ಇ- ಆಸ್ತಿ ನೋಂದಣಿ: ತಾಂತ್ರಿಕ ತೊಂದರೆಯಿಂದ ಹಿನ್ನಡೆ
ಸರ್ವರ್ ಸಮಸ್ಯೆ, ಸಿಬಂದಿ ಕೊರತೆಯಿಂದ ತೊಡಕು
Team Udayavani, Dec 9, 2020, 8:16 AM IST
ಸಾಂದರ್ಭಿಕ ಚಿತ್ರ
ಉಡುಪಿ: ಆಸ್ತಿ ರಕ್ಷಣೆ ಹಾಗೂ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯಲ್ಲಿ ಆರಂಭವಾದ ಇ- ಆಸ್ತಿ ನೋಂದಣಿ ಪ್ರಕ್ರಿಯೆ ಕುಂಟುತ್ತ ಸಾಗಿದೆ. ದಾಖಲೆ ನೀಡಿದರೂ, ಈ ತಂತ್ರಾಂಶದೊಳಗೆ ಸೇರ್ಪಡೆಗೊಳ್ಳದ ನಗರವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ತೊಡಕುಗಳು
ಆಸ್ತಿ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿದರೆ, ಆಸ್ತಿ ಹಕ್ಕಿಗೆ ಸಂಬಂಧಿಸಿ ಯಾವುದೇ ಅವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಮತ್ತು ದಾಖಲೆಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ ಮಧ್ಯವರ್ತಿಗಳ ಹಸ್ತಕ್ಷೇಪ ತಪ್ಪುತ್ತದೆ ಎಂಬ ಕಾರಣಕ್ಕೆ ಅನುಷ್ಠಾನಗೊಂಡಿರುವ ಇ- ಆಸ್ತಿ ನೋಂದಣಿ ಕಾರ್ಯಕ್ರಮವು ಇದೀಗ ತಾಂತ್ರಿಕ ಹಾಗೂ ಸಿಬಂದಿ ಕೊರತೆಯಿಂದಾಗಿ ಹಿಂದೆ ಬಿದ್ದಿದೆ.
20,000 ಕಟ್ಟಡ ಇ-ಖಾತೆ
ನಗರದಲ್ಲಿ 67,123 ಕಟ್ಟಡಗಳಿವೆ. ಅವುಗಳಲ್ಲಿ 20,000 ಇ ಖಾತೆಯಾಗಿದೆ. ಇನ್ನೂ 2,510 ಸೈಟ್‌ಗಳ ಇ-ಖಾತೆಯಾಗಿದೆ ಎಂದು ನಗರಸಭೆ ಅಂಕಿ ಅಂಶಗಳು ಹೇಳುತ್ತಿವೆ.
ನೋಂದಣಿಯಾಗಲು ಏನೆಲ್ಲ ಬೇಕು ?
ಆರ್‌ಟಿಸಿ ಪ್ರತಿ, ಸರಕಾರಿ ಮಂಜೂರು ಪತ್ರ, ಲೇಔಟ್ ನಕ್ಷೆ, ಸರ್ವೆ ನಕ್ಷೆ, ಕಟ್ಟಡ ಪರವಾನಿಗೆ ಪತ್ರ, ಕಟ್ಟಡದ ನೀಲಿ ನಕ್ಷೆ, ಅನುಭೋಗ ಪತ್ರ, ಆಸ್ತಿ ತೆರಿಗೆ ವಿವರ ಹಾಗೂ ಪಾವತಿ, ನೀರಿನ ಕರದ ಪಾವತಿ, ಮನೆ, ನಿವೇಶನದ ಚಿತ್ರ, ಆಧಾರ್ ಸಂಖ್ಯೆ, ವಿದ್ಯುತ್ ಬಿಲ…, ಮ್ಯುಟೇಷನ್ ದಾಖಲೆ, ಮಾಲಕರ ಚಿತ್ರ, ಬ್ಯಾಂಕ್ ಸಾಲದ ಬಗ್ಗೆ ದಾಖಲೆ ಹಾಗೂ ಕ್ರಯ, ದಾನ, ಹಕ್ಕು ಖುಲಾಸೆ ಅಥವಾ ಬದಲಾವಣೆಯ ಆದೇಶದ ಪ್ರತಿಗಳನ್ನು ಮನೆ ಮಾಲಕರು ನಗರಸಭೆಗೆ ನೀಡಬೇಕು.
ಸರ್ವರ್ ಸಮಸ್ಯೆ!
ದಾಖಲೆ ಪೂರೈಕೆ ಮಾಡಿದರೂ ಸರ್ವರ್ ಸಮಸ್ಯೆಯಿಂದಾಗಿ ಜನರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಇ -ಖಾತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬಂದಿ ನೀಡದ ಹಿನ್ನೆಲೆಯಲ್ಲಿ ಕೆಲಸಗಳು ಆಮೆ ನಡಿಗೆಯಂತಾಗಿವೆ. ಈ ನಿಟ್ಟಿನಲ್ಲಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ 4 ಮಂದಿಯನ್ನು ಕಂದಾಯ ವಿಭಾಗದಲ್ಲಿ ಕೆಲಸ ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಕುರಿತು ನಿರ್ಣಯವಾಗಿತ್ತು. ಅಂತೆಯೇ ಸಿಬಂದಿ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ನಿತ್ಯ 22 ಅರ್ಜಿಗಳು!
ನಗರಸಭೆಯಲ್ಲಿ ಖಾತೆ ಹಾಗೂ ಇ- ಖಾತೆಗೆ ಸಂಬಂಧಿಸಿದಂತೆ ನಾಲ್ಕು ಸಿಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇ-ಖಾತೆಯಲ್ಲಿ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದು, ನಿತ್ಯ ಒಬ್ಬರಿಗೆ 10ರಿಂದ 12 ಇ-ಖಾತೆಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇದರ ವಿಲೇವಾರಿಗೆ 45 ದಿನಗಳ ಗಡುವು ಸರಕಾರ ನಿಗದಿ ಪಡಿಸಿದೆ.
ಕಾಲ ಮಿತಿಯೊಳಗೆ ವಿಲೇವಾರಿ
ಪ್ರಸ್ತುತ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡಲಾಗುತ್ತಿದೆ. ಜನರು ಮುಂದೆ ಬಂದು ಇ-ಆಸ್ತಿ ನೋಂದಣಿ ಮಾಡುವಲ್ಲಿ ಆಸಕ್ತಿ ತೋರುತ್ತಿದ್ದಾರೆ.
-ಧನಂಜಯ, ಅಧಿಕಾರಿ, ಕಂದಾಯ ವಿಭಾಗ, ನಗರಸಭೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.