ಖಜಾನೆ-2: ಇ-ಪಾವತಿ ವ್ಯವಸ್ಥೆ ಉಡುಪಿಯಲ್ಲಿ ಯಶಸ್ವಿ; ರಾಜ್ಯಕ್ಕೆ ವಿಸ್ತರಣೆ


Team Udayavani, May 28, 2019, 6:10 AM IST

e-payment

ಉಡುಪಿ: ಜಿ.ಪಂ, ತಾ.ಪಂ. ಬಿಲ್‌ ಪಾವತಿ ಪಾರದರ್ಶಕವಾಗಿರಬೇಕೆಂಬ ಉದ್ದೇಶದಿಂದ ಉಡುಪಿ ಜಿಲ್ಲಾಮಟ್ಟದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ಖಜಾನೆ-2 (ಕೆ2) ಆನ್‌ಲೈನ್‌ ಪಾವತಿ ವ್ಯವಸ್ಥೆ ಯಶಸ್ವಿಯಾಗಿದ್ದು, ಈಗ ರಾಜ್ಯಕ್ಕೆ ವಿಸ್ತರಣೆಗೊಂಡಿದೆ.

ಆಧಾರ್‌ ಅನಂತರ ಕೆ2ನಲ್ಲಿಯೂ ಉಡುಪಿ ಜಿಲ್ಲೆ ಸರಕಾರದ ಮಹತ್ವದ ಯೋಜನೆಯನ್ನು ಪ್ರಾಯೋಗಿಕವಾಗಿ ಸಮರ್ಪಕವಾಗಿ ಜಾರಿಗೊಳಿಸು ವಲ್ಲಿ ಸಫ‌ಲವಾದಂತಾಗಿದೆ. ಈ ಹಿಂದೆ ಆಧಾರ್‌ ಯೋಜನೆ ಜಾರಿಗೂ ಉಡುಪಿ ಪ್ರಾಯೋಗಿಕ ಜಿಲ್ಲೆಯಾಗಿತ್ತು. ಕೆ2 ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಉಡುಪಿ ಜತೆಗೆ ಗದಗವನ್ನೂ ಆಯ್ಕೆ ಮಾಡಲಾಗಿದ್ದು, ಇವೆರಡೂ ಯಶ ಸಾಧಿಸಿವೆ.

ಉಡುಪಿಯಲ್ಲಿ ಕಳೆದ ಅಕ್ಟೋಬರ್‌- ನವೆಂಬರ್‌ ನಲ್ಲಿ ಈ ಹೊಸ ವ್ಯವಸ್ಥೆ ಜಾರಿಯಾಗಿತ್ತು. ಜಿ.ಪಂ./ ತಾ.ಪಂ. ಆಡಳಿತ ವ್ಯಾಪ್ತಿ ಯಲ್ಲಿ ಬರುವ ಶಿಕ್ಷಣ, ಸಮಾಜ ಕಲ್ಯಾಣ, ಮೀನುಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ವಸತಿ ನಿಲಯಗಳು ಮೊದಲಾದವುಗಳ ನಿರ್ವಹಣೆ ವೆಚ್ಚ, ಕಾಮಗಾರಿಗಳ ಮೊತ್ತಗಳು, ಫ‌ಲಾನುಭವಿಗಳಿಗೆ ದೊರೆಯುವ ಸಹಾಯಧನ ಮತ್ತು ಇತರ ಹಣಕಾಸು ಸೌಲಭ್ಯಗಳ ಬಿಲ್‌ಗ‌ಳು ಕೆ2ನಲ್ಲೇ ಪಾವತಿಯಾಗುತ್ತಿವೆ.

ಈ ತಿಂಗಳು 4 ಇಲಾಖೆಗಳ ವೇತನ
ಈಗಾಗಲೇ ಎಪ್ರಿಲ್‌ನಿಂದ ಖಜಾನೆ ಇಲಾಖೆಯ ವೇತನ ಕೆ2ನಲ್ಲಿ ಪಾವತಿಯಾಗುತ್ತಿದೆ. ಈ ತಿಂಗಳು ಅಬಕಾರಿ, ನೋಂದಣಿ ವಿಭಾಗ, ವಾಣಿಜ್ಯ ತೆರಿಗೆ, ಸಾರಿಗೆ ಹೀಗೆ ನಾಲ್ಕು ಇಲಾಖೆಗಳ ವೇತನ ಇದರಲ್ಲೇ ಪಾವತಿಯಾಗಲಿದೆ. ಮುಂದಿನ ಹಂತ ಗಳಲ್ಲಿ ಎಲ್ಲ ಇಲಾಖೆಗಳ ವೇತನ ಕೂಡ ಹೀಗೇ ಪಾವತಿಯಾಗಲಿದೆ. ಉಡುಪಿಯ ಅನಂತರ ಬೀದರ್‌, ಧಾರವಾಡ, ಚಿತ್ರದುರ್ಗಾ ಬಳ್ಳಾರಿ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಆ ಬಳಿಕ ಎ.1ರಿಂದ ಉಳಿದೆಲ್ಲ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ.

ಗ್ರಾ.ಪಂ.ಗಳಿಗೂ ಕೆ2?
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಮತ್ತು ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪ.ಪಂ.ಗಳಿಗೆ ಸಂಬಂಧಿಸಿದ ವೇತನ ಮತ್ತು ವೇತನೇತರ ಪಾವತಿಗಳು ಮೇ ತಿಂಗಳಿನಿಂದ ಖಜಾನೆ 2ನಲ್ಲಿಯೇ ಆನ್‌ಲೈನ್‌ ಮೂಲಕ ನಡೆಯುತ್ತಿವೆ. ಮುಂದಿನ ಹಂತದಲ್ಲಿ ಗ್ರಾ.ಪಂ.ಗಳಲ್ಲಿಯೂ ಇದೇ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಗಳಿವೆ.

ನೇರ ಜಮೆ, ಚೆಕ್‌ ಪದ್ಧತಿ ರದ್ದು
ಕೆ2 ಅಂತಾರಾಷ್ಟ್ರೀಯ ಹಣಕಾಸು ನಿರ್ವಹಣಾ ವ್ಯವಸ್ಥೆ (ಐಎಫ್ಎಂಎಸ್‌) ಅಡಿಯಲ್ಲಿ ಅನುಷ್ಠಾನ ಗೊಂಡಿದೆ. ಅಂತರ್ಜಾಲದ ಮೂಲಕವೇ ನಡೆಯುವ ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸರಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳು ಮತ್ತು ವಿವಿಧ ಇಲಾಖೆಗಳಿಗೆ ಸರಕು ಸಾಮಗ್ರಿಗಳ ಸರಬರಾಜು ಮತ್ತು ಸೇವೆ ನೀಡುವವರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಜಿಲ್ಲಾ ಖಜಾನೆಯಿಂದ ಚೆಕ್‌ ನೀಡುವ ಪದ್ಧತಿ ರದ್ದಾಗುತ್ತದೆ. ರಾಜ್ಯಮಟ್ಟದಲ್ಲಿ ಇಲಾಖೆಗಳ ಪಾವತಿ ಕೆ2ಗೆ ಎರಡು ವರ್ಷಗಳ ಹಿಂದೆಯೇ ಜೋಡಣೆಯಾಗಿತ್ತು. ಈಗ ಜಿ.ಪಂ., ತಾ.ಪಂ.ಗಳು ಕೂಡ ಇದರಡಿ ಬಂದು ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗುತ್ತಿದೆ.

ಕೆ2 ಇ-ಪಾವತಿ ಪ್ರಯೋಜನ
– ಸರಬರಾಜುದಾರರು/ ಗುತ್ತಿಗೆದಾರರ ಖಾತೆಗೆ ನೇರ ಪಾವತಿ.
– ಫ‌ಲಾನುಭವಿ/ಸರಬರಾಜುದಾರರಿಗೆ ತ್ವರಿತ ಪಾವತಿ
– ಮಧ್ಯವರ್ತಿಗಳಿಗೆ ಅವಕಾಶವಿಲ್ಲ
– ಪಾರದರ್ಶಕತೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯ
– ಸಿಬಂದಿಯ ಬಿಲ್‌ ಪ್ರಕ್ರಿಯೆಯ ಹೆಚ್ಚುವರಿ ಹೊರೆ ಇಳಿಕೆ
– ಫ‌ಲಾನುಭವಿಗಳ ಖಾತೆಗೆ ನೇರ ಜಮೆ

ಜಿ.ಪಂ. ಮತ್ತು ತಾ.ಪಂ. ಮಟ್ಟದಲ್ಲಿಯೂ ಕೆ2 ವ್ಯವಸ್ಥೆ ಇಡೀ ರಾಜ್ಯದಲ್ಲಿ ಎಪ್ರಿಲ್‌ನಿಂದ ಜಾರಿಗೊಂಡಿದೆ. ಉಡುಪಿಯಲ್ಲಿ ಕೆ2 ವ್ಯವಸ್ಥೆ ನವೆಂಬರ್‌ನಲ್ಲಿ ಜಾರಿಯಾಗಿ ಕಳೆದ ಆರ್ಥಿಕ ವರ್ಷದಲ್ಲಿ ಅದರ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ತಿಂಗಳು 4 ಇಲಾಖೆಗಳ ವೇತನ ಕೂಡ ಕೆ2 ವ್ಯಾಪ್ತಿಗೆ ಬರಲಿದೆ.
– ಸಾವಿತ್ರಿ, ಜಿಲ್ಲಾ ಖಜಾನಾಧಿಕಾರಿ

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.