ಮಣಿಪಾಲ ಮಾಹೆ: 5 ವಿದ್ಯುತ್‌ ಚಾಲಿತ ವಾಹನ ರಸ್ತೆಗೆ


Team Udayavani, Oct 2, 2018, 9:42 AM IST

mahe.jpg

* ಮಾಲಿನ್ಯ ಮುಕ್ತ, ಬ್ಯಾಟರಿ ಚಾಲಿತ ಐದು ವಾಹನಗಳು * ಹವಾನಿಯಂತ್ರಿತ, ಸುರಕ್ಷಿತ
* ಒಮ್ಮೆ ಚಾರ್ಜ್‌ ಮಾಡಿದರೆ 120 ಕಿ.ಮೀ. ಪ್ರಯಾಣ * ಮಾಹೆ ವಿ.ವಿ. ಸೋಲಾರ್‌ ಗ್ರಿಡ್‌ನಿಂದ ಚಾರ್ಜ್‌
* ಮಣಿಪಾಲದಿಂದ ಬಜಪೆ ಪ್ರಯಾಣಕ್ಕೆ ಬಳಕೆ

ಉಡುಪಿ: ಮಹಾತ್ಮಾ ಗಾಂಧಿ ಅವರ ಜನ್ಮದಿನ ಪ್ರಯುಕ್ತ ಮಾಹೆ ವಿಶ್ವವಿದ್ಯಾನಿಲಯವು ಮಹೀಂದ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾಲಿನ್ಯ ಮುಕ್ತವಾದ 5 ವಿದ್ಯುತ್‌ ಚಾಲಿತ ಪ್ರಯಾಣಿಕ ವಾಹನಗಳನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ರಸ್ತೆಗಿಳಿಸಿದೆ. ನೀರಿನ ಪುನರ್ಬಳಕೆ, ಹಸುರು ಹೊದಿಕೆ ಅಭಿವೃದ್ಧಿ, ಸೌರ ವಿದ್ಯುತ್‌ ಉತ್ಪಾದನೆಯಂತಹ ಪರಿಸರಸಹ್ಯ ಕೊಡುಗೆಗಳತ್ತ ಮುನ್ನುಗುತ್ತಿರುವ ಮಾಹೆ ವಿ.ವಿ.ಯ ಇನ್ನೊಂದು ಹಸುರು ಹೆಜ್ಜೆ ಇದು.
ಈ ವಾಹನಗಳಿಗೆ ವಿ.ವಿ.ಯ ಸೌರ ವಿದ್ಯುತ್‌ ಗ್ರಿಡ್‌ನಿಂದ ಚಾರ್ಜಿಂಗ್‌ ಮಾಡಲಾಗುತ್ತದೆ. ವಾಹನಗಳು ಹವಾ ನಿಯಂತ್ರಿತವಾಗಿದ್ದು, ಉತ್ತಮ ಪ್ರಯಾಣದ ಅನುಭವ ನೀಡಲಿವೆ. ಮುಖ್ಯವಾಗಿ ಸುರಕ್ಷೆ ಇರುವುದರಿಂದ ಹೆಚ್ಚು ಸಂತಸದಾಯಕವಾಗಲಿದೆ. ಜಿಪಿಎಸ್‌ ಅಳವಡಿಸಲಾಗಿದೆ ಮತ್ತು ಸೆಂಟ್ರಲ್‌ ಕಮಾಂಡ್‌ ಫ್ಲೀಟ್‌ ಮ್ಯಾನೇಜ್‌ ಮೆಂಟ್‌ ಸಿಸ್ಟಮ್‌ಗೆ ಜೋಡಿಸಲಾಗಿದೆ.

ಹಸುರು ವಾಹನಗಳಿಗೆ ರವಿವಾರ ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ ಅಧ್ಯಕ್ಷ ಡಾ| ರಂಜನ್‌ ಪೈ ಚಾಲನೆ ನೀಡಿದರು. ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಡಾ| ಎಚ್‌. ವಿನೋದ ಭಟ್‌, ಕುಲ ಸಚಿವ ಡಾ| ನಾರಾಯಣ ಸಭಾಹಿತ್‌, ಮಣಿಪಾಲ ಅಕಾಡೆಮಿ ಆಡಳಿತಾಧಿ ಕಾರಿ ಡಾ| ಎಚ್‌. ಶಾಂತಾರಾಮ್‌ ಉಪಸ್ಥಿತರಿದ್ದರು.

ಮೊದಲಿಗರು
ಈ ಪ್ರದೇಶದಲ್ಲಿ ನಾವೇ ಮೊದಲಿಗರಾಗಿ ಇಂತಹಪರಿಸರ ಸಹ್ಯ ವಾಹನಗಳನ್ನು ಅನುಷ್ಠಾನಿಸುತ್ತಿದ್ದೇವೆ ಎಂದು ಡಾ| ಎಚ್‌.ಎಸ್‌. ಬಲ್ಲಾಳ್‌ ತಿಳಿಸಿದರು. ಇದರಿಂದ ಪರಿಸರಕ್ಕೆ ಆಗುವ ಅನು ಕೂಲ ವೆಂದರೆ ವಾರ್ಷಿಕ 50 ಮೆಟ್ರಿಕ್‌ ಟನ್‌ ಕಾರ್ಬನ್‌ ಡೈಯಾಕ್ಸೆ „ಡ್‌ ಉತ್ಪಾದನೆ ಕಡಿತಗೊಳ್ಳಲಿದೆ. ಇಷ್ಟು ಕಾರ್ಬನ್‌ ಡೈಯಾಕ್ಸೆ„ಡ್‌ನ್ನು ಹೀರಿಕೊಳ್ಳಲು ಇನ್ನೂ 5,000 ಮರಗಳು ಬೇಕು. ಸ್ಥಳೀಯರ ಆರೋಗ್ಯಕ್ಕೆ ಹಾನಿಯಾಗುವ ಹೈಡ್ರೋ ಕಾರ್ಬನ್‌, ಕಾರ್ಬನ್‌ ಮೊನೊಕ್ಸೆ„ಡ್‌, ನೈಟ್ರೋಜನ್‌ ಆಕ್ಸೆ„ಡ್‌ನ್ನು ಕಡಿತಗೊಳಿ ಸಲಿದೆ ಎಂದು ಪರಿಸರ ವಿಭಾಗದ ಸಹಾಯಕ ನಿರ್ದೇಶಕ ಡೆರಿಕ್‌ ಜೋಶುವ ಅವರು ಹೇಳಿದರು.

ಮಣಿಪಾಲದಿಂದ ಬಜಪೆಗೆ
ವಾತಾವರಣವನ್ನು ಸಂರಕ್ಷಿಸಲೋಸುಗ ವಿ.ವಿ. ಈ ಉಪಕ್ರಮಕ್ಕೆ ಮುಂದಾಗಿದೆ. ಮಹೀಂದ್ರ ಕಂಪೆನಿ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಮಣಿಪಾಲದಿಂದ ನಿತ್ಯ ವಿಮಾನ ನಿಲ್ದಾಣಕ್ಕೆ ಹೋಗಿ ಬರುವವರಿಗೆ ಇದನ್ನು ಬಳಸುತ್ತೇವೆ. ಐದು ವಾಹನಗಳು ಮಣಿಪಾಲದಿಂದ ಬಜಪೆ ವಿಮಾನ ನಿಲ್ದಾಣಕ್ಕೆ, ಅಲ್ಲಿಂದ ಮಣಿಪಾಲಕ್ಕೆ ಓಡಾಡಲಿವೆ. ಮಣಿಪಾಲದಲ್ಲಿ ಚಾರ್ಜಿಂಗ್‌ ಕೇಂದ್ರವಿರುತ್ತದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 120 ಕಿ.ಮೀ. ಕ್ರಮಿಸಬಹುದು. ಬಜಪೆ ವಿಮಾನ ನಿಲ್ದಾಣದಲ್ಲಿ ಒಂದು ಚಾರ್ಜಿಂಗ್‌ ಕೇಂದ್ರಕ್ಕಾಗಿ ಮನವಿ ಮಾಡಿದ್ದೇವೆ. ಒಂದು ವಾಹನದಲ್ಲಿ ಚಾಲಕ ಸಹಿತ ಐವರು ಪ್ರಯಾಣಿಸಬಹುದು. 
 ಡಾ| ಎಚ್‌.ಎಸ್‌. ಬಲ್ಲಾಳ್‌, ಸಹಕುಲಾಧಿಪತಿ, ಮಾಹೆ ವಿ.ವಿ.

ಟಾಪ್ ನ್ಯೂಸ್

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

6

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

5

Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

3

Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

missing

Mangaluru: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನಾಪತ್ತೆ

15

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.