ಚುನಾವಣೆ ಹಿನ್ನೆಲೆ: 64 ಲ.ರೂ. ಮದ್ಯ ವಶ
Team Udayavani, Apr 13, 2019, 6:42 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇದುವರೆಗೆ ಒಟ್ಟು 14 ಪ್ರಕರಣಗಳಲ್ಲಿ 24,59,290 ರೂ. ನಗದು ವಶಪಡಿಸಿಕೊಳ್ಳ ಲಾಗಿದೆ. ಇದರಲ್ಲಿ 23,50,290 ರೂ.ಗಳನ್ನು ದಾಖಲೆ ಪಡೆದು ಬಿಡುಗಡೆಗೊಳಿಸಲಾಗಿದೆ.
ಅಬಕಾರಿ ಇಲಾಖೆಯಿಂದ 15,845.03 ಲೀ. ಮದ್ಯ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 64,39,144 ರೂ. ಈ ಸಂಬಂಧ 3 ಟ್ರಕ್, 3 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. 30 ಟನ್ ಅಕ್ಕಿ ಸೇರಿದಂತೆ ಒಟ್ಟು ಎಲ್ಲ ಪ್ರಕರಣಗಳ ಮೊತ್ತ 1,99,97,185 ರೂ. ಪೊಲೀಸ್ ಇಲಾಖೆಯಿಂದ 6,107 ರೂ. ಮೊತ್ತದ 11.7 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
153 ದೂರು ಸ್ವೀಕಾರ
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ 153 ದೂರು ಸ್ವೀಕರಿಸಿದ್ದು 146 ವಿಲೇ ಮಾಡಲಾಗಿದೆ, 7 ಬಾಕಿ ಇದೆ.ಸುವಿಧಾ ಏಕ ಗವಾಕ್ಷಿ ಅನುಮತಿ ವ್ಯವಸ್ಥೆ ಮೂಲಕ ಪಕ್ಷಗಳು ಮತ್ತು ಅಭ್ಯರ್ಥಿಗಳ ಒಟ್ಟು 168 ಅರ್ಜಿ ಸ್ವೀಕರಿಸಿದ್ದು, 145 ಅರ್ಜಿಗೆ ಅನುಮತಿ ನೀಡಲಾಗಿದೆ.
ವಾಹನ ಅನುಮತಿಗಾಗಿ 38 ಅರ್ಜಿ ಸ್ವೀಕರಿಸಿದ್ದು, 35ಕ್ಕೆ ಅನುಮತಿ ನೀಡಲಾಗಿದೆ. 2 ತಿರಸ್ಕೃತವಾಗಿ 1 ಅನುಮತಿಗೆ ಬಾಕಿ ಇದೆ.
ಸಿವಿಜಿಲ್: 168 ದೂರು ಸ್ವೀಕಾರ
ಸಿವಿಜಿಲ್ ಮೂಲಕ 168 ದೂರು ಸ್ವೀಕರಿಸಿದ್ದು, ಪರಿಶೀಲಿಸಿ ವಿಲೇವಾರಿ ಮಾಡ ಲಾಗಿದೆ. 39 ಡಮ್ಮಿ ಕೇಸ್ ಆಗಿದ್ದು, 130 ಸರಿ ಪ್ರಕರಣಗಳಲ್ಲಿ 118 ಪ್ರಕರಣಗಳನ್ನು 100 ನಿಮಿಷಗಳ ಒಳಗೆ ವಿಲೇವಾರಿ ಮಾಡಿದೆ.
8,154 ಅಂಗವಿಕಲ ಮತದಾರರು
8,154 ಅಂಗವಿಕಲ ಮತದಾರರನ್ನು ಗುರುತಿಸಿದ್ದು, ಅವರಿಗಾಗಿ ಮತಗಟ್ಟೆಯಲ್ಲಿ ವಿವಿಧ ಸಲಕರಣೆ, ಆದ್ಯತೆಯ ಮೇಲೆ ಮತದಾನ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರಿಗೂ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಸಹಾಯವಾಣಿ: 1,462 ಕರೆ ಸ್ವೀಕಾರ
ಮತದಾರರ ಸಹಾಯವಾಣಿ 1950 ಮೂಲಕ 1,462 ಕರೆಗಳನ್ನು ಸ್ವೀಕರಿಸಿದ್ದು ಅಗತ್ಯ ಮಾಹಿತಿ, ಸಹಾಯ ನೀಡಲಾಗಿದೆ.
ಮತಯಂತ್ರದಲ್ಲಿ ಅಭ್ಯರ್ಥಿಗಳ ಹೆಸರು ಸೇರ್ಪಡೆ ಮುಕ್ತಾಯಗೊಂಡಿದೆ. ಜಿಲ್ಲೆಯ 865 ಮತಗಟ್ಟೆಗಳನ್ನು ಪರಿಶೀಲನೆ ನಡೆಸಿ, ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.