ಮಟ್ಟು : ಹರಿಯುವ ಹೊಳೆಗಳಿದ್ದರೂ ಕುಡಿಯುವ ನೀರಿಗೆ ಬರ
ಕೆಲವೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಅನಿವಾರ್ಯ
Team Udayavani, Apr 6, 2019, 6:00 AM IST
ಕಟಪಾಡಿ: ಕೋಟೆ ಗ್ರಾ.ಪಂ.ವ್ಯಾಪ್ತಿಯ ಮಟ್ಟು ಗ್ರಾಮದ ವ್ಯಾಪ್ತಿಯಲ್ಲಿ ಒಂದೆಡೆ ಕಡಲು ಮತ್ತೂಂದೆಡೆ ಪಿನಾಕಿನಿ ಹೊಳೆ ಹರಿಯುತ್ತಿದ್ದರೂ ಎಗ್ಗಿಲ್ಲದೆ ಮುಂದುವರಿಯುತ್ತಿರುವ ಕುಡಿಯುವ ನೀರಿನ ತತ್ವಾರ ನಿವಾರಿಸಲು ಬೇಸಗೆಯ ಈ ಸಂದರ್ಭ ಕುಡಿಯುವ ನೀರನ್ನು ಟ್ಯಾಂಕ್ ಮೂಲಕ ಕಳೆದ ಸುಮಾರು 4 ವರ್ಷಗಳಿಂದಲೂ ಸರಬರಾಜು ಮಾಡಲಾಗುತ್ತಿದೆ.
ಉಪ್ಪು ನೀರಿನ ಸಮಸ್ಯೆ
ಕುಡಿಯುವ ನೀರಿನ ತತ್ವಾರಕ್ಕೆ ಈ ಹೊಳೆಗಳಲ್ಲಿ ಒಳನುಗ್ಗುವ ಸಮುದ್ರದ ಉಪ್ಪು ನೀರು ಕಾರಣ ವಾಗಿದ್ದು, ಕೆಲವೆಡೆ ನೀರಿನ ಬಣ್ಣ ಬದಲಾಗುವುದರಿಂದ ಈ ಪರಿಸರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಇಂದಿಗೂ ಸಮಸ್ಯೆಯೇ ಕಂಡು ಬರುತ್ತಿದ್ದು, ಸಾಕಷ್ಟು ನೀರು ಇದ್ದರೂ ಕುಡಿಯುವ ನೀರಿಗೆ ಬರ ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
1,270 ಕುಟುಂಬಗಳ 5,577 ಜನಸಂಖ್ಯೆ
ಯನ್ನು ಹೊಂದಿದ್ದು, ಸುಮಾರು 713 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಇದ್ದು ಕುಡಿಯುವ ನೀರನ್ನು ಪೂರೈಸುತ್ತಿದ್ದು, ಇದೀಗ ಉಪ್ಪು ನೀರಿನ ಬಾಧೆಯಿಂದ ಮಟ್ಟು ಗ್ರಾಮಕ್ಕೆ ವರ್ಷ ಇಡೀ ಕುಡಿಯುವ ನೀರನ್ನು ಒದಗಿಸುವ ಜವಾಬ್ದಾರಿ ಪಂಚಾ ಯತ್ ಹೊಂದಿದೆ.
ಟ್ಯಾಂಕರ್‌ನಿಂದ ಪೂರೈಕೆ
ಕೋಟೆ ಗ್ರಾಮದ ಭಾಗದಲ್ಲಿರುವ ಇಂದಿರಾ ನಗರ, ವಿನೋಬಾ ನಗರ, ಕೋಟೆ ಕಂಡಿಗೆ, ಕೋಟೆಬೆ„ಲ್, ಸಮಾಜ ಮಂದಿರ, ತೌಡಬೆಟ್ಟು, ಮದೀನಾ ಪಾರ್ಕ್, ಕಿನ್ನಿಗುಡ್ಡೆ, ಕೋಟೆಬೆ„ಲು, ಕಂಡಿಗೆ, ಪರೆಂಕುದ್ರು ಭಾಗದಲ್ಲಿ ಕಳೆದ ಸಾಲಿನಲ್ಲಿ 4ಲಕ್ಷ 68 ಸಾವಿರ ರೂ. ಮೊತ್ತದ ಕುಡಿಯುವ ನೀರನ್ನು ಟ್ಯಾಂಕರ್ ಬಳಸಿಕೊಂಡು ಸರಬರಾಜು ಮಾಡಿದ್ದು, ಈ ಬಾರಿ ಆಗಸ್ಟ್ ತಿಂಗಳಿನಲ್ಲಿಯೇ ಮಳೆ ಕೈಕೊಟ್ಟಿರುವ ಕಾರಣದಿಂದಾಗಿ ಈಗಲೇ ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಲಿದೆ.
ಈ ಮೊದಲಿನಂತೆಯೇ ಮಟ್ಟು ಭಾಗದ ಪರೆಂಕುದ್ರು, ದಡ್ಡಿ, ಮಟ್ಟು ಕೊಪ್ಲ, ಕಾಲನಿ, ಮಟ್ಟು ಕಟ್ಟ, ಆಳಿಂಜೆ ದೇವರಕುದ್ರು, ಮಟ್ಟು ಬೀಚ್, ದುಗ್ಗುಪ್ಪಾಡಿ ಸಹಿತ ಮತ್ತಿತರೆಡೆಗಳ ಸುಮಾರು 500ಕ್ಕೂ ಮಿಕ್ಕಿದ ಮನೆಮಂದಿಗೆ ಮೂರು ದಿನಗಳಿ ಗೊಮ್ಮೆ ಕುಡಿಯುವ ನೀರಿನ ಸರಬರಾಜು ಆರಂಭಿಸಲಾಗಿದೆ.
ಮಾಮೂಲಾಗಿ ಕುಡಿಯುವ ನೀರನ್ನು ಒದಗಿಸುವ ಯೋಜನೆಗಾಗಿ ಕೋಟೆ ಗ್ರಾಮ ಪಂಚಾಯತ್ ಒಟ್ಟು 6 ಬಾವಿಗಳನ್ನು ಹೊಂದಿವೆ. 4 ಕೊಳವೆ ಬಾವಿ, 4 ಹ್ಯಾಂಡ್‌ಪಂಪ್ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾವಿಗಳ ನೀರು ಕೆಂಪು ಬಣ್ಣಯುಕ್ತವಾಗಿ, ಲವಣಾಂಶ ಭರಿತವಾಗಿ, ಸ್ವಾದರಹಿತ ನೀರಾಗಿ ಪರಿವರ್ತಿತ ವಾಗುವುದರಿಂದ ಕುಡಿಯುವ ನೀರಿಗೆ ಸಮಸ್ಯೆ. ಅದರೊಂದಿಗೆ ಈ ಬಾರಿ ಅಂತರ್ಜಲ ಮಟ್ಟ ತೀರಾ ಇಳಿಕೆ ಕಂಡಿದ್ದು ಸಮಸ್ಯೆ ಜಟಿಲವಾಗಿತ್ತು.
ಮಟ್ಟು ಭಾಗದಲ್ಲಿ ಕುಡಿಯುವ ನೀರಿನ ಮೂಲವೇ ಇಲ್ಲವಾಗಿದ್ದು, ಉಪ್ಪು ನೀರಿನ ಸಮಸ್ಯೆ ಇದೆ. ಅನಿವಾರ್ಯವಾಗಿ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡುವ ಅನಿವಾರ್ಯತೆ ಇದೆ ಎಂದು ಪಿ.ಡಿ.ಒ. ಮಾಹಿತಿ ನೀಡಿದ್ದಾರೆ.
ತುರ್ತು ಬೇಸಗೆಗೆ ಕುಡಿಯುವ ನೀರು ಸರಬರಾಜು, ನೀರು ನಿರ್ವಹಣೆ, 13ನೇ
ಹಣಕಾಸಿನಡಿ ನೀರು ನಿರ್ವಹಣೆ ಅನುದಾನ ಬಳಸಿಕೊಂಡು 2015-16ನೇ ಸಾಲಿನಲ್ಲಿ 1,65,088 ರೂಪಾಯಿ, 2016-17ರ ಸಾಲಿನಲ್ಲಿ 3,68,868 ರೂಪಾಯಿ. 2017-18ರಲ್ಲಿ 10,31,078 ರೂ. ಅನುದಾನವನ್ನು ಬಳಸಲಾಗಿತ್ತು.
ನೀರಿಗಾಗಿ ಗ್ರಾ.ಪಂ.ನ ಆಶ್ರಯ ಈ ಭಾಗದಲ್ಲಿ ಉಪ್ಪು ನೀರು ಮತ್ತು ಬಣ್ಣಯುಕ್ತ ಬಾವಿಯ ನೀರಿನಿಂದಾಗಿ ಕುಡಿಯುವ ನೀರಿಗೆ ಗ್ರಾಮ ಪಂಚಾಯತನ್ನು ಆಶ್ರಯಿಸಬೇಕಾಗಿದೆ. ಮನೆ ಬಳಿಗೆ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆಯಿಂದ ಕುಡಿಯುವ ನೀರಿನ ಸಮಸ್ಯೆಯು ಪರಿಹಾರವಾಗುತ್ತಿದೆ.
– ಕುಸುಮಾ, ಲೀಲಾ, ಶೇಖರ ಬಂಗೇರ, ಮಟ್ಟು ನಿವಾಸಿಗರು
– ವಿಜಯ ಆಚಾರ್ಯ ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.