“ಶ್ರಮ, ಶ್ರದ್ಧೆಯಿಂದ ಯಕ್ಷಗಾನದ ಉಳಿವು’
Team Udayavani, Mar 16, 2017, 2:13 PM IST
ಸಿದ್ದಾಪುರ: ಯಕ್ಷಗಾನ ಕಲಾವಿದರ ಶ್ರಮ, ಶ್ರದ್ಧೆ, ನೈಜತೆ ಯಿಂದ ಕಲಾ ಸಂಪತ್ತು ಉಳಿವಿಗೆ ಸಾಧ್ಯ. ಎಂದು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿàದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಅವರು ಹೇಳಿದರು.
ಅವರು ವೇ|ಮೂ| ಹಳ್ಳಿ ವೆಂಕಟೇಶ್ ಭಟ್ ಬೆಳ್ವೆ ಅವರು ಬೆಳ್ವೆ ಗಣೇಶ ಕಿಣಿ ಅವರ ಮನೆಯ ವಠಾರದಲ್ಲಿ ನಡೆಸಿದ ಶ್ರೀ ಕ್ಷೇತ್ರ ಕಮಲಶಿಲೆಯ ಎರಡು ಮೇಳಗಳ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಗಣ್ಯರನ್ನು ಸಮ್ಮಾನಿಸಿ ಮಾತನಾಡಿದರು.
ದೇವರ ಮೇಲಿನ ನಂಬಿಕೆಯಿಂದ ಜನರ ನಿತ್ಯ ಜೀವನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುತ್ತಿದ್ದಾರೆ. ಯಕ್ಷಗಾನ ಕಲಾವಿದರು, ಕಲೆ, ಕರ್ತವ್ಯ ನಿಷ್ಠೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಲೆಗಳ ಮೂಲಕ ಮಕ್ಕಳಲ್ಲಿ ಧಾರ್ಮಿಕ ಹಿತ ಚಿಂತನೆಗಳ ಅರಿವು ಮೂಡಬೇಕು. ವೇ|ಮೂ| ಹಳ್ಳಿ ವೆಂಕಟೇಶ್ ಭಟ್ ಅವರು ಯಕ್ಷಗಾನ ಕಲಾಭಿಮಾನಿ ಯಾಗಿ ಯಕ್ಷಗಾನ ಕ್ಷೇತ್ರದ ಮೂಲಕ ನೀಡುತ್ತಿರುವ ಕೊಡುಗೆ ಪ್ರಶಂಸನೀಯ ಎಂದರು.
ವೇ|ಮೂ| ಹಳ್ಳಿ ವೆಂಕಟೇಶ್ ಭಟ್ ಬೆಳ್ವೆ ಮಾತನಾಡಿ, ಪೌರಾಣಿಕ ಪ್ರಸಂಗಗಳಿಂದ ಯಕ್ಷಗಾನ ಕಲೆಯ ಘನತೆ ಗೌರವ ಹೆಚ್ಚುತ್ತಿದೆ. ಕಲಾವಿದರ ಕಲಾ ನಿಪುಣತೆಯಿಂದ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಮೇಳಗಳಲ್ಲಿ ಕಲೆಯ ಮೂಲ ಸ್ವರೂಪವನ್ನು ಕಳೆದು ಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜನರ ಹಾಗೂ ಸಮಾಜದ ಅಭಿವೃದ್ಧಿಯ ಹಿತ ಚಿಂತಕರು ಹಾಗೂ ವೃತ್ತಿ ಗೌರವ ಸಲ್ಲಿಸುವವರು ಸಮಾಜದಲ್ಲಿ ಗೌರವಕ್ಕೆ ಅರ್ಹರು. ಸಾಧಕರನ್ನು ಗೌರವಿಸಿ ಸಮ್ಮಾನಿಸುವ ಕಾರ್ಯದಿಂದ ಇನ್ನಷ್ಟು ಸಾಧನೆಗೆ ಪ್ರೇರಣಿ ನೀಡಿದಂತಾಗುತ್ತದೆ. ಉತ್ತಮ ಸೇವಾ ಮನೋಭಾವನೆ ವ್ಯಕ್ತಿಯ ಘನತೆ ಗೌರವವನ್ನು ಹೆಚ್ಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕೊಡುಗೈದಾನಿ ಉದ್ಯಮಿ ಬಿ. ಗಣೇಶ್ ಕಿಣಿ ಬೆಳ್ವೆ, ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಫೌಂಡೇಶನ್ ಟ್ರಸ್ಟ್ ಬೆಳ್ವೆ ಇದರ ಅಧ್ಯಕ್ಷ ಬಿ. ಸತೀಶ್ ಕಿಣಿ ಬೆಳ್ವೆ, ಶಿರೂರು ಮುದ್ದುಮನೆ ಪಾರ್ವತಿ ನಾರಾಯಣ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷ ವೈ. ಜಯರಾಮ ಶೆಟ್ಟಿ ಯಳಂತೂರು, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ವೈ. ಕರುಣಾಕರ ಶೆಟ್ಟಿ ಗೋಳಿಯಂಗಡಿ, ಹಿಲಿಯಾಣ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ತಾರಾನಾಥ ಶೆಟ್ಟಿ ಹಿಲಿಯಾಣ, ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದ ಮೊಕ್ತೇಸರ ಬಿ. ಶಂಕರ ಶೆಟ್ಟಿ ಬೆಳ್ವೆ, ಪತ್ರಕರ್ತ ಕೆ. ಸಂಜೀವ ಆರ್ಡಿ, ನಾಟಿ ವೈದ್ಯ ಭೋಜ ನಾಯ್ಕ ಶೇಡಿಮನೆ ಅವರನ್ನು ಸಮ್ಮಾನಿಸಲಾಯಿತು. ಅನಂತರ ಸಮುದ್ರ ಮಥನ ಯಕ್ಷಗಾನ ಪ್ರದರ್ಶನ ಜರಗಿತು. ಗಣೇಶ್ ಅರಸಮ್ಮಕಾನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.