ಕಳಪೆ ಕಾಮಗಾರಿ: ಹದಗೆಟ್ಟ ಅಂಪಾರು – ಕ್ರೋಢಬೈಲೂರು ರಸ್ತೆ
Team Udayavani, Jul 4, 2018, 2:05 AM IST
ಕ್ರೋಢಬೈಲೂರು: ಕ್ರೋಢ ಬೈಲೂರಿಗೆ ಸಂಪರ್ಕ ಕಲ್ಪಿಸುವ ಅಂಪಾರು – ಹೊಸೂರು – ಕ್ರೋಢ ಬೈಲೂರು ರಸ್ತೆ ಹಾಗೂ ಶಾನ್ಕಟ್ಟು – ಕೊಂಡಳ್ಳಿ – ಕ್ರೋಢಬೈಲೂರು ರಸ್ತೆ ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಇದರಿಂದ ಈ ಭಾಗದಲ್ಲಿ ನಿತ್ಯ ಸಂಚರಿಸುವ ನೂರಾರು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಶಾನ್ಕಟ್ಟು ಮಾರ್ಗವಾಗಿ ಕೊಂಡಳ್ಳಿ ಮೂಲಕ ಕ್ರೋಢಬೈಲೂರಿಗೆ 6 ಕಿ.ಮೀ. ಅಂತರವಿದ್ದರೆ, ಅಂಪಾರು ಮಾರ್ಗವಾಗಿ ಹೊಸೂರು ಮೂಲಕ ಕ್ರೋಢಬೈಲೂರಿಗೆ ಕೇವಲ 2 ಕಿ.ಮೀ. ದೂರವಿದೆ. ಆದರೆ ವಿಪರ್ಯಾಸವೆಂದರೆ ಈ ಎರಡೂ ರಸ್ತೆಗಳಲ್ಲಿ ಈಗ ಹೊಂಡ – ಗುಂಡಿಗಳದ್ದೇ ಕಾರುಬಾರು.
ಕಳಪೆ ಕಾಮಗಾರಿ
ಅಂಪಾರು – ಕ್ರೋಢ ಬೈಲೂರು ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಡಾಮರೀಕರಣಗೊಂಡ ಅತ್ಯಲ್ಪ ಸಮಯದಲ್ಲೇ ತೀವ್ರ ಹದಗೆಟ್ಟು ಹೋಗಿದೆ. ಈ ರಸ್ತೆಯ 500 ಮೀಟರ್‌ನಷ್ಟು ದೂರ ಇನ್ನೂ ಕೂಡ ಡಾಮರೀಕರಣ ಆಗಿಲ್ಲ. ಬಾಕಿ ಉಳಿದ ಭಾಗ ಡಾಮರೀಕರಣಗೊಂಡ 2 ವರ್ಷಗಳಷ್ಟೇ ಆಗಿದೆ. ಇನ್ನೂ ಶಾನ್ಕಟ್ಟು ಕೊಂಡಳ್ಳಿ – ಕ್ರೋಢಬೈಲೂರು ರಸ್ತೆ ದುರಸ್ತಿಯಾಗದೇ 4-5 ವರ್ಷಗಳೇ ಆಗಿವೆ. ಈ ಭಾಗದಿಂದ ಅನೇಕ ಮಂದಿ ವಿದ್ಯಾರ್ಥಿಗಳು ಸೇರಿದಂತೆ ಕೆಲಸಕ್ಕಾಗಿ ಶಂಕರನಾರಾಯಣ ಕಡೆಗೆ ಸಂಚರಿಸುತ್ತಾರೆ. ಪ್ರತಿ ದಿನ ಕ್ರೋಢಬೈಲೂರಿಗೆ 1 ಸರಕಾರಿ ಹಾಗೂ 2 ಖಾಸಗಿ ಬಸ್‌ಗಳು ಈ ಹೊಂಡ – ಗುಂಡಿಗಳ ರಸ್ತೆಯಲ್ಲಿಯೇ ನಿತ್ಯ 5 ಟ್ರಿಪ್ ನಲ್ಲಿ ಸಂಚರಿಸುತ್ತವೆ.
ಬಂದ ಅನುದಾನ ಬೇರೆ ರಸ್ತೆಗೆ?
ಅಂಪಾರು- ಕ್ರೋಢಬೈಲೂರು ರಸ್ತೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ ಅನುದಾನ ಬಂದಿದ್ದರೂ, ಅದನ್ನು ಈ ರಸ್ತೆಗೆ ಬಳಸದೇ ಬೇರೆ ರಸ್ತೆಗೆ ನೀಡಿ, ಈ ಭಾಗಕ್ಕೆ ವಂಚಿಸಿದ್ದಾರೆ ಎನ್ನುವ ಆರೋಪ ಕ್ರೋಢಬೈಲೂರು ನಾಗರಿಕರದು.
ಸಂಚಾರವೇ ದುಸ್ತರ
ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಈಗ ಹೊಂಡ – ಗುಂಡಿಗಳಿಂದಾಗಿ ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಶೀಘ್ರ ಸಂಬಂಧಪಟ್ಟವರು ದುರಸ್ತಿಪಡಿಸಲು ಮುಂದಾಗಲಿ.
– ಭುಜಂಗ ಶೆಟ್ಟಿ, ಕ್ರೋಢಬೈಲೂರು
ದೂರಿತ್ತರೂ ಪ್ರಯೋಜನವಿಲ್ಲ
ಶಾನ್ಕಟ್ಟು – ಕೊಂಡಳ್ಳಿ- ಕ್ರೋಢಬೈಲೂರು ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ತೀರಾ ಹದಗೆಟ್ಟು ಹೋಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ದೂರು ನೀಡಿದರೂ, ಅವರದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ರಸ್ತೆ ದುರಸ್ತಿಯಾಗದೇ 4-5 ವರ್ಷಗಳೇ ಕಳೆದಿವೆ.
– ಚಂದ್ರಶೇಖರ ಶೆಟ್ಟಿ, ಕೊಂಡಳ್ಳಿ
ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆ
ಅಂಪಾರು- ಕ್ರೋಢಬೈಲೂರು ರಸ್ತೆ ಡಾಮರಾಗಿದ್ದರೂ, ಇಲ್ಲಿ ರಸ್ತೆ ಬದಿ ಮರಗಳೆಲ್ಲ ಹೆಚ್ಚಾಗಿರುವುದಿರಿಂದ ನೀರು ರಸ್ತೆಗೆ ಬಿದ್ದು ಹಾಳಾಗುತ್ತಿದೆ. ಇನ್ನೂ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯಲ್ಲಿ ಡಾಮರಾಗಿದೆ.ಆದರೆ ಅಂಪಾರು ಗ್ರಾ.ಪಂ. ವಾಪ್ತಿಯಲ್ಲಿ ಡಾಮರೇ ಆಗಿಲ್ಲ. ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಬೇರೆ ಯಾವ ಅನುದಾನವೂ ಬಂದಿಲ್ಲ.
– ಸದಾಶಿವ ಶೆಟ್ಟಿ, ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷರು
— ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.