ಹೊಸಾಡು: ಕುಡಿಯುವ ನೀರಿನದ್ದೇ ಪ್ರಮುಖ ಸಮಸ್ಯೆ
Team Udayavani, Jan 31, 2019, 1:00 AM IST
ತ್ರಾಸಿ: ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಭಗತ್‌ನಗರ, ಖಾರ್ವಿಕೆರೆ ಗ್ರಾಮಸ್ಥರಿಗೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ಇಲ್ಲಿಯ 90 ಮನೆಗಳಿಗೆ ಒಂದೇ ಸರಕಾರಿ ಬಾವಿ ಇದೆ. ಒಂದು ಬೋರ್‌ವೆಲ್ ಕೊರೆಸಿದ್ದರೂ ಅದರಲ್ಲಿ ನೀರಿಲ್ಲ. 7-8 ಮನೆಗಳಲ್ಲಿ ಸ್ವಂತ ಬಾವಿಗಳಿದ್ದರೂ, ಹೆಚ್ಚಿನದ್ದು ಬತ್ತಿ ಹೋಗಿದೆ. ಖಾರ್ವಿಕೆರೆಯಲ್ಲಿರುವ ಗ್ರಾ.ಪಂ. ಬಾವಿಯಿಂದ ಟ್ಯಾಂಕ್‌ಗೆ ನೀರು ಹರಿಸಲಾಗುತ್ತದೆ. ಇದರಿಂದ ಕೇವಲ 1ಗಂಟೆ ಮಾತ್ರ ನೀರು ಸಸಿಗುತ್ತದೆ. ಕಳೆದ ಬಾರಿ ಮೇ ವರೆಗೆ ಬಾವಿಯಲ್ಲಿ ನೀರಿತ್ತು. ಈ ವರ್ಷ ನೀರು ಆಳಕ್ಕೆ ಹೋಗಿದ್ದು ಕೆಲವೇ ದಿನಗಳಲ್ಲಿ ಬತ್ತಿ ಹೋಗುವ ಸಂಭವವಿದೆ.
2 ದಿನಕ್ಕೊಮ್ಮೆ ನೀರು
ಭಗತ್‌ನಗರದಲ್ಲಿರುವ ಓವರ್ ಹೆಡ್ ಟ್ಯಾಂಕ್‌ನಲ್ಲಿ 25 ಸಾವಿರ ಲೀಟರ್ ನೀರು ಹಿಡಿಯ ಬಹುದಾಗಿದ್ದರೂ 20 ಸಾವಿರ ಲೀಟರ್ ನೀರು ಮಾತ್ರ ತುಂಬುತ್ತಿದೆ. 100 ಮನೆಗಳಿಗೆ ಹೆಚ್ಚೆಂದರೆ 5-6 ಕೊಡ ನೀರು ಮಾತ್ರ ಸಿಗುತ್ತಿದೆ. ತಗ್ಗು ಪ್ರದೇಶದಲ್ಲಿದ್ದವರಿಗೆ ತುಸು ಹೆಚ್ಚು ಸಿಗುತ್ತದೆ. ಒಂದು ದಿನ ಭಗತ್‌ನಗರ ಹಾಗೂ ಮತ್ತೂಂದು ದಿನ ಖಾರ್ವಿಕೆರೆಗೆ 2 ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ.
ನೀರಿನ ಸಮಸ್ಯೆ ಗಂಭೀರ
ಇಲ್ಲಿನ ಇಷ್ಟೂ ಮನೆಗಳಿಗೆ ಒಂದೇ ಬಾವಿಯಿಂದ ನೀರು ಪೂರೈಸಬೇಕಾಗಿ ರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಅದೂ ಹೆಚ್ಚು ನೀರು ಸಿಗುವುದಿಲ್ಲ. ಶಾಶ್ವತ ಪರಿಹಾರ ಎನ್ನುವಂತೆ ಬೋರ್‌ವೆಲ್ ಅಥವಾ ತೆರೆದ ಬಾವಿ ತೋಡಿಸಿದರೆ ಸಮಸ್ಯೆ ನಿವಾರಣೆಯಾಗಬಹುದು.
– ಸುರೇಶ್, ಸ್ಥಳೀಯರು
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.