ಕುಡಿಯುವ ನೀರು, ನೆರೆ ನಿರ್ವಹಣೆ ಸಭೆ, ಶಾಸಕರಿಗೆ ಅನುಮತಿ ನೀಡುವಂತೆ ಆಗ್ರಹ
Team Udayavani, May 8, 2019, 6:07 AM IST
ಉಡುಪಿ: ರಾಜ್ಯದಲ್ಲಿ ಕುಡಿಯುವ ನೀರು ಮತ್ತು ನೆರೆ ನಿರ್ವಹಣೆಯ ಬಗ್ಗೆ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಶಾಸಕರಿಗೆ ಭಾಗವಹಿಸಲು ಅನುಮತಿ ನೀಡಬೇಕೆಂದು ಶಾಸಕ ರಘುಪತಿ ಭಟ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆಗೆ ಸಂಬಂಧಿಸಿ ಸಭೆ ಕರೆಯುವಂತೆ ಆನೇಕ ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದರೂ ಪ್ರಯೋಜನವಾ ಗಿಲ್ಲ. ನೀರಿನ ರೇಷನಿಂಗ್ ಆರಂಭವಾದ ಅನಂತರ ಎತ್ತರ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಟ್ಯಾಂಕರ್‌ಗಳಲ್ಲಿ ನೀರು ಕೊಡುವಂತೆ ಮನವಿ ಮಾಡಿದ್ದೇವೆ. ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಯತ್ತ ಕೈತೋರಿಸುತ್ತಾರೆ; ಜಿಲ್ಲಾಧಿಕಾರಿ ನಗರಸಭೆಯತ್ತ ಕೈ ತೋರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಆಸಕ್ತಿಯಿಲ್ಲ
ನೀರಿನ ಸಮಸ್ಯೆ ಪರಿಹಾರಕ್ಕೆ ಯಾರೂ ಗಂಭೀರ ಪ್ರಯತ್ನ ಮಾಡುತ್ತಿಲ್ಲ. 2 ತಿಂಗಳ ಹಿಂದೆಯೇ ಶೀರೂರು ಡ್ಯಾಂ, ಮಾಣಾç, ಭಂಡಾರಿಗುಂಡಿ ಮತ್ತು ಪುತ್ತಿಗೆ ಮಠದ ಬಳಿಯಿರುವ ಗುಂಡಿಯಲ್ಲಿ 25 ದಿನಗಳಿಗೆ ಬೇಕಾಗುವಷ್ಟು ನೀರು ಸಂಗ್ರಹ ಇದ್ದು, ಇಲ್ಲಿರುವ ನೀರನ್ನು ಪಂಪಿಂಗ್ ಮಾಡಿದರೆ ಸಮಸ್ಯೆಗೆ ಸ್ವಲ್ಪಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಸ್ವರ್ಣಾ ನದಿ 2ನೇ ಹಂತದ ಯೋಜನೆಯಲ್ಲಿ ತಾಂತ್ರಿಕ ದೋಷವಿದ್ದು, ಯೋಜನೆ ಸಮರ್ಪಕ ವಾಗಿಲ್ಲ ಎಂದು ಬಿಂಬಿಸಲು ಕೃತಕ ನೀರಿನ ಅಭಾವ ಸೃಷ್ಟಿಸಲಾಗಿದೆಯೇ ಎಂಬ ಗುಮಾನಿ ಇದೆ. ಹಿಂದೆ ಯೋಜನೆ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ ಅಧಿಕಾರಿಯೊಬ್ಬರು ಈಗ ಆಯಕಟ್ಟಿನ ಜಾಗದಲ್ಲಿದ್ದಾರೆ. ಹೀಗಾಗಿ ನೀರಿನ ಸಮಸ್ಯೆಗೆ ನಿಧಾನಗತಿ ಸ್ಪಂದನೆ ಹಿಂದೆ ಷಡ್ಯಂತ್ರವಿದೆಯೇ ಎಂಬ ಅನುಮಾನ ಇದೆ ಎಂದರು.
ಚುನಾವಣೆ ನಡೆಸಿ
ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ಅಸಹಾಯಕರಾಗಿದ್ದೇವೆ. ಆದರೆ ಉಡುಪಿ ನಗರಸಭೆಗೆ ಮೀಸಲಾತಿ ಸಮಸ್ಯೆ ಇಲ್ಲ. ಯಾರೂ ಕೋರ್ಟ್‌ಗೆ ಹೋಗಿಲ್ಲ. ಅಧ್ಯಕ್ಷ ಗಾದಿಗೆ ನೀತಿ ಸಂಹಿತೆ ಮುಗಿದ ಬಳಿಕ ಚುನಾವಣೆ ನಡೆಸಬೇಕು ಎಂದರು.
ಪ್ರಭಾಕರ ಪೂಜಾರಿ, ಮಂಜುನಾಥ ಮಣಿಪಾಲ, ಗಿರೀಶ್ ಅಂಚನ್, ಗಿರಿಧರ ಆಚಾರ್ಯ ಉಪಸ್ಥಿತರಿದ್ದರು.
ಸಾಮೂಹಿಕ ಪ್ರಾರ್ಥನೆ
ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮೇ 10ರಂದು ಸಂಜೆ 6ಕ್ಕೆ ಮಳೆಗಾಗಿ ಪ್ರಾರ್ಥಿಸಿ ಕೃಷ್ಣ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ, ವರುಣ ಮಂತ್ರ ಜಪ ಹಮ್ಮಿಕೊಳ್ಳಲಾಗಿದೆ. ಎಲ್ಲ ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ. ನಗರದ ವಿವಿಧ ಚರ್ಚ್, ಮಸೀದಿಗಳಲ್ಲಿಯೂ ಪ್ರಾರ್ಥನೆ ಸಲ್ಲಿಸುವಂತೆ ವಿನಂತಿಸಲಾಗಿದೆ ಎಂದರು.
ಇಂದಿನಿಂದ ಟ್ಯಾಂಕರ್ ನೀರು ಕೊಡಿ
ಎರಡು ತಿಂಗಳ ಹಿಂದೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಟೆಂಡರ್ ಆಗಿದ್ದರೂ ಜಿಲ್ಲಾಧಿಕಾರಿಗಳಿಂದ ಅನುಮತಿ ಬಾಕಿ ಇದೆ. ಕೊಡಲೇ ಅನುಮತಿ ನೀಡಿ ಮೇ 8ರಿಂದಲೇ ಟ್ಯಾಂಕರ್ ನೀರು ಸರಬರಾಜು ಪ್ರಾರಂಭಿಸಬೇಕು.
-ರಘುಪತಿ ಭಟ್, ಉಡುಪಿ ಶಾಸಕ
ಮನವಿ
– ಡ್ಯಾಂನಲ್ಲಿ ಶೇಖರಣೆಯಾದ ಮರಳು ತೆರವುಗೊಳಿಸಿ
– ಬಂಡೆ ಒಡೆದು ನೀರಿನ ಶೇಖರಣೆಗೆ ದಾರಿ ಮಾಡಿ
– ನಗರದ ಜನತೆಗೆ ತತ್‌ಕ್ಷಣ ಟ್ಯಾಂಕರ್ ನೀರು ಸರಬರಾಜು ಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.