Padubidri ಢಕ್ಕೆಬಲಿಗೆ ಚಾಲನೆ: ಹೊರೆಕಾಣಿಕೆ ಮೆರವಣಿಗೆ
Team Udayavani, Jan 15, 2025, 10:58 PM IST
ಪಡುಬಿದ್ರಿ: ಇಲ್ಲಿನ ಇತಿಹಾಸಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ನಡೆಯಲಿರುವ ದ್ವೈವಾರ್ಷಿಕ ನಡಾವಳಿ “ಢಕ್ಕೆಬಲಿ’ಯ ಪರ್ವಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಬುಧವಾರ ಚಾಲನೆ ದೊರೆತಿದೆ.
ಪಡುಬಿದ್ರಿಯ ಗ್ರಾಮದೇವರಾದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮಾಜದ ಆಡಳಿತ ಸಂಸ್ಥೆಯಾದ ಶ್ರೀ ವನದುರ್ಗಾ ಟ್ರಸ್ಟ್‌ನ ಪದಾಧಿಕಾರಿಗಳು, ಶ್ರೀ ಬ್ರಹ್ಮಸ್ಥಾನದ ಅರ್ಚಕರು, ಪಾತ್ರಿಗಳು, ಗುರಿಕಾರರು, ಸ್ಥಾನಿಗಳು, ಮಾನಿಗಳು ಸೇರಿದಂತೆ ಊರವರು, ಶ್ರೀ ದೇವಸ್ಥಾನದ ಪ್ರಮುಖರ ಸಮಕ್ಷಮ ಆದ್ಯ ದೇವತಾ ಪ್ರಾರ್ಥನೆಯನ್ನು ನಡೆಸಲಾಯಿತು. ಬಳಿಕ ಎಲ್ಲರ ಕೂಡುವಿಕೆಯೊಂದಿಗೆ ಹೊರೆಕಾಣಿಕೆಯ ಸಹಿತ ಹೊರಟ ಮೆರವಣಿಗೆಯು ಬ್ರಹ್ಮಸ್ಥಾನದತ್ತ ಕ್ರಮಿಸಿತು.
ಬ್ರಹ್ಮಸ್ಥಾನಕ್ಕೆ ಆಗಮಿಸಿ ನೆರೆದವರ ಸಮಕ್ಷಮದಲ್ಲಿ ಢಕ್ಕೆಬಲಿಗಳ ಸಾಂಗತಾ ಸಿದ್ಧಿ ಹಾಗೂ ಮಂಡಲ ಹಾಕುವ ಢಕ್ಕೆಬಲಿ ಸೇವೆಯ ನಿರ್ವಿಘ್ನತಾ ಸಿದ್ಧಿಗಾಗಿ ಶ್ರೀ ಖಡ್ಗೇಶ್ವರೀ ಶ್ರೀ ದೇವಿಯ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ನೆರೆದವರಿಂದ ಹಿಂಗಾರ ವನ್ನು ಸೀಳುವ ಮುಹೂರ್ತ ನಡೆಯುವುದರೊಂದಿಗೆ ಬಯಲು ಆಲಯವನ್ನು ಫಲಪುಷ್ಪಗಳಿಂದ ಅಲಂಕರಿಸಲು ಶಿವಳ್ಳಿ ಬ್ರಾಹ್ಮಣ ಯುವಕರು ತೊಡಗಿದರು. ರಾತ್ರಿಯ ವೇಳೆ ಮಂಡಲ ಹಾಕುವ ಢಕ್ಕೆಬಲಿ ಸೇವೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹ ಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಅರ್ಚಕರಾದ ರಘುಪತಿ ಆಚಾರ್ಯ, ಕೇಶವ ಆಚಾರ್ಯ ಗುರುರಾಜ ಆಚಾರ್ಯ, ನಂದಕುಮಾರ್ ಆಚಾರ್ಯ, ಸನ್ನಿಧಾನದ ಪಾತ್ರಿಗಳಾದ ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ, ಗುರಿಕಾರ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ಕೋಶಾಧಿಕಾರಿ ವೈ. ಸುರೇಶ್ ರಾವ್, ಗುರಿಕಾರ ಬಾಲಪ್ಪ ನಟರಾಜ ರಾವ್ ಪಿ. ಎಸ್., ಗುರಿಕಾರ ಮುರುಡಿ ಜಗದೀಶ ರಾವ್, ವನದುರ್ಗಾ ಟ್ರಸ್ಟ್ ಪದಾಧಿಕಾರಿಗಳಾದ ಗುಡ್ಡೆ ವಿಠಲ ರಾವ್, ಪಿ. ಶ್ರೀನಿವಾಸ ರಾವ್, ಪಿ. ಎಸ್. ರಾಘವೇಂದ್ರ ರಾವ್, ರವೀಂದ್ರನಾಥ ಪಿ. ಎಚ್., ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತುಸಮಸ್ತರು ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.