Manipal ಕೌಶಲ ಕೇಂದ್ರಕ್ಕೆ ಎಲೆಕ್ಟ್ರಿಕಲ್ ವಾಹನ
Team Udayavani, Dec 6, 2023, 11:59 PM IST
ಮಣಿಪಾಲ: ಡಾ| ಟಿಎಂಎ ಪೈ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರ (ಎಂಎಸ್‌ಡಿಸಿ)ಕ್ಕೆ ನಾಸಿಕ್‌ನ ಶಾಹ ಗ್ರೂಪ್ ಕಂಪೆನಿಯ ಜಿತೇಂದ್ರ ನ್ಯೂ ಇವಿ ಟೆಕ್‌ನ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.
ಬುಧವಾರ ಡಾ| ಟಿಎಂಎ ಪಾಲಿಟೆಕ್ನಿಕ್ ಕ್ಯಾಂಪಸ್‌ನ ಆಡಳಿತ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ಜಿತೇಂದ್ರ ನ್ಯೂ ಇವಿ ಟೆಕ್‌ನ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಎಂಎಸ್‌ಡಿಸಿಗೆ ಹಸ್ತಾಂತರಿಸಲಾಯಿತು.
ಜಿತೇಂದ್ರ ನ್ಯೂ ಇವಿ ಟೆಕ್‌ನ ವಲಯ ವ್ಯವಸ್ಥಾಪಕ ಡಾ| ಬಿ. ಚರಣ್ ಅವರನ್ನು ಎಂಎಸ್‌ಡಿಸಿ ಮುಖ್ಯಸ್ಥ ಬಿ| ಡಾ| ಸುರ್ಜಿತ್ ಸಿಂಗ್ ಪಬ್ಲಿ ಸಮ್ಮಾನಿಸಿದರು. ಜಿತೇಂದ್ರ ನ್ಯೂ ಇವಿ ಟೆಕ್‌ನ ಸರ್ವಿಸ್ ಎಂಜಿನಿಯರ್ ಆಶಿಕ್ ಮೊಹಮ್ಮದ್, ಎಂಎಸ್‌ಡಿಸಿ ಕುಲಸಚಿವ ಡಾ| ರಾಧಾಕೃಷ್ಣ ಎಸ್. ಐತಾಳ್, ಡಾ| ಟಿಎಂಎ ಪೈ ಪಾಲಿಟೆಕ್ನಿಕ್ ನಿರ್ದೇಶಕ ರಂಗ ಪೈ, ಪ್ರಾಂಶುಪಾಲ ಪ್ರೊ| ಕಾಂತರಾಜ್, ಎಂಎಸ್‌ಡಿಸಿ ಸಲಹೆಗಾರ ಡಾ| ಕೆ. ಸಿನ್ಹಾ ಉಪಸ್ಥಿತರಿದ್ದರು.
ಈ ಪ್ರದೇಶದ ಯುವ ಜನತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲತೆಯನ್ನು ಒದಗಿಸುವ ಉದ್ದೇಶದಿಂದ ಎಂಎಸ್‌ಡಿಸಿ ಸ್ಥಾಪನೆಗೊಂಡಿದೆ. ನ್ಯಾಶನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಅಧೀನದಲ್ಲಿ ಮಾನ್ಯತೆ ಪಡೆದ ತರಬೇತಿ ನೀಡುವ ಸಂಸ್ಥೆಯಾಗಿ ಎಂಎಸ್‌ಡಿಸಿ ಕಾರ್ಯನಿರ್ವಹಿಸುತ್ತಿದೆ. ಈ ವಾಹನವನ್ನು ಎಲೆಕ್ಟ್ರಾನಿಕ್ ವಾಹನದ ವಿನ್ಯಾಸ, ಎಸ್ಸೆಂಬಲಿಂಗ್ ಮತ್ತು ನಿರ್ವಹಣೆಯ ಹ್ಯಾಂಡ್ ಆನ್ ಟ್ರೈನಿಂಗ್‌ಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.