ಜಮೀನು ಹಸ್ತಾಂತರ ಪ್ರಕ್ರಿಯೆಗೆ ಚಾಲನೆ
ಉಡುಪಿಯಲ್ಲಿ ಶೀಘ್ರವೇ ಪೊಲೀಸ್ ಪಬ್ಲಿಕ್ ಸ್ಕೂಲ್, ಟ್ರೈನಿಂಗ್ ಸೆಂಟರ್
Team Udayavani, Jun 23, 2019, 6:00 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕರಾವಳಿ ಮತ್ತು ಮಲೆನಾಡು ಭಾಗದ ಪೊಲೀಸರ ತರಬೇತಿಗೆ ಕೇಂದ್ರ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಒದಗಿ ಸುವ ಪಬ್ಲಿಕ್ ಸ್ಕೂಲ್‌ನ ಕನಸು ನನಸಾಗುವ ಲಕ್ಷಣ ಗೋಚರಿಸಿದೆ.
ಈ ಎರಡೂ ಯೋಜನೆಗಳಿಗೆ ಬೇಕಾದ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದು ಪೊಲೀಸ್ ಸಿಬಂದಿಯಲ್ಲಿ ಆಶಾವಾದ ಮೂಡಿಸಿದೆ.
ಪ್ರತ್ಯೇಕ ಕಟ್ಟಡಗಳಲ್ಲಿ ಈ ಸಂಸ್ಥೆಗಳ ಆರಂಭಕ್ಕೆ 2013-14ನೇ ಸಾಲಿನ ಬಜೆಟ್‌ನಲ್ಲಿ 75 ಲ.ರೂ. ನೀಡಲಾಗಿತ್ತು. ಆದರೆ ಆರು ವರ್ಷಗಳಾದರೂ ಜಾಗದ ಸಮಸ್ಯೆ ಬಗೆಹರಿದಿರಲಿಲ್ಲ.
ಇಪ್ಪತ್ತು ಎಕ್ರೆ ಪ್ರದೇಶ
ಉಡುಪಿ ತಾಲೂಕಿನ ಉಪ್ಪೂರು ಗ್ರಾಮದಲ್ಲಿ 36 ಎಕ್ರೆ ಜಮೀನನ್ನು ಪರಂಬೋಕು ಶೀರ್ಷಿಕೆಯಿಂದ ವಿರಹಿತಗೊಳಿಸಿ ಪೊಲೀಸ್ ಇಲಾಖೆಗೆ ನೀಡಲು ಜಿಲ್ಲಾಧಿಕಾರಿಯವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳಾಗಿದ್ದವು. ಪ್ರಯೋಜನವಾಗಿರಲಿಲ್ಲ. ಈಗ ಮತ್ತೆ ಪ್ರಕ್ರಿಯೆ ಆರಂಭವಾಗಿದೆ. ಪ್ರಾದೇಶಿಕ ಆಯುಕ್ತರ ಕಚೇರಿ, ‘ಉದ್ದೇಶಿತ ಯೋಜನೆಗೆ ಅಗತ್ಯಕ್ಕಿಂತ ಹೆಚ್ಚಿನ ಜಮೀನು ನೀಡಲಾಗದು’ ಎಂದು ತಿಳಿಸಿದೆ. ಹಾಗಾಗಿ 36ರ ಬದಲು 20 ಎಕ್ರೆಗೆ ಸೀಮಿತ ಗೊಳಿಸಿ ಮರು ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ತಾತ್ಕಾಲಿಕ ತರಬೇತಿ ಕೇಂದ್ರಗಳು
ಉಡುಪಿ, ದ.ಕ. ಸೇರಿದಂತೆ ಹೆಚ್ಚಿನ ಎಲ್ಲ ಜಿಲ್ಲೆಗಳಲ್ಲೂ ಪೊಲೀಸ್ ಇಲಾಖೆಗೆ ಆಯ್ಕೆಗೊಂಡವರ ತರಬೇತಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಹಾಗೂ ಮೈದಾನದಲ್ಲಿ ನಡೆಯುತ್ತ್ತಿದೆ. ಇವು ತಾತ್ಕಾಲಿಕ ತರಬೇತಿ ಕೇಂದ್ರಗಳಾಗಿದ್ದು, ಅಗತ್ಯ ಮೂಲ ಸೌಕರ್ಯ ಸಾಕಷ್ಟಿಲ್ಲ. ಉಡುಪಿಯಲ್ಲಿ 2000ನೇ ಸಾಲಿನಿಂದ ಇದುವರೆಗೆ 11 ಬ್ಯಾಚ್‌ಗಳು ತರಬೇತಿ ಪಡೆದಿವೆ. ಉಡುಪಿ-ದ.ಕ. ಎರಡೂ ಕಡೆಗಳಲ್ಲಿ ಒಂದು ಬ್ಯಾಚ್‌ನಲ್ಲಿ ತಲಾ ಗರಿಷ್ಠ ಸುಮಾರು 100 ಮಂದಿಯಷ್ಟೇ ತರಬೇತಿ ಪಡೆಯಬಹುದು. ಒಂದುವೇಳೆ ಸುಸಜ್ಜಿತ ಕೇಂದ್ರ ಆರಂಭಗೊಂಡರೆ 400ಕ್ಕೂ ಅಧಿಕ ಮಂದಿಗೆ ತರಬೇತಿ ಸಾಧ್ಯವಾಗಲಿದೆ.
ಪಬ್ಲಿಕ್ ಸ್ಕೂಲ್ ಪ್ರಯೋಜನ
ಪೊಲೀಸ್ ಪಬ್ಲಿಕ್ ಸ್ಕೂಲ್ ಆರಂಭವಾದರೆ ದ.ಕ., ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಪೊಲೀಸ್ ಅಧಿಕಾರಿ, ಸಿಬಂದಿ ಮಕ್ಕಳಿಗೂ ಉಚಿತ, ರಿಯಾಯಿತಿ ದರದಲ್ಲಿ ಶಿಕ್ಷಣ ಸಿಗ ಲಿದೆ. ಇದರ ನಿರ್ವಹಣೆಗೆ ಸ್ಥಳೀಯವಾಗಿ ಎಜುಕೇಶನ್ ಸೊಸೈಟಿ ರಚನೆಯಾಗಲಿದೆ. ಉಡುಪಿ ಜಿಲ್ಲೆಯಲ್ಲೇ ಸುಮಾರು 900 ಮಂದಿ ಪೊಲೀಸರಿದ್ದಾರೆ. ಇಂಥ ಶಾಲೆ ಧಾರವಾಡ ಹೊರತುಪಡಿಸಿದರೆ ಬೇರೆಲ್ಲೂ ಇಲ್ಲ.
ಜಮೀನು ಲಭ್ಯವಾಗದ್ದರಿಂದ ಯೋಜನೆ ಜಾರಿಗೊಂಡಿಲ್ಲ. ಮಂಜೂರಾದ ಹಣವನ್ನು ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದಲ್ಲಿ ಠೇವಣಿ ಇಡ ಲಾಗಿದೆ. ಜಾಗ ಅಂತಿಮಗೊಳಿಸಲು ಪ್ರಯತ್ನಿಸಲಾಗುತ್ತಿದೆ.
-ನಿಶಾ ಜೇಮ್ಸ್, ಎಸ್‌ಪಿ
ಈ ಹಿಂದೊಮ್ಮೆ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಮತ್ತೂಮ್ಮೆ ನಮ್ಮ ಅಭಿಪ್ರಾಯ ಕೋರಿದ್ದು, ಕೂಡಲೇ ಪ್ರತಿಕ್ರಿಯಿಸಲಾಗುವುದು.
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ
-ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.