ರಸ್ತೆ ಕಾಮಗಾರಿಗೆ ಅಳವಡಿಸಿದ ಕ್ರಶರ್‌ನಿಂದ ಧೂಳಿನ ಕಾಟ
Team Udayavani, Jan 24, 2019, 12:50 AM IST
ಕಟಪಾಡಿ: ಮಟ್ಟು ಕಡಲ ಕಿನಾರೆಯ ಬಳಿಯ ರಸ್ತೆ ದುರಸ್ಥಿ ಕಾಮಗಾರಿಯಿಂದಾಗಿ ಸ್ಥಳೀಯ ನಿವಾಸಿಗಳು ನಿತ್ಯ ಕ್ರಶರ್ ಧೂಳು ತಿನ್ನುವ ಸಂಕಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಗಾಯದ ಮೇಲೆ ಉಪ್ಪು ಸವರಿದಂತೆ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿರುವುದು ಜನರನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.
ನಿತ್ಯ ಧೂಳು ತಿನ್ನುವ ಜನ
ಮಳೆಯಿಂದಾಗಿ ಹಾನಿಗೊಂಡಿದ್ದ ಉಳಿಯಾರಗೋಳಿ-ಪಡುಕರೆ-ಮಲ್ಪೆ ಸಂಪರ್ಕದ ರಸ್ತೆ ದುರಸ್ತಿ ಕಾಮಗಾರಿಗೆ ಡಿ.16ರಂದು ಮಳೆಹಾನಿ ದುರಸ್ತಿ ಯೋಜನೆಯಡಿ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಮಟ್ಟು ಬೀಚ್ ಬಳಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರು 1.50 ಕಿ.ಮೀ. ವ್ಯಾಪ್ತಿಯ ಈ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದ್ದರು. ಬೆರಳೆಣಿಕೆಯ ದಿನಗಳಲ್ಲಿಯೇ ಕಾಮಗಾರಿ ಆರಂಭಗೊಂಡಿತ್ತು. ಇನ್ನೇನು ಶೀಘ್ರದಲ್ಲಿಯೇ ಕಾಮಗಾರಿ ನಡೆದು ಸುವ್ಯವಸ್ಥಿತ ಸಂಚಾರಕ್ಕೆ ಅವಕಾಶ ಆಗ ಬಲ್ಲುದು ಎಂದು ನಿಟ್ಟುಸಿರುಬಿಟ್ಟ ಈ ಭಾಗದ ಜನತೆಗೆ ಇದೀಗ ನಿತ್ಯ ನಿರಾಶೆ ಎದುರಿಸುವಂತಾಗಿದೆ.
ಊಟ, ಆಹಾರ ಸೇವಿಸುವಂತಿಲ್ಲ
ರಸ್ತೆ ದುರಸ್ತಿ ಕಾಮಗಾರಿಗೆ ಅಳವಡಿಸಲಾದ ಜಲ್ಲಿ, ಕ್ರಶರ್ ಹುಡಿಯು ವಾಹನಗಳ ಸಂಚಾರದ ಸಂದರ್ಭ ಎದ್ದೇಳುವ ಧೂಳಿನಿಂದ ಮನೆಯೊಳಗೆ ಊಟ, ಆಹಾರ ಸೇವಿಸುವಂತಿಲ್ಲ. ಏಕೆಂದರೆ ಈ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಏಳುವ ಕ್ರಶರ್‌ಹುಡಿಯ ಧೂಳಿನ ರಾಶಿ ಮನೆಗಳ ಒಳಗೂ ಆವರಿಸಿದೆ. ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದ್ದು, ವಯೋವೃದ್ಧರು ಹೆಚ್ಚು ಕಷ್ಟ ಪಡುವಂತಾಗಿದೆ.
ಬೇಗ ಕಾಮಗಾರಿ ಮುಗಿಸಲು ಒತ್ತಾಯ
ಕಡಲ ಕಿನಾರೆಯಾದುದರಿಂದ ಇಲ್ಲಿ ವಾಹನ ಸಂಚಾರದ ಸಂದರ್ಭ ಏಳುವ ಈ ಕ್ರಶರ್ ಧೂಳು ಸುಮಾರು ಒಂದೂವರೆ ಫರ್ಲಾಂಗ್ ದೂರದವರೆಗೂ ಬೀಸುವ ಗಾಳಿಯಲ್ಲಿ ಹಾರುತ್ತದೆ. ಬಟ್ಟೆ ಒಣಗಿಸಲೂ ಸಾಧ್ಯವಿಲ್ಲ. ಬೈಕ್ ಸವಾರರಿಗಂತೂ ದೊಡ್ಡ ವಾಹನಗಳು ಓಡಾಡುವ ವೇಳೆ ತೀರಾ ಸಮಸ್ಯೆಯಾಗುತ್ತಿದೆ. ಸ್ಥಳೀಯರು ಕಾಮಗಾರಿ ವಿರೋಧಿಸುತ್ತಿಲ್ಲ. ಆದರೆ ಸಮಸ್ಯೆಗೆ ಮುಕ್ತಿ ನೀಡುವಂತೆ ಜರೂರು ಕಾಮಗಾರಿ ಮುಗಿಸುವಂತೆ ಆಗ್ರಹಿಸುತ್ತಿದ್ದಾರೆ.
ಅಧಿಕ ಭಾರದ ವಾಹನಗಳ ಭರಾಟೆ
ಈ ಭಾಗದಲ್ಲಿ ಸಂಚರಿಸುವ ಅಧಿಕ ಭಾರದ ವಾಹನಗಳ ಭರಾಟೆಯಿಂದಾಗಿ ಹೆಚ್ಚು ಧೂಳು ಏಳುತ್ತಿದೆ. ಈ ಭಾಗದಲ್ಲಿ ಧೂಳು ಏಳದಂತೆ ದಿನಕ್ಕೆ ಮೂರು, ನಾಲ್ಕು ಬಾರಿಯಾದರೂ ನೀರು ಸಿಂಪಡಿಸಿ ತಾತ್ಕಾಲಿಕ ಕ್ರಮ ಕೈಗೊಳ್ಳುವಂತೆ ಜನತೆ ಒತ್ತಾಯಿಸುತ್ತಿದ್ದಾರೆ.
ಸಮಸ್ಯೆ ಸರಿಪಡಿಸಲು ಸೂಚನೆ
ಒವರ್ ಲೋಡ್ ಲಾರಿ ಸಂಚಾರ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ. 2-3 ದಿನಗಳೊಳಗೆ ಡಾಮರು ಹಾಕುವ ಪ್ರಕ್ರಿಯೆ ಆರಂಭಿಸಲು ಮತ್ತು ತಾತ್ಕಾಲಿಕವಾಗಿ ನೀರು ಸಿಂಪಡಣೆಯ ಮೂಲಕ ಧೂಳು ಏಳದಂತೆ ಜಾಗ್ರತೆ ವಹಿಸಿ ಸಮಸ್ಯೆ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
-ಜಗದೀಶ್ ಭಟ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.