ. ಅದೇನೇ ಇದ್ದರೂ ಸದ್ಯ ಅನುದಾನವೂ ಇಲ್ಲ ಅಧಿಕಾರವೂ ಇಲ್ಲ ಎಂಬ ಸ್ಥಿತಿ ಇದೆ.
ಕಲ್ಲಾಗರ ವಾರ್ಡ್‌ನಲ್ಲಿ ಸುದಿನ ಸುತ್ತಾಟ ಸಂದರ್ಭ ಅನೇಕ ವಾರ್ಡ್ ಗಳಲ್ಲಿ ಕೇಳಿಬಂದ ಸಮಸ್ಯೆಗಳೇ ಇಲ್ಲೂ ಮಾರ್ದನಿಸಿದವು.
ಕೆರೆಗಳ ಹೂಳೆತ್ತಿ
ಬಿ.ಸಿ.ಆರ್. ರಸ್ತೆ ಬಳಿ ಇರುವ ಕೆರೆ, ಅಮೃತೇಶ್ವರಿ ಆಸ್ಪತ್ರೆ ಬಳಿಯ ಕೆರೆಗಳು ಪಾಳುಬಿದ್ದಂತೆ ಇದ್ದು ಹೂಳು ತುಂಬಿದೆ. ಅದನ್ನು ಹೂಳೆತ್ತಿ ಶುಚಿಯಾದ ನೀರು ತುಂಬಿ ಉಳಿಯುವಂತೆ ಮಾಡಿದರೂ ಸಾಕಷ್ಟು ಜನರಿಗೆ ಪ್ರಯೋಜನಕಾರಿಯಾದೀತು.
ಚರಂಡಿ ಬೇಕಿದೆ
ಚರಂಡಿ ಇಲ್ಲದ ಕಾರಣ ಕೆಲವೆಡೆ ಮನೆಗಳ ನೀರು ಹೋಗಲೇ ವ್ಯವಸ್ಥೆ ಇಲ್ಲ. ಒಳಚರಂಡಿ ಕಾಮಗಾರಿ ಆಗಿದೆ. ಆದರೆ ಹೊಸದಾಗಿ ನಿರ್ಮಾಣಗೊಂಡ ಇನ್ನೂ ಅನೇಕ ಮನೆಗಳಿಗೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಇರುವ ಚರಂಡಿಗೆ ಸ್ಲಾéಬ್ ಅಳವಡಿಸಿದರೆ ರಸ್ತೆಯೂ ಅಗಲವಾಗುತ್ತದೆ. ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ಜನರ ಅಭಿಮತ. ವರ್ಷದಿಂದ ವರ್ಸಕ್ಕೆ ಚರಂಡಿಯ ಗಾತ್ರವೂ ಕಿರಿದಾಗುತ್ತಿದೆ. ಕೆಲವೆಡೆ ಅಗಲವಾಗಿ, ಕೆಲವೆಡೆ ಕಿರಿದಾಗಿ ಚರಂಡಿ ಇರುವ ಕಾರಣ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲ. ಚರಂಡಿಯಲ್ಲಿ ಕಸ, ಕಡ್ಡಿ, ತ್ಯಾಜ್ಯ, ಹೂಳು ತುಂಬುವ ಕಾರಣ ಮಳೆಗಾಲದ ನೀರೆಲ್ಲ ರಸ್ತೆಯಲ್ಲೇ ತುಂಬಿರುತ್ತದೆ. ಮನೆಗಳ ಅಂಗಳಕ್ಕೂ ಇದೇ ಮಳೆನೀರು ತುಂಬಿದ ಕೆಟ್ಟ ಅನುಭವ. ಚರಂಡಿ ನೀರಿನ
ಕಸಗಳೆಲ್ಲ ಮನೆಗಳ ಮುಂದೆ. ಪ್ರತಿ ಯೊಂದಕ್ಕೂ ಪುರಸಭೆಯನ್ನು ದೂರುವ ಬದಲು ಸಾರ್ವಜನಿಕರು ಕೂಡ ಸ್ವತ್ಛತೆಗೆ ಆದ್ಯತೆ ನೀಡಿದರೆ ಸಮಸ್ಯೆ ಕಡಿಮೆಯಾಗು ತ್ತದೆ ಎನ್ನುತ್ತಾರೆ ಊರಿನ ಜನ.
ಅಂಚಿಗೆ ಮಣ್ಣು ಹಾಕಿಲ್ಲ
ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಆದರೆ ಅದರ ಅಂಚಿಗೆ ಮಣ್ಣು ಹಾಕಿಲ್ಲ. ಇದರಿಂದಾಗಿ ಮಕ್ಕಳು ರಸ್ತೆಯ ಅಂಚು ತಾಗಿ ಗಾಯ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಇದರ ಕುರಿತು ಪುರಸಭೆ ಅಧಿಕಾರಿಗಳು, ಎಂಜಿನಿಯರ್‌ಗೆ ಹೇಳಿದಾಗ ಅವರು ಉಡಾಫೆ ಉತ್ತರ ನೀಡುತ್ತಾರೆ ಎನ್ನುತ್ತಾರೆ ಸ್ಥಳೀಯರು.
ತೋಡಿಗೆ ತಡೆಗೋಡೆ
ಈ ಭಾಗದಲ್ಲಿ ಹರಿಯುವ ಒಂದು ತೋಡಿಗೆ ತಡೆಗೋಡೆ ಕಟ್ಟಬೇಕೆಂಬ ಬೇಡಿಕೆಯಿದೆ. ಇದಕ್ಕೆ ಸ್ಲಾಬ್ ಹಾಕಿದರೆ ತ್ಯಾಜ್ಯ ನೀರು ಹರಿಯುವ ವಾಸನೆ ಬರುವುದಿಲ್ಲ. ಸೊಳ್ಳೆ ಉತ್ಪತ್ತಿಯಾಗುವುದಿಲ್ಲ. ರಸ್ತೆಯೂ ನಿರ್ಮಾಣವಾದಂತಾಗುತ್ತದೆ. ಆದರೆ ಅದಕ್ಕೆ ದೊಡ್ಡಮಟ್ಟದ ಅನುದಾನ ಅಗತ್ಯವಿದೆ. ಈಗಿನ ಸದಸ್ಯರ ಅವಧಿಯಲ್ಲಿ ಅಧಿಕಾರ ಬರದೇ ಇದ್ದರೂ ಎರಡು ಮೂರು ರಸ್ತೆಗಳ ಕಾಮಗಾರಿಯಾಗಿದೆ.
ಆಗಬೇಕಾದ್ದೇನು?
ಚರಂಡಿ ನಿರ್ಮಾಣವಾಗಬೇಕು
ಕೆರೆಗಳ ಹೂಳೆತ್ತಬೇಕು
ರಸ್ತೆ ನಿರ್ಮಾಣವಾಗಬೇಕು
ಸ್ಪಂದನೆ
ಬಿ.ಎಚ್.ಎಂ. ರಸ್ತೆ, ನಂದಿಬೆಟ್ಟ ಬಳಿ ರಸ್ತೆ, ಕಲ್ಲಾಗರ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಕೆರೆಗಳ ಅಭಿವೃದ್ಧಿ, ತೋಡಿಗೆ ತಡೆಗೋಡೆ ಕಟ್ಟಿ ಸ್ಲಾಬ್ ಅಳವಡಿಕೆಗೆ ಜನರಿಂದ ಬೇಡಿಕೆ ಇದೆ. ಬೀದಿದೀಪ ಸಮಸ್ಯೆ ಸೇರಿದಂತೆ ಜನರಿಂದ ತುರ್ತು ಸ್ಪಂದನೆ ಅಗತ್ಯವಿರುವ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಅಧಿಕಾರ ಇಲ್ಲ ಎಂದು ಸುಮ್ಮನೇ ಕೂರದೇ ಸಾರ್ವಜನಿಕರ ಸಮಸ್ಯೆಗಳನ್ನು ಪುರಸಭೆಯ ಗಮನಕ್ಕೆ ತಂದು ಪರಿಹರಿಸಲಾಗುತ್ತಿದೆ. ವಾರ್ಡ್‌ನಲ್ಲಿ ತಿರುಗಾಟ ಮಾಡುತ್ತಿರುತ್ತೇವೆ.
-ಪ್ರೇಮಲತಾ ರಮೇಶ್ ಪೂಜಾರಿ,
ಸದಸ್ಯರು, ಪುರಸಭೆ
ಕೆರೆಗಳ ಹೂಳೆತ್ತಿ
ವಾರ್ಡ್‌ನಲ್ಲಿರುವ ಕೆರೆಗಳ ಕಡೆಗೆ ಗಮನ ಹರಿಸಬೇಕು.ಬಿ.ಸಿ.ಆರ್.ರಸ್ತೆ ಬಳಿ ಇರುವ ಕೆರೆ, ಅಮೃತೇಶ್ವರಿ ಆಸ್ಪತ್ರೆ ಬಳಿಯ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಗೊಳಿಸಬೇಕಿದೆ. ಮಳೆಗಾಲ,ಬೇಸಗೆ ಎನ್ನದೇ ಅವು ಜನರಿಗೆ ಪ್ರಯೋಜನಕ್ಕೆ ದೊರೆಯಲಿದೆ.ನೀರಿಂಗಿಸಲು ಕೂಡಾ ಸಹಕಾರಿಯಾಗಲಿದೆ.
-ಗಣೇಶ್‌ದಾಸ್,ಕಲ್ಲಾಗರ ರಸ್ತೆ
ಸ್ಲಾಬ್ ಹಾಕಿ
ರಸ್ತೆ ಬದಿಯ ಚರಂಡಿಗೆ ಸ್ಲಾಬ್ ಅಳವಡಿಸಿ ದರೆ ರಸ್ತೆಯೂ ಅಗಲವಾಗು ತ್ತದೆ. ಮಳೆಗಾಲಕ್ಕೆ ಮೊದಲೇ ಚರಂಡಿಯ ಹೂಳೆತ್ತಬೇಕು.ಇಲ್ಲದಿದ್ದರೆ ರಸ್ತೆಗಳು ಮಳೆನೀರಿನಿಂದ ಆವೃತವಾಗಿರುತ್ತದೆ. ಸಮೀಪದ ಮನೆಗಳಿಗೂ ತೊಂದರೆ ಯಾಗುವುದು ತಪ್ಪುತ್ತದೆ.
-ಸಂತೋಷ್,ಸಿದ್ಧಿವಿನಾಯಕ ಜನರಲ್ ಸ್ಟೋರ್, ಕಲ್ಲಾಗರ ರಸ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.