ಚು. ಆಯೋಗದಿಂದ ದೂರು, ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಅವಕಾಶ
Team Udayavani, Apr 10, 2018, 6:00 AM IST
ಮಣಿಪಾಲ: ನೀತಿ ಸಂಹಿತೆ ಉಲ್ಲಂಘನೆ ದೂರು ಸಲ್ಲಿಸಲು ಮತ್ತು ರಾಜಕೀಯ ಪಕ್ಷಗಳು ಸಭೆ, ರ್ಯಾಲಿ, ವಾಹನ, ತಾತ್ಕಾಲಿಕ ಕಚೇರಿ, ಧ್ವನಿ ವರ್ಧಕ, ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್‌ಗಳಿಗೆ ಅನುಮತಿ ಪಡೆಯಲು ಚುನಾವಣಾ ಆಯೋಗವು ತನ್ನ www.ceokarnataka.kar.nic.in ವೆಬ್‌ಸೈಟಿ ನಲ್ಲಿ ಸಮಾಧಾನ್ ಮತ್ತು ಸುವಿಧಾ ಎಂಬೆರಡು ಕೊಂಡಿಗಳನ್ನು ನೀಡಿದೆ. ವೆಬ್‌ಸೈಟಿನ ಹೋಮ್ ಸ್ಕ್ರೀನ್‌ನಲ್ಲಿಯೇ ಈ ಎರಡು ಕೊಂಡಿಗಳು ಪ್ರತ್ಯೇಕ ವಾಗಿ ಲಭ್ಯ. ಉಡುಪಿ ಜಿಲ್ಲಾಧಿಕಾರಿ ತಮ್ಮ ಪ್ರಕಟನೆ ಯಲ್ಲಿ ಈ ಎರಡು ಮೊಬೈಲ್ ಆ್ಯಪ್‌ಗ್ಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಆ್ಯಪ್‌ಗ್ಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ.
ದೂರು ಸಲ್ಲಿಕೆಗೆ “ಸಮಾಧಾನ್’
ಸಮಾಧಾನ್ ಕೊಂಡಿಯಲ್ಲಿ ದೂರುದಾರರು ಹೆಸರು, ವಿಳಾಸ, ಇಮೈಲ್, ಮೊಬೈಲ್ ಸಂಖ್ಯೆ, ಇತ್ಯಾದಿ ವಿವರಗಳನ್ನು ನೀಡಿ ಆಯಾ ವಿಧಾನಸಭಾ ಕ್ಷೇತ್ರವನ್ನು ಆರಿಸಿ ದೂರು ಸಲ್ಲಿಸಬಹುದು. ಕಡ್ಡಾಯ ತುಂಬಬೇಕಿರುವ ಫೀಲ್ಡ್‌ಗಳಿಗೆ * ಚಿಹ್ನೆ ಹಾಕಲಾಗಿದೆ. ಹಾಗಾಗಿ ದೂರು ಸಬ್‌ಮಿಟ್ ಮಾಡುವಾಗ ಕೋಡ್ ದಾಖಲಿಸುವ ಪ್ರಶ್ನೆಯೊಂದನ್ನು ಬಿಟ್ಟರೆ ಪೇಜ್ ಬೇರೇನನ್ನೂ ಕೇಳುವುದಿಲ್ಲ. ಸುಲಭವಾಗಿ ದೂರು ಸಲ್ಲಿಸಿ ಸ್ವೀಕೃತಿ ಪಡೆಯಬಹುದು. ಸಮಾಧಾನ್‌ನಲ್ಲಿ ವೀಡಿಯೊ, ಆಡಿಯೋ, ಫೋಟೊ ದಾಖಲೆ ಅಪ್‌ಲೋಡ್ ಮಾಡಲು ಅವಕಾಶವಿದೆ. ದೂರುದಾರರ ನೈಜತೆ ತಿಳಿಯಲು ಒಟಿಪಿ ದಾಖಲಿಸಿಕೊಂಡಿದ್ದರೆ ಪೂರಕವಾಗುತ್ತಿತ್ತು.
“ಸುವಿಧಾ’; ಸೇವೆ ಬಹುವಿಧ
ರಾಜಕೀಯ ಪಕ್ಷಗಳು, ಪ್ರಚಾರ ನಡೆಸುವವರು ಏಕಗವಾಕ್ಷಿ ಆನ್‌ಲೈನ್ ಸೇವೆ “ಸುವಿಧಾ’ ಮೂಲಕ ಪ್ರಚಾರ ಸಂಬಂಧಿ ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ, ಇಮೈಲ್, ಎಪಿಕ್ ಸಂಖ್ಯೆ ಸಲ್ಲಿಸಬೇಕು. ಬಳಿಕ ಪ್ರಚಾರ ಕಾರ್ಯಕ್ರಮದ ದಿನಾಂಕ ಆಯ್ಕೆ ಮಾಡಿ, ಜಿಲ್ಲೆ, ಕ್ಷೇತ್ರ, ಪೊಲೀಸ್ ಠಾಣೆಯ ವಿವರಗಳನ್ನು ನೀಡಿ, ಕೋಡ್ ದಾಖಲಿಸಿ ಅರ್ಜಿ ಸಬ್‌ಮಿಟ್ ಮಾಡ ಬೇಕು. ನಿಗದಿತ ಸಮಯದೊಳಗೆ ಅರ್ಜಿ ಗಳನ್ನು ಪರಿಶೀಲಿಸಲಾಗುತ್ತದೆ. ಅಂತಿಮವಾಗಿ ಚುನಾವಣಾ ಧಿಕಾರಿಗಳ ಕಚೇರಿಯಲ್ಲೇ (ಆರ್‌ಒ) ಇದಕ್ಕೆ ಅನುಮತಿ ಪಡೆಯಬಹುದಾಗಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೂ ಇದೇ ಮಾದರಿಯ ಸೇವೆ ಒದಗಿಸಬೇಕು ಎಂಬ ಆಗ್ರಹವೂ ಇದೆ.
ಮೊಬೈಲ್ ಆ್ಯಪ್ ಅಗತ್ಯ
ಮೊಬೈಲ್ ಫೋನ್ ಸ್ನೇಹಿ ಆ್ಯಪ್ ಆಗಿ ಸಮಾಧಾನ್ ಮತ್ತು ಸುವಿಧಾ ಸೇವೆಗಳನ್ನು° ಅಭಿವೃದ್ಧಿ ಪಡಿಸಿ ಒದಗಿಸಿದರೆ ಹೆಚ್ಚು ಅನುಕೂಲ. ಈಗ ಇರುವ ವ್ಯವಸ್ಥೆ ಕ್ಲಿಷ್ಟಕರವೆಂದೇನಲ್ಲ. ಬ್ರೌಸರ್‌ನಲ್ಲಿ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಕೊಂಡಿಯನ್ನು ಬಳಸಿ ಕೊಳ್ಳಬಹುದು. ಆದರೆ ಮೊಬೈಲ್ ಆ್ಯಪ್ ಆದರೆ ಇನ್ನಷ್ಟು ಸುಲಭವಾಗಿ ದೂರು ಸಲ್ಲಿಸಲು, ಮೊಬೈಲ್‌ಗೆ
ಬಂದ ಫೊಟೋ, ವೀಡಿಯೊ ಅಪ್ಲೋಡ್ ಮಾಡಲು, ಸ್ಟೇಟಸ್ ಟ್ರ್ಯಾಕಿಂಗ್ ಸಾಧ್ಯ. ಈ ಬಗ್ಗೆ ಆಯೋಗ ಗಮನ ಹರಿಸಲಿ. 2016ರಲ್ಲಿ ನಡೆದ ಪ. ಬಂಗಾಲ ವಿಧಾನಸಭೆ ಚುನಾವಣೆಗೆ ಮತ್ತು ಬಿಹಾರ, ಅಸ್ಸಾಂ ಚು. ಆಯೋಗಗಳು ಸಮಾಧಾನ್ ಆ್ಯಪ್ ಅಭಿವೃದ್ಧಿ ಪಡಿಸಿವೆ. ಬಿಹಾರ ಚು. ಆಯೋಗವು ಸಮಾಧಾನ್‌ನ ಜತೆಗೆ ಎಲೆಕಾಂ (ಪತ್ರಿಕಾ ಪ್ರಕಟನೆ), ಮತದಾನ್ (ಮತದಾರರ ಮಾಹಿತಿ), ಸುಗಮ್ ವಿಹಾರ್ (ವಾಹನ ನಿರ್ವಹಣೆ) ಆ್ಯಪ್ ಬಿಡುಗಡೆಗೊಳಿಸಿತ್ತು. ಮಣಿಪುರದಲ್ಲಿ ಇ ಮಣಿಪುರ ಆ್ಯಪ್ ಇದೆ. ಇವುಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿ ಕಾಣಿಸುತ್ತಿವೆ.
ಸ್ಟೇಟಸ್ ಟ್ರ್ಯಾಕಿಂಗ್
ಸಮಾಧಾನ್‌ನಲ್ಲಿ ಚುನಾವಣಾ ಆಯುಕ್ತರು, ಜಿಲ್ಲಾ ಚುನಾವಣಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲು ಅವಕಾಶವಿದೆ. ದೂರು ಸಬ್‌ಮಿಟ್ ಮಾಡಿದ ಕೂಡಲೇ ರಿಜಿಸ್ಟ್ರೇಶನ್ ಸಂಖ್ಯೆ ದೊರೆಯುತ್ತದೆ. ಈ ಸಂಖ್ಯೆ ಯನ್ನು ಮತ್ತು ಮೊಬೈಲ್ ಸಂಖ್ಯೆಯನ್ನು ಸಲ್ಲಿಸಿ ದೂರಿನ ಸ್ಥಿತಿ ಬಗ್ಗೆ ತಿಳಿಯುವ ಟ್ರ್ಯಾಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ಆನ್‌ಲೈನ್‌ನಲ್ಲಿ ದೂರಿನ ಸ್ವೀಕೃತಿ ದೃಢೀಕರಣವಾಗುವುದಲ್ಲದೆ ಸ್ಥಿತಿ, ಜರಗಿಸಿದ ಕ್ರಮ ತಿಳಿಯಲು ಸಾಧ್ಯವಾಗುತ್ತದೆ. ಸುವಿಧಾದಲ್ಲಿಯೂ ಈ ವ್ಯವಸ್ಥೆ ಇದೆ. ಚು. ಅಧಿಕಾರಿಗಳ ಲಾಗಿನ್‌ಗೆ ಮತ್ತು ಈಗಾಗಲೇ ಕಾಯ್ದಿರಿಸಲಾದ ಸ್ಥಳಗಳ, ಕಾರ್ಯಕ್ರಮಗಳ (ಪ್ರಚಾರ) ಪಟ್ಟಿಯನ್ನೂ ವೀಕ್ಷಿಸಲು ಅವಕಾಶ ಇದೆ. ಇಲ್ಲಿ ಜಿಲ್ಲೆ, ಕ್ಷೇತ್ರದ ವಿವರ, ದಿನಾಂಕ ಹಾಕಿ ಶೋ ಒತ್ತಿದರೆ ಪಟ್ಟಿ ತೆರೆದುಕೊಳ್ಳುತ್ತದೆ. ಇಲ್ಲಿ ಅನುಮತಿ ನೀಡಲಾಗಿದೆಯೇ ಇಲ್ಲವೇ ಎಂಬುದೂ ತಿಳಿಯುತ್ತದೆ.
ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.