ಸಾಲಿಗ್ರಾಮ ಪ.ಪಂ.: ಬಗೆಹರಿಯದ ಕಸ ವಿಲೇವಾರಿ ಸಮಸ್ಯೆ
Team Udayavani, Dec 5, 2018, 1:55 AM IST
ಕೋಟ: ಸಾಲಿಗ್ರಾಮ ಪ.ಪಂ.ನಲ್ಲಿ ತ್ಯಾಜ್ಯ ವಿಲೇವಾರಿ ಅತೀ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸೆ. 18ರಿಂದ ಸ್ಥಳೀಯಾಡಳಿತ ಹಸಿ ಕಸ ಸಂಗ್ರಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಇದರಿಂದಾಗಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದ್ದು, ಪ್ರತಿ ರಸ್ತೆಯಲ್ಲೂ ರಾಶಿ-ರಾಶಿ ಕಸ ಕಣ್ಣಿಗೆ ರಾಚುತ್ತಿದೆ.
ಎಲ್ಲೆಲ್ಲೂ ಕಸದ ರಾಶಿ
ಕಸ ಸ್ವೀಕರಿಸುವುದನ್ನು ದಿಢೀರ್ ಸ್ಥಗಿತಗೊಳಿಸಿದ ಮೇಲೆ ಜನರು ರಸ್ತೆ ಬದಿಗೆ ಕಸ ತಂದು ಎಸೆಯತೊಡಗಿದ್ದಾರೆ. ಇದರ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸಾಲಿಗ್ರಾಮ-ಪಾರಂಪಳ್ಳಿ ರಸ್ತೆ, ಕಾರ್ಕಡ-ಕಾವಡಿ ರಸ್ತೆ, ಪಡುಕರೆ ರಸ್ತೆ, ಕೋಟ-ಬನ್ನಾಡಿ ರಸ್ತೆ ಹೀಗೆ ಪ್ರಮುಖ ರಸ್ತೆಗಳ ಇಕ್ಕೆಲ್ಲದಲ್ಲಿ ಕಸದ ರಾಶಿ, ಕೊಳೆತ ತ್ಯಾಜ್ಯ ಸಂಗ್ರಹವಾಗಿದ್ದು, ವಾತಾವರಣ ಸಂಪೂರ್ಣ ಹಾಳಾಗಿದೆ.
ಬಿಗಡಾಯಿಸಿದೆ ಸಮಸ್ಯೆ
ಪ.ಪಂ. ವ್ಯಾಪ್ತಿಯ 16 ವಾರ್ಡ್‌ಗಳ ಸುಮಾರು 1500 ಮನೆ ಹಾಗೂ 5 ವಸತಿ ಸಂಕಿರ್ಣಗಳು, 10ಕ್ಕೂ ಹೆಚ್ಚು ಹೋಟೆಲ್, ತರಕಾರಿ ಮಾರುಕಟ್ಟೆ, ನಾಲ್ಕೈದು ಕಲ್ಯಾಣ ಮಂಟಪ ಮುಂತಾದ ಕಡೆಗಳಿಂದ ಪ್ರತಿದಿನ ಸುಮಾರು 4ಟನ್ ಕಸ ಸಂಗ್ರಹವಾಗುತ್ತದೆ. ಹೀಗಾಗಿ ಈ ಕಸವನ್ನು ವಿಲೇವಾರಿ ಮಾಡುವುದು ಜನರಿಗೆ ಸಮಸ್ಯೆಯಾಗಿದೆ. ಕಸ ಸ್ವೀಕರಣೆ ಸ್ಥಗಿತಗೊಳಿಸುವ ಸಂದರ್ಭ ಹಸಿಕಸ ಮನೆಯಲ್ಲೇ ಕಾಂಪೋಸ್ಟ್ ಮುಂತಾದ ವಿಧಾನದ ಮೂಲಕ ವಿಲೇವಾರಿ ಮಾಡುವಂತೆ ಪಟ್ಟಣ ಪಂಚಾಯತ್ ಸಲಹೆ ನೀಡಿತ್ತು. ಆದರೆ ಯಾರೂ ಕೂಡ ಈ ವಿಧಾನವನ್ನು ಬಳಸಿಕೊಂಡಿಲ್ಲ.
ಪರ್ಯಾಯ ದಾರಿಯೇನು?
ಈ ಹಿಂದೆ ಪ.ಪಂ. ಎಸ್.ಎಲ್.ಆರ್.ಎಂ. ಘಟಕ ನಿರ್ಮಿಸುವ ಸಲುವಾಗಿ ಉಳೂ¤ರಿನಲ್ಲಿರುವ ಸ್ಥಳ ಖರೀದಿ ನಡೆಸಿತ್ತು. ಆದರೆ ಅಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಅದಕ್ಕೆ ಹಿನ್ನಡೆಯಾಯಿತು. ಅನಂತರ ಸಾಲಿಗ್ರಾಮದ ಹಲವು ಕಡೆಗಳಲ್ಲಿ ಜಾಗ ಗುರುತಿಸಲಾಯಿತು. ಆದರೆ ಸ್ಥಳೀಯರ ವಿರೋಧದಿಂದ ಅದಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಇದೀಗ ಸಮಗ್ರ ತ್ಯಾಜ್ಯ ನಿರ್ವಹಣೆ ಪರಿಕಲ್ಪನೆಯಡಿ ವೈಜ್ಞಾನಿಕವಾಗಿ ವಿಲೇವಾರಿ ಸ್ವಚ್ಛಾಸ್ತ್ರ ಯೋಜನೆ ಅಳವಡಿಸಿಕೊಳ್ಳುವುದೊಂದೇ ಪರಿಹಾರ ಎನ್ನುವ ನಿರ್ಧಾರಕ್ಕೆ ಸ್ಥಳೀಯಾಡಳಿತ ಬಂದಿದೆ. ಕಾರ್ಕಡದಲ್ಲಿ ಲಭ್ಯವಿರುವ 10 ಎಕ್ರೆ ಸರಕಾರಿ ಜಮೀನಿನಲ್ಲಿ ಘಟಕ ಸ್ಥಾಪಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.
ಶೀಘ್ರ ಪರಿಹಾರ
ಕಸದ ಸಮಸ್ಯೆ ಪರಿಹಾರಕ್ಕೆ ಸಮಗ್ರ ತ್ಯಾಜ್ಯ ನಿರ್ವಹಣೆ ಪರಿಕಲ್ಪನೆಯ ಸ್ವಚ್ಛಾಸ್ತ್ರ ಘಟಕವನ್ನು ಸ್ಥಾಪಿಸುವ ತಯಾರಿ ನಡೆಸಿದ್ದು, ಕಂಪನಿಯ ಜತೆಗೆ ಮಾತುಕತೆ ನಡೆದಿದೆ. ಡಿಸೆಂಬರ್ ಅಂತ್ಯದೊಳಗೆ ಪ್ರಾಯೋಗಿಕವಾಗಿ ಯಂತ್ರವನ್ನು ಅಳವಡಿಸಲಿದ್ದು, ಒಂದು ತಿಂಗಳ ಅನಂತರ ಶಾಶ್ವತ ಘಟಕ ತೆರೆದುಕೊಳ್ಳಲಿದೆ. ಒಂದು ತಿಂಗಳ ತರಬೇತಿ ಬಳಿಕ ನಮ್ಮ ಪೌರ ಕಾರ್ಮಿಕರೇ ಇದರ ನಿರ್ವಹಣೆ ನಡೆಸಲಿದ್ದಾರೆ.
– ಅರುಣ್ ಬಿ., ಮುಖ್ಯಾಧಿಕಾರಿ ಸಾಲಿಗ್ರಾಮ
— ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.