ಹೂಳೆತ್ತದ ಒಳಚರಂಡಿ, ಕಸದ ರಾಶಿ; ಜಾಗೃತವಾಗಬೇಕಿದೆ ಪಡುಬಿದ್ರಿ
Team Udayavani, May 13, 2019, 6:13 AM IST
ಪಡುಬಿದ್ರಿ: ಹೂಳೆತ್ತದ ಚರಂಡಿಗಳು, ರಸ್ತೆಗಳ ಪಕ್ಕದಲ್ಲಿ ಹರಡಿದ ಕಸದ ರಾಶಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದ್ದು, ಕೂಡಲೇ ಪಡುಬಿದ್ರಿ ಆಡಳಿತ ಎಚ್ಚೆತ್ತುಕೊಳ್ಳಬೇಖೀದೆ.
ಗ್ರಾ. ಪಂ. ಮಳೆಗಾಲದ ಯಾವುದೇ ಪೂರ್ವ ಸಿದ್ಧತೆಯತ್ತ ಗಮನ ಹರಿಸಿಲ್ಲ. 33 ವಾರ್ಡ್‌ಗಳಿರುವ ಈ ಬೃಹತ್ ಪಂಚಾಯತ್‌ನಲ್ಲಿ ಗ್ರಾಮ, ಜಿ. ಪಂ. ಸೇರಿ ಅದೆಷ್ಟೋ ರಸ್ತೆಗಳಿವೆ. ಕೆಲವಕ್ಕೆ ಚರಂಡಿಗಳೇ ಇಲ್ಲವಾದರೂ ಇರುವಡೆಗಳಲ್ಲಿ ಹೂಳು ತುಂಬಿ ಹೋಗಿವೆ. ಕೆಲ ರಸ್ತೆ ಚರಂಡಿಗಳಲ್ಲಿ ಗಿಡಗಂಟಿಗಳಿಂದ ತುಂಬಿದ್ದರೆ, ಕೆಲವೆಡೆ ತ್ಯಾಜ್ಯಗಳ ರಾಶಿ ನೀರು ಸರಾಗ ಹರಿಯಲು ಸಂಚಕಾರ ತರಲಿದೆ. ಪೇಟೆಯಲ್ಲಿ ಹೆದ್ದಾರಿ ಒಳಚರಂಡಿ ಕಾಮಗಾರಿ ಪೂರ್ಣವಾಗದಿರುವುದರಿಂದ ಕೃತಕ ನೆರೆಗೂ ಕಾರಣವಾಗಲಿದೆ.
ತ್ಯಾಜ್ಯದಿಂದ ಮುಚ್ಚಿರುವ ಚರಂಡಿಗಳು
ಪಡುಬಿದ್ರಿ ಬಾಲಗಣೇಶ ದೇವಸ್ಥಾನದ ರಸ್ತೆ, ಬೀಡು – ಮಂಜೊಟ್ಟಿ ಸಂಪರ್ಕ ರಸ್ತೆಯಲ್ಲಿನ ಮೋರಿಗಳೆರಡು ವರ್ಷಗಳ ಹಿಂದೆ ಕುಸಿದಿದ್ದು, ಈವರೆಗೆ ದುರಸ್ತಿಯಾಗಿಲ್ಲ. ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿಯೂ ಇಕ್ಕೆಲಗಳಲ್ಲಿ ಮಣ್ಣು ಅಗೆದು ಹಾಕಲಾಗಿದ್ದು, ಚರಂಡಿಗಳು ಮುಚ್ಚಿ ಹೋಗಿವೆ.
ಎಚ್ಚರಿಕೆ ಫಲಕ ಮರು ಅಳವಡಿಸಿ
ಸುಜ್ಲಾನ್ ಪುನರ್ವಸತಿ ಕಾಲೊನಿ ಸಮೀಪವಿರುವ ಮದಗಕ್ಕೆ ಅಳವಡಿಸಿದ್ದ ಎಚ್ಚರಿಕೆ ಫಲಕ ಮಾಸಿ ಹೋಗಿರುವ ಕಳೆದ ವರ್ಷ ಗ್ರಾ. ಪಂ. ಗಮನ ಸೆಳೆದಿದ್ದರೂ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಕೆಲ ವರ್ಷ ಗಳ ಹಿಂದೆ ಇಲ್ಲಿ ದುರಂತ ನಡೆದು ಬಾಲಕನೊಬ್ಬ ಮೃತಪಟ್ಟಿದ್ದ. ಬಳಿಕ ಜಿಲ್ಲಾಧಿಕಾರಿ ಸೂಚನೆಯಂತೆ ಇಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಗಿತ್ತು. ಮದಗದ ಎರಡು ಪಾರ್ಶ್ವಗಳಲ್ಲಿ ಅಳವಡಿಸಿದ್ದ ಫಲಕಗಳ ಬಣ್ಣವೂ ಮಾಸಿ ಹೋಗಿದೆ.
ತ್ಯಾಜ್ಯ ಸಮಸ್ಯೆ ಪರ್ಯಾಯ ಕ್ರಮಬೇಕು
ಗ್ರಾಮದ ತ್ಯಾಜ್ಯ ಸಮಸ್ಯೆ ಪೂರ್ಣವಾಗಿ ಇನ್ನೂ ಮಾಸಿಲ್ಲ. ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ ಘಟಕಕ್ಕಾಗಿ ಸಂತೆ ಮಾರುಕಟ್ಟೆ ಸಮೀಪವೇ ಪಂಚಾಯತ್ ಮುಂದಾಗಿದ್ದರೂ ಇದೀಗ ಲೋಕಾ ಯುಕ್ತ ನೋಟೀಸಿನಿಂದಾಗಿ ಮುಚ್ಚುವ ಪರಿಸ್ಥಿತಿಯೂ ಎದುರಾಗಿದೆ ಎಂದೂ ಗ್ರಾ. ಪಂ. ಮಾಹಿತಿಗಳು ತಿಳಿಸಿವೆ.
ಮೆಸ್ಕಾಂ ಪಾಠ ಕಲಿತಿದೆ
ಕಳೆದ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದ ಮೆಸ್ಕಾಂ ಇಲಾಖೆ ಪಾಠ ಕಲಿತಿದೆ. ಈಗಾಗಲೇ ಗ್ರಾಮದಲ್ಲೆಡೆ ವಿದ್ಯುತ್ ತಂತಿಗಳಿಗೆ ತಾಗುವ ಮರ ಗಿಡಗಳ ಗೆಲ್ಲುಗಳ ಕಟಾವು ಮೂಲಕ ಮಳೆಗಾಲದ ಪೂರ್ವ ತಯಾರಿ ಆರಂಭಿಸಲಾಗಿದೆ.
-ಸುಧೀರ್ ಪಟೇಲ್, ಪಡುಬಿದ್ರಿ ಮೆಸ್ಕಾಂ ಸಹಾಯಕ ಇಂಜಿನಿಯರ್.
ಪತ್ರ ಬರೆಯಲಾಗಿದೆ
ಮಳೆ ನೀರು ಹರಿದು ಹೋಗುವ ಚರಂಡಿಗಳ ಹೂಳೆತ್ತಲು ಒಂದೆರಡು ದಿನಗಳಲ್ಲಿ ಕಾರ್ಯ ಪ್ರವೃತ್ತರಾಗಲಿದ್ದೇವೆ. ರಾ.ಹೆ. 66ರ ಚರಂಡಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ದಮಯಂತಿ, ಅಧ್ಯಕ್ಷೆ, ಪಡುಬಿದ್ರಿ ಗ್ರಾ. ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.