ಪ್ರಥಮ ಹಂತದ ಮಿಯಾವಾಕಿ ವನ ನಿರ್ಮಾಣಕ್ಕೆ ಚಾಲನೆ
Team Udayavani, Oct 15, 2019, 5:45 AM IST
ಕಟಪಾಡಿ: ಮೊದಲನೇ ಹಂತದ ಖಾಸಗಿ ಮಿಯಾವಾಕಿ ವನ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು ಅವರು ಕಟಪಾಡಿ ಬಳಿಯ ಪೊಸಾರಿನ ಮಹೇಶ್ ಶೆಣೈ ಅವರ ಮನೆಯ ಪರಿಸರದಲ್ಲಿ ಚಾಲನೆ ನೀಡಿದರು.
ಪರಿಸರ ಮಾಲಿನ್ಯ, ಅಂತರ್ ಜಲವೃದ್ಧಿ, ಹೆಚ್ಚುತ್ತಿರುವ ಭೂಮಿಯ ತಾಪಮಾನ ಇಂತಹ ಹತ್ತು ಹಲವಾರು ಸಮಸ್ಯೆಗೆ ಪರಿಹಾರವೇ “ಮಿಯಾವಾಕಿ ಕಾಡು”. ಈ ವಿಧಾನವು ಭಾರತದ ಪಂಜಾಬ್, ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿ ಜನಪ್ರಿಯವಾಗಿದೆ.
ಅತ್ಯಂತ ಕಡಿಮೆ ಸ್ಥಳದಲ್ಲಿ ಖಾಸಗಿ ಅರಣ್ಯವನ್ನು ನಿರ್ಮಿಸಬಹುದಾಗಿದೆ.ಈ ವಿಧಾನದಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 400 ಮರಗಳನ್ನು ನೆಡಬಹುದಾಗಿದೆ ಮತ್ತು ಈ ವಿಧಾನವನ್ನು ಕರಾವಳಿಯಲ್ಲಿ ಮೊದಲ ಬಾರಿಗೆ “ಸಾವಯವ ಬದುಕು ”ತಂಡ ಪರಿಚಯಿಸುತ್ತಿದೆ ಎಂದು ಕೆ. ಮಹೇಶ್ ಶೆಣೈ ತಿಳಿಸಿದರು.
ಇದರಲ್ಲಿ ಎರಡು ಹಂತಗಳಿದ್ದು ಮೊದಲನೇ ಹಂತದಲ್ಲಿ ಗಿಡ ಮರ ನೆಡಲು ಬೇಕಾಗುವಂತಹ ಮಣ್ಣಿನ ಪದರವನ್ನು ರಚಿಸುವುದು ಮತ್ತು ಎರಡನೇ ಹಂತದಲ್ಲಿ ಸಸಿಗಳನ್ನು ನೆಡುವ ಅಭಿಯಾನ ನಡೆಯಲಿದೆ. ಎರಡನೇ ಹಂತದಲ್ಲಿ ಎರಡು ಸೆಂಟ್ಸ್ ಜಾಗದಲ್ಲಿ 260 ಸಸಿಗಳನ್ನು ನೆಡುವ ಉದ್ದೇಶ ಇದ್ದು ,ಇದು ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ನಡೆಯಲಿದೆ.
ಸರಿ ಸುಮಾರು 260 ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿಗಳನ್ನು ಆಹ್ವಾನಿಸಿ ಮರದ ಸಸಿಗಳನ್ನು ನೆಟ್ಟು ಕಡಿಮೆ ಜಾಗದಲ್ಲಿ ಶೀಘ್ರವಾಗಿ ಬೆಳೆಯುವ ದಟ್ಟ ಅರಣ್ಯ ನಿರ್ಮಾಣಕ್ಕೆ ಚಾಲನೆ ನೀಡುವ ಉದ್ದೇಶ ಇದೆ ಎಂದು ತಿಳಿಸಿದರು. ಪ್ರಮುಖರಾದ ರವಿ ಕಟಪಾಡಿ, ಗಣೇಶ ರಾಜ್ ಸರಳಬೆಟ್ಟು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.