EGG ಅಂಗನವಾಡಿಗಳಿಗೆ ಬಾಲ ವಿಕಾಸ ಸಮಿತಿ ಮೂಲಕ ಮೊಟ್ಟೆ ಪೂರೈಕೆ
Team Udayavani, Oct 13, 2023, 11:05 PM IST
ಉಡುಪಿ: ಅಂಗನವಾಡಿ ಗಳಿಗೆ ಗುಣಮಟ್ಟದ ಮೊಟ್ಟೆ ಪೂರೈಕೆ ಯಾಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಯನ್ನು ರದ್ದುಗೊಳಿಸಿ ಬಾಲ ವಿಕಾಸ ಸಮಿತಿ ಮೂಲಕ ಮೊಟ್ಟೆ ಖರೀದಿಗೆ ಸರಕಾರ ಆದೇಶ ಹೊರಡಿಸಿದೆ.
ಗ್ರಾ.ಪಂ. ಅಥವಾ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಗಳಲ್ಲಿ ಇರುವ ಅಂಗ ನವಾಡಿಗಳಲ್ಲಿ ಆಯಾ ವಾರ್ಡ್‌ನ ಸದಸ್ಯರ ಅಧ್ಯಕ್ಷತೆಯಲ್ಲಿ ವಾರ್ಡ್ ಸಮಿತಿ ರಚನೆಯಾಗಿರುತ್ತದೆ. ಈ ಸಮಿತಿಯು ಸಭೆ ನಡೆಸಿ ಮಕ್ಕಳ ಸಂಖ್ಯೆಗೆ ಆಧಾರವಾಗಿ ಮೊಟ್ಟೆ ಖರೀದಿ ಮಾಡಲಿದೆ. ತಿಂಗಳಿಗೆ 2ರಿಂದ 3 ಬಾರಿ ಮೊಟ್ಟೆ ಖರೀದಿ ಮಾಡಬಹುದಾಗಿದೆ. ಇದರಿಂದ ಮೊಟ್ಟೆಗಳ ಶೇಖರಣೆ ಅಥವಾ ಹಾಳಾಗುವ ಸಮಸ್ಯೆ ಇರುವುದಿಲ್ಲ. ಟೆಂಡರ್ ಪ್ರಕ್ರಿಯಲ್ಲಿ ತಿಂಗಳಿಗೆ ಬೇಕಾಗುವ ಮೊಟ್ಟೆಯನ್ನು ಒಮ್ಮೆಗೆ ಪೂರೈಕೆ ಮಾಡುವುದರಿಂದ ಶೇಖರಿಸಿ ಇಟ್ಟುಕೊಳ್ಳುವುದು ಅಂಗನ ವಾಡಿ ಕೇಂದ್ರಗಳಿಗೆ ಸವಾಲಿನ ವಿಷಯವಾಗಿತ್ತು. ಈಗ ಬಾಲ ವಿಕಾಸ ಸಮಿತಿಯಿಂದ ಸ್ಥಳೀಯವಾಗಿ ಮೊಟ್ಟೆ ಖರೀದಿ ಮಾಡಬಹುದಾಗಿದೆ. ಎಲ್ಲ ಸಮಿತಿಗೂ ಮುಂಗಡವಾಗಿ ಅನುದಾನವನ್ನು ನೀಡಿದ್ದೇವೆ. ಅಂಗನವಾಡಿ ಕಾರ್ಯಕತೆಯರು ಇದರ ನಿರ್ವಹಣೆ ಮಾಡಲಿದ್ದಾರೆ.
ಜಂಟಿ ಖಾತೆಯ ಮೂಲಕ ಅನುದಾನ ಬಳಕೆ ಮಾಡಲಾಗುತ್ತದೆ. ಸ್ಥಳೀಯವಾಗಿಯೂ ಜನರಿಗೆ ಇದರ ಮಾಹಿತಿಯೂ ಸಿಗುತ್ತದೆ ಎಂದು ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 1,222 ಅಂಗನವಾಡಿ ಗಳಿವೆ. ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.