ಒಣಗಿದ ಮದಗ: ಉದ್ಯೋಗ ಖಾತ್ರಿ ಮೂಲಕ ಹೂಳೆತ್ತಲು ಸಿಪಿಎಂ ಒತ್ತಾಯ
Team Udayavani, Jun 6, 2019, 6:10 AM IST
ಕುಂದಾಪುರ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶಾಲವಾದ ಮದಗ ಹೇರಿಕೆರೆಯಲ್ಲಿ ಬರಗಾಲದಿಂದಾಗಿ ಕೆರೆ ಒಣಗಿ ಬರಡಾಗಿದ್ದು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿತು.
ಈ ಕೆರೆಯನ್ನು ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತಬೇಕು. ಇದಕ್ಕಾಗಿ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು ಎಂದು ನಿಯೋಗ ಹೇಳಿದೆ.
ಸರಕಾರದ ನಿರ್ಲಕ್ಷ್ಯಕ್ಕೆ ಖಂಡನೆ
ಕುಂದಾಪುರ ತಾಲೂಕಿನ ಬಸೂÅರು ಗ್ರಾಮದ ಸುತ್ತಮುತ್ತಲಿರುವ ಹಿರೇಬೈಲು, ನಚ್ಚಾರು, ಉಳ್ಳೂರು, ಸಾಂತಾವರ, ಸೂರಣಿಗಿಗಳ ಸ್ಥಳಗಳ ಗದ್ದೆಗಳಿಗೆ ನೀರುಣಿಸುತ್ತಿದ್ದ ಹೇರಿಕೆರೆ ಉಳಿಸುವ ಜವಾಬ್ದಾರಿಗೆ ಎಲ್ಲರೂ ಕೈ ಜೋಡಿಸಬೇಕಿದೆ. 45 ಎಕರೆಯ ವಿಸ್ತಾರ ಹೊಂದಿ ಜಿಲ್ಲೆಯಲ್ಲೇ ಅತಿ ದೊಡ್ಡದಾದ ಈ ಕೆರೆ ಬರಡಾಗಿದೆ. 20 ವರ್ಷದಿಂದ ಹೂಳೆತ್ತಿಲ್ಲ ಎಂದು ಸ್ಥಳೀಯರು ಹೇಳಿದರು.
ಸಾಂತವಾರ ಗ್ರಾ. ಪಂ. ಸದಸ್ಯ ಸಂತೋಷ ಅವರು ಹಿಂದಿನ ಸರಕಾರದ ಸಣ್ಣ ನೀರಾವರಿ ಸಚಿವರಿಗೆ ಮನವಿ ನೀಡಲಾಗಿದ್ದರೂ ಸರಕಾರದ ನಿರ್ಲಕ್ಷ್ಯದಿಂದ ಅದು ಸಾಧ್ಯವಾಗಿಲ್ಲ ಎಂದರು. ಸಂಬಂಧ ಪಟ್ಟ ಜಿಲ್ಲಾ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನವಹಿಸಬೇಕೆಂದು ಸ್ಥಳೀಯ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಸಣ್ಣ ದೇವಾಡಿಗ ಹೇಳಿದರು.
ಕೋಳ್ಕರೆಯೂ ಬರಡು
ಬಸೂÅರು ಗ್ರಾಮದ ಸುತ್ತಮತ್ತಲ ಹಳ್ಳಿಗಳ ಜನರಿಗೆ ಆಸರೆಯಾಗಿದ್ದ ಕೋಳ್ಕೆರೆ ಕೂಡ ದುರಸ್ತಿಯಾಗಿಲ್ಲ ಈ ಬಗ್ಗೆಯೂ ಸರಕಾರದ ಗಮನ ಸೆಳೆಯಲು ಹೋರಾಟ ರೂಪಿಸುವುದಾಗಿ ನಿಯೋಗದವರು ಹೇಳಿದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕಾರ್ಮಿಕ ಮುಖಂಡ ಸುರೇಶ ಕಲ್ಲಾಗರ, ಮಹಾಬಲ ವಡೇರಹೋಬಳಿ ನಿಯೋಗದಲ್ಲಿದ್ದರು.
ಸ್ಥಳೀಯರಾದ ಸುಧಾಕರ, ಜಗನ್ನಾಥ, ದೇವಕಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.