ಬೇಸಗೆ ಬೇಗೆಯ ತೀರಿಸಲು ನವಯುಗ ಕಂಪೆನಿಗೆ ದುಂಬಾಲು
Team Udayavani, Apr 12, 2018, 6:25 AM IST
ಪಡುಬಿದ್ರಿ: ಕಡು ಬೇಸಗೆ ಎದುರು ನಡ್ಸಾಲು ಗ್ರಾಮದಲ್ಲಿ ಈಗಾಗಲೇ ತಾರಕಕ್ಕೆ ಮುಟ್ಟಿರುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ತಮಗೆ ತಾತ್ಕಾಲಿಕವಾಗಿಯಾದರೂ ಪೈಪ್ ಲೈನ್ ರಿಪೇರಿ ಮಾಡಿಕೊಡುವಂತೆ ಬುಧವಾರ(ಎ. 11)ದಂದು ಪಡುಬಿದ್ರಿ ಗ್ರಾ. ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ನವಯುಗ ಅಧಿಕಾರಿ ಶಂಕರ್ ರಾವ್ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ.
ಈ ಕುರಿತು ಸ್ಪಂದಿಸಿದ ನವಯುಗ ಅಧಿಕಾರಿ ತಮ್ಮಲ್ಲಿ 10 ದಿನಗಳ ಕಾಲಾವಧಿಯನ್ನು ಬಯಸಿದರು. ಆದರೆ ಅದು ಸಾಧ್ಯವಿಲ್ಲವೆಂದಾಗ ಮುಂದಿನ ನಾಲ್ಕು ದಿನಗಳಲ್ಲಿ ತಮ್ಮ ಎಂಜಿನಿಯರ್ ಬರಲಿದ್ದಾರೆ. ಅವರ ಸಹಾಯ ಪಡೆದು ತುರ್ತು ರಿಪೇರಿ ಕಾಮಗಾರಿ ಮುಗಿಸಿ ನೀರು ಸರಬರಾಜಿಗೆ ಅನುವು ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿರುವುದಾಗಿ ಪಿಡಿಒ “ಉದಯವಾಣಿ’ಗೆ ತಿಳಿಸಿದರು.
42ಲಕ್ಷ ರೂ. ಗಳ ಅಂದಾಜು ಪಟ್ಟಿ ರವಾನೆ
ಅಬ್ಬೇಡಿಯ ಬೋರ್‌ವೆಲ್ ಒಂದರಿಂದ ಪಡುಬಿದ್ರಿ ಪೇಟೆ, ಆಸುಪಾಸಿನ ಮನೆಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್‌ಲೈನ್ ತೊಂದರೆಗೊಳಗಾಗಿ ಈ ಬಾರಿ ತತ್ತಾÌರವುಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಈ ನೀರಿನ ಪೈಪ್‌ಲೈನ್‌ಗಳೆಲ್ಲ ಒಡೆದು ಹೋಗಿವೆ. ಹಾಗಾಗಿ ಎರ್ಮಾಳು ಕಲ್ಸಂಕದಿಂದ ಪಡುಬಿದ್ರಿ ಬೀಡುವರೆಗಿನ ಪೈಪ್‌ಲೈನ್ ಮತ್ತು ತೆರೆದ ಬಾವಿಗಳಿಗೆ ಒಟ್ಟು 42ಲಕ್ಷ ರೂ. ಗಳ ಕಾಮಗಾರಿಗಳ ಅಂದಾಜುಪಟ್ಟಿಯನ್ನು ಪಂಚಾಯತ್‌ರಾಜ್ ಎಂಜಿನಿಯರ್ ಮೂಲಕ ತಯಾರಿಸಿ ಈಗಾಗಲೇ ನವಯುಗ ಕಂಪೆನಿಗೆ ನೀಡಲಾಗಿದೆ. ಅದನ್ನು ನವಯುಗ ಕಂಪೆನಿ ಅಧಿಕಾರಿಗಳು ಬೆಂಗಳೂರಿನಲ್ಲಿನ ತಮ್ಮ ಮೇಲಧಿಕಾರಿಗಳಿಗೆ ರವಾನಿಸಿದ್ದು ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ನವಯುಗ ಕಂಪೆನಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರೊಂದಿಗೆ ಈ ಕಡು ಬೇಸಗೆಯಲ್ಲೂ ನೀರಿಲ್ಲದ ಕಾಲದಲ್ಲಿ ವೃಥಾ ಕಾಲಹರಣವನ್ನು ಗೈಯ್ಯಲಾಗುತ್ತಿದೆ.
ಮುಹೂರ್ತ “ಫಿಕ್ಸ್’
ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಯಸಿದ್ದಂತೆ ಮುಂದಿನ ನಾಲ್ಕು ದಿನಗಳೊಳಗಾಗಿ ಅಬ್ಬೇಡಿ – ಪಡುಬಿದ್ರಿ ಪೇಟೆಯ ಪೈಪ್ ಲೈನ್ ದುರಸ್ತಿ ಕಾಮಗಾರಿಗೀಗ ಮುಹೂರ್ತ “ಫಿಕ್ಸ್’ ಮಾಡಲಾಗಿದೆ. ಈ ತುರ್ತು ಕಾಮಗಾರಿ ಪೂರ್ಣಗೊಂಡಲ್ಲಿ ಪಡುಬಿದ್ರಿ ಜನತೆಗೆ ಕುಡಿಯಲು ನೀರು ಲಭ್ಯವಾಗಲಿದೆ.
ತಾನು ಇದನ್ನು ಎದುರು ನೋಡುತ್ತಿರುವುದಾಗಿಯೂ ಮುಂದೆ ಇದಕ್ಕೂ ನವಯುಗ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ತಾನು ವರದಿ ಮಾಡುವುದಾಗಿಯೂ ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಹೇಳಿದ್ದಾರೆ.
ನಷ್ಟ ಭರಿಸಬೇಕೆಂಬ ನಿಯಮಾವಳಿ
ಹೆದ್ದಾರಿ ಕಾಮಗಾರಿಯ ವೇಳೆ ಯಾವುದೇ ಪಂಚಾಯತ್ ನಷ್ಟಗಳನ್ನು ಗುತ್ತಿಗೆದಾರ ಕಂಪೆನಿ ಭರಿಸಿಕೊಡಬೇಕೆಂಬ ನಿಯಮಾವಳಿಯನ್ನು ಗುತ್ತಿಗೆಯ ಆದೇಶ ಪತ್ರದಲ್ಲಿ ನಮೂದಿಸಲಾಗಿರುತ್ತದೆ. ಆದ್ದರಿಂದ ಪಿಡಿಒ ಮಾತುಕತೆಯ ವೇಳೆ ಮೇ ತಿಂಗಳಾಂತ್ಯದಲ್ಲಿ ಪಡುಬಿದ್ರಿಯ ಹೆದ್ದಾರಿ ಕಾಮಗಾರಿ ಮುಗಿದು ಸರ್ವೀಸ್ ರಸ್ತೆ ಕಾಮಗಾರಿಯು ಜೂನ್, ಜುಲೈ ತಿಂಗಳಲ್ಲಿ ಮುಗಿಯಲಿದ್ದು , ಆ ವೇಳೆಯಲ್ಲೇ ಪಡುಬಿದ್ರಿ ಪಂಚಾಯತ್ ನೀರಿನ ಪೈಪ್‌ಲೈನ್ ಮತ್ತು ತೆರದ ಬಾವಿಗಳನ್ನು ತಾವು ಪೂರೈಸಲಿರುವುದಾಗಿ ನವಯುಗ ಅಧಿಕಾರಿ ಶಂಕರ ರಾವ್ ತಿಳಿಸಿದ್ದಾರೆ.
– ಆರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.