Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

ಚಿಕ್ಕಿ ತಿನ್ನುವವರಿಲ್ಲ

Team Udayavani, Oct 2, 2023, 7:10 AM IST

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

ಉಡುಪಿ: ಶಾಲಾ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ಚಿಕ್ಕಿ ನೀಡುತ್ತಿದ್ದು, ಅನುದಾನದ ಕೊರತೆಯಿಂದಾಗಿ ಅದರ ಹೆಚ್ಚುವರಿ ಹೊರೆ ಹೆತ್ತವರ ಹೆಗಲಿಗೆ ಬೀಳುವ ಸಾಧ್ಯತೆಯಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಮಧ್ಯಾಹ್ನದ ಉಪಾಹಾರ ಯೋಜನೆಯ ದಾಸೋಹ ವಿಭಾಗದಿಂದ ಓರ್ವ ವಿದ್ಯಾರ್ಥಿಗೆ ಮೊಟ್ಟೆ ಅಥವಾ ಬಾಳೆಹಣ್ಣು ಯಾ ಚಿಕ್ಕಿ ಖರೀದಿಗೆ 6 ರೂ. ನೀಡಲಾಗುತ್ತದೆ. ವಿದ್ಯಾರ್ಥಿಗಳ ಆಯ್ಕೆಗೆ ಅನುಸಾರವಾಗಿ ಶಾಲಾ ಹಂತ ದಲ್ಲಿ ಖರೀದಿಸಿ ನೀಡಲಾಗುತ್ತಿದ್ದು, ಮೊಟ್ಟೆ ತಿನ್ನುವವರ ಸಂಖ್ಯೆಯೇ ಹೆಚ್ಚಿರು ವುದ ರಿಂದ ಶಾಲೆಗಳಿಗೆ ಹೆಚ್ಚುವರಿ ಹೊರೆ ಯಾಗುತ್ತಿದೆ. ಇದನ್ನು ಹೊಂದಿಸಲು ಶಿಕ್ಷಕರು ಬಹು ವಿಧದ ಕಸರತ್ತು ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಏರಿಳಿತವಾಗು ತ್ತಿರುತ್ತದೆ. ಏರಿಕೆಯಾದಾಗ ಅದಕ್ಕೆ ಸರಿ ಹೊಂದಿಸಲು ಹೆಚ್ಚು ವರಿ ಅನುದಾನವನ್ನು ಸರಕಾರ ನೀಡುವುದಿಲ್ಲ. ಬಾಳೆಹಣ್ಣು ಅಥವಾ ಚಿಕ್ಕಿಗೆ ನೀಡುವ ಹಣದಲ್ಲೇ ಸರಿ ಹೊಂದಿಸಿ ಕೊಳ್ಳುವಂತೆ ಸೂಚನೆ ನೀಡಲಾಗಿದೆ. ಬಾಳೆ ಹಣ್ಣು ದರ ಕೂಡ ಏರಿಳಿತವಾಗುತ್ತದೆ. ಸ್ಥಳೀಯ ಬಾಳೆಹಣ್ಣಿಗೆ 7 ರೂ. ವರೆಗೂ ದರವಿದೆ. ಚಿಕ್ಕಿ ಮಾತ್ರ 5 ಯಾ 6 ರೂ.ಗಳಿಗೆ ಸಿಗುತ್ತಿದೆ.

ಮಧ್ಯಾಹ್ನದ ಊಟದ ಜತೆಗೆ ಚಿಕ್ಕಿ ತಿನ್ನುವ ಮಕ್ಕಳ ಸಂಖ್ಯೆ ತೀರಾ ಕಡಿಮೆ. ಆದ್ದರಿಂದ ಮೊಟ್ಟೆಯ ಹೆಚ್ಚುವರಿ ಮೊತ್ತವನ್ನು ಶಾಲಾ ಮಕ್ಕಳ ಹೆತ್ತವರಿಂದಲೇ ಸಂಗ್ರಹಿಸಲು ಕೆಲವು ಶಾಲಾಡಳಿತ ಮಂಡಳಿಗಳು ಚಿಂತನೆ ನಡೆಸುತ್ತಿವೆ.

ವಿದ್ಯಾರ್ಥಿಗಳ ಮಾಹಿತಿ
ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಮೊಟ್ಟೆ ಯಾ ಬಾಳೆಹಣ್ಣು ಯಾ ಚಿಕ್ಕಿಯನ್ನು ಕಳೆದ ಸಾಲಿನಿಂದಲೇ ವಿತರಿಸುತ್ತಿದೆ. ಪ್ರಸಕ್ತ ಸಾಲಿನಿಂದ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೂ ವಿಸ್ತರಿಸಿದೆ. ಉಡುಪಿ ಜಿಲ್ಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ 61 ಸಾವಿರ ಹಾಗೂ 9ರಿಂದ 10ನೇ ತರಗತಿಯಲ್ಲಿ 17 ಸಾವಿರ ವಿದ್ಯಾರ್ಥಿಗಳ ಸಹಿತ ಸುಮಾರು 78 ಸಾವಿರ ವಿದ್ಯಾರ್ಥಿಗಳು ಸರಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 63 ಸಾವಿರ ವಿದ್ಯಾರ್ಥಿಗಳು ಊಟದ ಜತೆಗೆ ಮೊಟ್ಟೆ ಪಡೆಯುತ್ತಿದ್ದಾರೆ. ಸುಮಾರು 9 ಸಾವಿರ ವಿದ್ಯಾರ್ಥಿಗಳು ಬಾಳೆ ಹಣ್ಣು ಪಡೆಯುತ್ತಿದ್ದು, 4 ಸಾವಿರ ವಿದ್ಯಾರ್ಥಿಗಳು ಚಿಕ್ಕಿ ಪಡೆಯುತ್ತಿದ್ದಾರೆ. ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸುವ ದಿನ ಒಂದಿಷ್ಟು ವಿದ್ಯಾರ್ಥಿಗಳು ರಜೆ ಇರುತ್ತಾರೆ. ಹೀಗಾಗಿ ಶೇ. 99ರಷ್ಟು ಮಕ್ಕಳು ಸರಕಾರದ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಇಲಾಖೆಗೆ ಮನವಿ
ಮೊಟ್ಟೆ ಯಾ ಬಾಳೆಹಣ್ಣು ಯಾ ಚಿಕ್ಕಿ ವಿತರಣೆಗೆ ನೀಡು ತ್ತಿರುವ ಘಟಕ ವೆಚ್ಚ ಸಾಕಾಗುತ್ತಿಲ್ಲ. ಮಾರು ಕಟ್ಟೆಯ ದರಕ್ಕೆ ಅನುಗುಣವಾಗಿ ಅನುದಾನ ಒದ ಗಿಸ ಬೇಕು. ಇಲ್ಲವಾದರೆ ವಿತರಣೆ ಕಷ್ಟವಾಗುತ್ತದೆ ಅಥವಾ ಹೆಚ್ಚುವರಿ ಹಣವನ್ನು ಮಕ್ಕಳ ಹೆತ್ತವರಿಂದ ಸಂಗ್ರಹಿಸ ಬೇಕಾಗುತ್ತದೆ. ಕೆಲವು ಎಸ್‌ಡಿಎಂಸಿಗಳು ಇದಕ್ಕೆ ಸಹಕಾರ ನೀಡಿದರೆ, ಕೆಲವರು ನೀಡುವು ದಿಲ್ಲ. ಮೊಟ್ಟೆ ಯಿಂದ ಹೆಚ್ಚುವರಿ ಕೆಲಸವೂ ಆಗುತ್ತಿದೆ. ಇದಕ್ಕೆಲ್ಲ ಇಲಾಖೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂಬ ದೂರನ್ನು ಕೆಲವು ಶಾಲಾಡಳಿತ ಮಂಡಳಿಯವರು ಇಲಾಖೆಯ ಉಪನಿರ್ದೇಶಕರಿಗೆ ತಲುಪಿಸಿದ್ದಾರೆ.

ಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ಚಿಕ್ಕಿ ಒಂದಕ್ಕೆ 6 ರೂ. ನೀಡಲಾಗುತ್ತಿದೆ. ಅನು ದಾನದ ಕೊರತೆಯಾದಲ್ಲಿ ಶಾಲಾ ಹಂತದಲ್ಲೇ ಖರೀದಿಯ ಮೂಲಕ ಸರಿದೂಗಿಸಿಕೊಳ್ಳಲು ತಿಳಿಸಿದ್ದೇವೆ. ಕೆಲವು ಶಾಲೆಗಳಿಂದ ಮನವಿಯೂ ಬಂದಿದೆ. ಸರಕಾರದ ಗಮನಕ್ಕೆ ತಂದಿದ್ದೇವೆ.
– ಕೆ. ಗಣಪತಿ, ಡಿಡಿಪಿಐ, ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಉಡುಪಿ

ಟಾಪ್ ನ್ಯೂಸ್

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Tax

Tax ಸ್ಟಾಂಡರ್ಡ್‌ ಡಿಡಕ್ಷನ್‌ ಒಂದು ಲಕ್ಷ ರೂ.ಗೆ ಏರಿಕೆ?

Goverment-school

Government Scheme; “ನಾವು- ಮನುಜರು’: ಶಾಲೆಗಳಲ್ಲಿ ವಾರಕ್ಕೆ 2 ಗಂಟೆ ಕಾರ್ಯಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

5-byndoor

Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.