ಮಳೆನೀರ ತೋಡಿಗೆ ಮಣ್ಣು ತಂದು ಸುರಿದು ಎಡವಟ್ಟು!
Team Udayavani, May 29, 2019, 6:10 AM IST
ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಸುಮಾರು ಅರ್ಧದಷ್ಟು ರಸ್ತೆ ಬದಿಯ ನೀರು ಹರಿಯುವುದು ಸಮೀಪದ ತೋಡಿನ ಮೂಲಕ. ಆದರೆ ಇದೀಗ ಮಂಗಳೂರು ಟೈಲ್ ಫ್ಯಾಕ್ಟರಿ ಹತ್ತಿರವಿರುವ ಈ ತೋಡಿಗೆ ಹಾಕಿದ ಮಣ್ಣಿನ ತೆರವು ಕಾರ್ಯ ನಡೆಯದೇ ಇದ್ದು, ಈ ಬಾರಿ ದಿಢೀರ್ ಮಳೆ ಬಂತೆದರೆ ಈ ಭಾಗ ಮುಳುಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಎಲ್ಲೆಡೆಯ ನೀರು
ವಡೇರ ಹೋಬಳಿಯಿಂದ ಕುಂದಾಪುರ ಪೇಟೆ ಭಾಗಕ್ಕೆ, ಗಾಂಧಿ ಮೈದಾನ ಕಡೆಯಿಂದ, ಪೇಟೆಯ ಭಾಗದಿಂದ ಹರಿದು ಬರುವ ನೀರು ಸೇರುವುದು ಈ ವಾರ್ಡಿನ ಮೂಲಕ ಹರಿಯುವ ತೋಡಿನಲ್ಲಿ. ಇದಕ್ಕೊಂದು ಸಮರ್ಥವಾದ ತಡೆಗೋಡೆ ಕಟ್ಟಿ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲು ಪುರಸಭೆಗೆ ಅನುದಾನದ ಕೊರತೆ ಉಂಟಾಗಿದೆ.
ಕೇವಲ ಸಣ್ಣ ತಡೆಗೋಡೆಯನ್ನಷ್ಟೇ ಕಟ್ಟಲಾಗಿದ್ದು, ಇದರಿಂದ ರಸ್ತೆ ಕೊರೆತದ ಭೀತಿ ಜನರಲ್ಲಿ ಆವರಿಸಿದೆ. ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಒದಗಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ಇದಕ್ಕೆ ತಾಗಿಕೊಂಡಂತೆ ಕಾಂಕ್ರಿಟ್ ರಸ್ತೆಯಿದೆ. ಅದಕ್ಕೆ ಜೋಡಿಕೊಂಡಂತೆ ತಡೆಗೋಡೆ ಕಾಮಗಾರಿಯಾಗಿದೆ. ಈ ಸಂದರ್ಭ ತೋಡಿಗೆ ತಂದು ಹಾಕಿದ ಮಣ್ಣು ಇನ್ನೂ ಹಾಗೆಯೇ ಇದೆ. ಒಮ್ಮೆಲೆ ತೋಡಿನಲ್ಲಿ ನೀರು ಬಂದರೆ ತೊಂದರೆ ಉಂಟಾಗಲಿದೆ. ದೋಣಿಗೆ ತೊಂದರೆ ಕಾರ್ಖಾನೆ ಬಳಿ ಹರಿಯುವ ಹೊಳೆಗೆ ಹಂಚು ಕಾರ್ಖಾನೆಯ ಹೆಂಚಿನ ಚೂರುಗಳ ತ್ಯಾಜ್ಯ ಎಸೆಯುವ ಕಾರಣ ಇಲ್ಲಿ ಮೀನು ಹಿಡಿಯಲು, ದೋಣಿ ಹೋಗಲು ಕಷ್ಟವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
ಮೀನುಗಳು ವಾಸ ಮಾಡುವ ಗುಂಡಿಯಲ್ಲಿ ಹೆಂಚಿನ ತ್ಯಾಜ್ಯ ಇರುವ ಕಾರಣ ಮೀನುಗಳೇ ಇರುವುದಿಲ್ಲ. ಮೊದಲೇ ಈ ಬಾರಿ ಮೀನುಗಾರಿಕೆ ಇಲ್ಲ. ದೊಡ್ಡ ದೋಣಿಗೂ ಮೀನಿಲ್ಲ, ನಮಗೂ ಇಲ್ಲ ಎಂದಾದರೆ ಕಷ್ಟ ಎನ್ನುತ್ತಾರೆ ಮೀನುಗಾರರು. ಅದನ್ನು ತೆರವು ಮಾಡಬೇಕೆಂಬ ಒತ್ತಾಯ ಹಾಗೆಯೇ ಇದೆ. ಇದಕ್ಕಿನ್ನೂ ಸ್ಪಂದನೆ ದೊರೆತಿಲ್ಲ.
ಮಣ್ಣು ಹಾಕಲಿ
ಇಲ್ಲೇ ಪಕ್ಕದಲ್ಲಿ ಗದ್ದೆ ಇದ್ದು, ಮಳೆಗಾಲದಲ್ಲಿ ಅದರಲ್ಲಿ ತುಂಬಿದ ನೀರು ತೋಡಿಗೆ ಹರಿಯಲು ಅವಕಾಶವಿಲ್ಲ. ಇದರಿಂದ ಇಲ್ಲಿ ಸೊಳ್ಳೆ ಕಾಟ ವಿಪರೀತವಾಗಿರುತ್ತದೆ.
ಆದ್ದರಿಂದ ಇಲ್ಲಾದರೂ ಮಣ್ಣು ಹಾಕಬೇಕು ಮತ್ತು ಗದ್ದೆ ಎತ್ತರಿಸುವ ಕಾರ್ಯ ನಡೆಯಬೇಕು. ಇದರಿಂದ ಪ್ರಯೋಜನವಿದೆ. ತೋಡಿಗೆ ಹಾಕಿದ ಮಣ್ಣಿನ ತೆರವೂ ನಡೆಯಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಕಳಪೆ ಕಾಮಗಾರಿ
ಕಾಂಕ್ರೀಟ್ ತಡೆಗೋಡೆ ಪಕ್ಕದಲ್ಲಿ ಕಲ್ಲಿನ ತಡೆಗೋಡೆಯೊಂದರ ರಚನೆ ಮಾಡಲಾಗಿದ್ದು ಅದು ಕಳಪೆಯಾಗಿದೆ ಎಂಬ ಆರೋಪವಿದೆ. ಅದರ ಕಲ್ಲುಗಳು ಈಗಲೇ ಕಿತ್ತು ಹೋಗುತ್ತಿವೆ. ಗೋಡೆಗೆ ಅಂಟಿಕೊಂಡಿರಬೇಕಿದ್ದ ಕಲ್ಲುಗಳು ಈಗಾಗಲೇ ಬಿದ್ದು ತೋಡಿನಲ್ಲಿವೆ. ಅದರ ಮೇಲೆ ಮಣ್ಣು ಕೂಡಾ ಬಿದ್ದಿದ್ದು ಒಟ್ಟಿನಲ್ಲಿ ಅವ್ಯವಸ್ಥೆಯ ಆಗರವಾಗಿದೆ.
ಮನವಿ ಮಾಡಲಾಗಿದೆ
ಮಳೆಗಾಲದಲ್ಲಿ ತುಂಬಿ ಹರಿಯುವ ಈ ತೋಡಿಗೆ ಹಾಕಿದ ಮಣ್ಣನ್ನು ತೆರವು ಮಾಡಲು ಇಲಾಖೆಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ತೆರವು ಮಾಡಲಾಗುವುದು ಎಂಬ ಭರವಸೆ ದೊರೆತಿದೆ.
-ವಿಜಯ್ ಎಸ್. ಪೂಜಾರಿ, ಪುರಸಭೆ ಮಾಜಿ ಸದಸ್ಯರು
ತತ್‌ಕ್ಷಣ ತೆರವು
ಈ ಸಮಸ್ಯೆ ಗಮನಕ್ಕೆ ಬಂದಿದೆ. ಶಾಸಕರು ಕೂಡಾ ಸೂಚನೆ ನೀಡಿದ್ದಾರೆ. ತತ್‌ಕ್ಷಣ ತೆರವು ಮಾಡಲಾಗುವುದು. ಮಳೆಗೆ ಸಮಸ್ಯೆಯಾಗದಂತೆ ನೋಡಲಾಗುವುದು.
-ಹರ್ಷವರ್ಧನ, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.