ಕುಡಿಯುವ ನೀರಿನ ನೆಪ: ಮರಳುಗಾರಿಕೆ ಆರೋಪ
ಮರಳು ಇರುವ ಕಿಂಡಿ ಅಣೆಕಟ್ಟುಗಳ ಸಂಖ್ಯೆ 4 ಮಾತ್ರ: ಇಲಾಖೆ ವರದಿ
Team Udayavani, Jan 30, 2020, 5:16 AM IST
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕಿಂಡಿ ಅಣೆಕಟ್ಟುಗಳಲ್ಲಿ ಹೂಳೆತ್ತಲು ಬೈಂದೂರು ಶಾಸಕರ ನೇತೃತ್ವದಲ್ಲಿ ತೀರ್ಮಾನ ಕೈಗೊಂಡರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದು ಮರಳುಗಾರಿಕೆ ಲಾಬಿಗಾಗಿ ಮಾಡಿದ ವ್ಯರ್ಥ ಪ್ರಯತ್ನ ಎಂಬ ಆರೋಪವೂ ಇದೆ.
ಕುಂದಾಪುರ: ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಲುವಾಗಿ ಕಿಂಡಿ ಅಣೆಕಟ್ಟುಗಳಲ್ಲಿ ಹೂಳೆತ್ತಲು ಬೈಂದೂರು ಶಾಸಕರ ನೇತೃತ್ವದ ಸಭೆಯಲ್ಲಿ ನಡೆದ ತೀರ್ಮಾನ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಈ ಮಧ್ಯೆ ಇದು ಮರಳುಗಾರಿಕೆ ಲಾಬಿಗಾಗಿ ಮಾಡಿದ ವ್ಯರ್ಥ ಪ್ರಯತ್ನ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಕಿಂಡಿ ಅಣೆಕಟ್ಟು
ಪಡುವರಿ 9, ಶಿರೂರು 2, ಯಡ್ತರೆ 13, ಆಜ್ರಿ 4, ಉಪ್ಪುಂದ 11, ಆಲೂರು 26, ಅಂಪಾರು 3, ಗುಲ್ವಾಡಿ 6, ಕಾಲೊ¤àಡು 4, ಕಾವ್ರಾಡಿ 3, ಕೆರ್ಗಾಲ್ 4, ಕಿರಿಮಂಜೇಶ್ವರ 1, ಹೆರಂಜಾಲು 2, ಗುಜ್ಜಾಡಿ 5, ಗಂಗೊಳ್ಳಿ 2, ಚಿತ್ತೂರು 8, ಜಡ್ಕಲ್ 5, ತ್ರಾಸಿ 12, ಹೊಸಾಡು 5, ನಾಡ 8, ಬಿಜೂರು 4, ವಂಡ್ಸೆ 6, ಶಂಕರನಾರಾಯಣ 6, ಸಿದ್ದಾಪುರ 2, ಹಕ್ಲಾಡಿ 2, ಹಟ್ಟಿಯಂಗಡಿ 5, ಕಟ್‌ಬೆಲೂ¤ರು 2, ಹೇರೂರು 2 ಸೇರಿದಂತೆ ಎಲ್ಲ ಪಂಚಾಯತ್‌ಗಳಲ್ಲಿ ಕಿಂಡಿ ಅಣೆಕಟ್ಟುಗಳಿವೆ.
ನಾಲ್ಕರಲ್ಲಷ್ಟೇ ಮರಳು
ಇವಿಷ್ಟು ಕಿಂಡಿ ಅಣೆಕಟ್ಟುಗಳಿದ್ದರೂ ದೊಡ್ಡ ಪ್ರಮಾಣದಲ್ಲಿ ಮರಳು ಇರುವ ಕಿಂಡಿ ಅಣೆಕಟ್ಟುಗಳ ಸಂಖ್ಯೆ 4 ಮಾತ್ರ ಎಂದು ಸಣ್ಣ ನೀರಾವರಿ ಇಲಾಖೆ ವರದಿ ನೀಡಿದೆ. ಪಟ್ಟಿಮಾಡಿದ ಕಿಂಡಿ ಅಣೆಕಟ್ಟುಗಳನ್ನು ಪರಿಶೀಲಿಸಿ ಹೆಮ್ಮಾಡಿ 72 ಸಾವಿರ ಘ. ಮೀ., ಸೇನಾಪುರ 75 ಸಾವಿರ ಘ.ಮೀ.,ಕಿರಿಮಂಜೇಶ್ವರ 26,250 ಘ.ಮೀ., ಕಂಬದಕೋಣೆ 9 ಸಾವಿರ ಘ.ಮೀ. ಮರಳು ಸಂಗ್ರಹ ಇದೆ. ಹಕ್ಲಾಡಿ ತೊಪು ಅಣೆಕಟ್ಟಿನಲ್ಲೂ ಮರಳು ತೆಗೆಯಬಹುದು ಎಂದು ಸೂಚಿಸಲಾಗಿದೆ.
ಹೂಳೆತ್ತುವಿಕೆ
ಕಿಂಡಿ ಅಣೆಕಟ್ಟುಗಳ ಬುಡದಲ್ಲಿ ಹೂಳೆತ್ತಿದರೆ ಸಂಗ್ರಹ ವಾದ ಮರಳು ಸ್ಥಳೀಯವಾಗಿ ಜನರಿಗೆ ಕಡಿಮೆ ದರದಲ್ಲಿ ಉಪಯೋಗಕ್ಕೆ ದೊರೆಯುತ್ತದೆ. ನೀರು ಸಂಗ್ರಹ ಹೆಚ್ಚಾಗುತ್ತದೆ.
ಇ-ಟೆಂಡರ್
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಕಿಂಡಿ ಅಣೆಕಟ್ಟುಗಳ ಹೂಳೆತ್ತಲು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೂಲಕ ಇ-ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಟೆಂಡರ್ ಆಹ್ವಾನಿಸಿ ಆಸಕ್ತರು ಬಿಡ್ ಮಾಡಿ ಅನಂತರ ಅರ್ಹ ಬಿಡ್‌ಗಳನ್ನು ಪರಿಶೀಲಿಸಿ ಆದೇಶ ನೀಡಬೇಕಿದೆ. ಅದಕ್ಕಿನ್ನು ಎಷ್ಟು ಸಮಯ ತಗುಲಲಿದೆ ಎನ್ನುವ ಮಾಹಿತಿ ಇಲ್ಲ.
ಕಿಂಡಿ ಅಣೆಕಟ್ಟುಗಳಲ್ಲಿ ಮರಳು ತೆಗೆದರೆ ಅದು ಸ್ಥಳೀಯವಾಗಿ ಜನರಿಗೆ ಕಡಿಮೆ ದರದಲ್ಲಿ ದೊರೆಯಬಹುದು. ನೀರಿನ ಸಂಗ್ರಹವೂ ಹೆಚ್ಚಬಹುದಾಗಿದೆ.
ಗೊಂದಲ
ಈ ಮಧ್ಯೆ ತಾಲೂಕು ಪಂಚಾಯತ್ ಹಾಗೂ ಗ್ರಾ.ಪಂ.ಗಳಿಗೆ ಈ ಕುರಿತು ಗೊಂದಲಗಳ ಗೂಡೇ ಇದೆ. ಹೂಳೆತ್ತಿದ ಮರಳಿನ ಪ್ರಮಾಣ ಗುರುತಿಸುವುದು ಹೇಗೆ, ಯಾರು ಅದರ ಲೆಕ್ಕಾಚಾರ ಮಾಡಬೇಕು, ಗಣಿ ಇಲಾಖೆಯೇ, ಪಂಚಾಯತ್ ಅಧಿಕಾರಿಗಳೇ, ಸಾಗಾಟದ ಲೆಕ್ಕ ಇಡುವವರು ಯಾರು, ದರ ನಿಗದಿ ಹೇಗೆ ಇತ್ಯಾದಿ ಅನೇಕ ಗೊಂದಲಗಳಿಗೆ ಉತ್ತರ ದೊರೆಯದೇ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಗಣಿ ಇಲಾಖೆಯಂತೂ ಗುಲ್ವಾಡಿ ಅಣೆಕಟ್ಟಿನ ಹೂಳು ಪುರಸಭೆಯವರು ತೆಗೆಯಬೇಕು, ಇತರವುಗಳದ್ದು ಪಂಚಾಯತ್‌ಗಳೇ ತೆಗೆಯಬಹುದು. ತಾ.ಪಂ. ಈ ಕುರಿತು ನಿರ್ಧಾರ, ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅನುಮಾನಗಳಿವೆ
ಯಾಂತ್ರೀಕೃತ ಬಾಗಿಲಿನ ಕಿಂಡಿ ಅಣೆಕಟ್ಟುಗಳ ಬಳಿ ಶೇಖರಣೆಯಾದ ಮರಳಿನಿಂದ ಸಮಸ್ಯೆಯೇನು? ಮರಳು ದಿಬ್ಬಗಳನ್ನು ಗುರುತಿಸಿ ಟೆಂಡರ್ ಕರೆಯಲಿ. ಡ್ರೆಜ್ಜಿಂಗ್ ಮೂಲಕ ಮರಳು ತೆಗೆಯುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಸೃಷ್ಟಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಏಲಂ ಮಾಡಲು ಸೂಚನೆ
ಕುಡಿಯುವ ನೀರಿಗಾಗಿ ಕಿಂಡಿ ಅಣೆಕಟ್ಟುಗಳ ಹೂಳೆತ್ತಿಸಬೇಕು. ಲಭ್ಯವಿರುವ ಮರಳನ್ನು ಗ್ರಾ.ಪಂ. ಮಟ್ಟದಲ್ಲಿ ಏಲಂ ಮಾಡಿ ಕನಿಷ್ಠ ದರದಲ್ಲಿ ಬಡವರಿಗೆ ನೀಡಬೇಕು. ಅಭಿವೃದ್ಧಿ ಕಾಮಗಾರಿ, ಮನೆ ನಿರ್ಮಾಣಕ್ಕೆ ಮರಳಿನ ಕೊರತೆಯಾಗಬಾರದು. ಹೂಳೆತ್ತಿದರೆ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಕೊರತೆ ನಿವಾರಣೆಗೆ ಸಹಾಯವಾಗಲಿದೆ.
ಕೃತಕ ನೆರೆಯುಂಟಾಗದು. ಇಷ್ಟು ಹೊಳೆಗಳಿದ್ದರೂ ನೀರಿನ ಅಭಾವ ನಮ್ಮ ದುರಂತ. ಹೂಳೆತ್ತಲು 3 ವರ್ಗೀಕರಣ ಮಾಡಿ ಮರಳು ಸಿಗುವಲ್ಲಿ ಮೊದಲು ತೆಗೆದು ಏಲಂ ಮಾಡಲು ಸೂಚಿಸಲಾಗಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಪ್ರತಿಕ್ರಿಯಿಸುತ್ತಾರೆ.
ಪಾರದರ್ಶಕ ಪ್ರಕ್ರಿಯೆ
ಹೂಳೆತ್ತಿದಾಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕು ಎನ್ನುವುದು ನಮ್ಮ ಉದ್ದೇಶ. ಶ್ರೀಸಾಮಾನ್ಯನಿಗೆ ಈವರೆಗೆ ಮರಳು ದೊರೆತಿಲ್ಲ. ಮರಳು ಕೆಲವೇ ಜನರ ಆಸ್ತಿಯಂತಾಗಿದೆ. ದರವೂ ಹೆಚ್ಚಾಗಿತ್ತು.ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಕೂಡಾ ಕಿಂಡಿ ಅಣೆಕಟ್ಟುಗಳಲ್ಲಿ ಹೂಳೆತ್ತಿ ಮರಳು ತೆಗೆಯಲು ಸೂಚಿಸಿದ್ದಾರೆ. ಇ-ಟೆಂಡರ್ ಮೂಲಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ.
-ಬಿ.ಎಂ.ಸುಕುಮಾರ ಶೆಟ್ಟಿ,ಶಾಸಕರು ಬೈಂದೂರು
ಸೂಚಿಸಲಾಗಿದೆ
ಸಣ್ಣ ನೀರಾವರಿ ಇಲಾಖೆಯವರು ಹೂಳಿನ ಪ್ರಮಾಣ ಗುರುತಿಸಿ ತಾ.ಪಂ.ಗೆ ನೀಡಿದ್ದು ತಾ.ಪಂ.ಗೇ ಅಧಿಕಾರ ನೀಡಿ ಸಂವಹನ ನಡೆಸಲಾಗಿದೆ.
-ಮಹೇಶ್, ಗಣಿ ಇಲಾಖೆ ಅಧಿಕಾರಿ, ಉಡುಪಿ
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.