ಮಣಿಪಾಲ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಎಲೆಕ್ಟ್ರೊ ಫಿಸಿಯಾಲಜಿ ಸೌಲಭ್ಯ
Team Udayavani, Jun 29, 2017, 3:15 AM IST
ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಎಲೆಕ್ಟ್ರೊಫಿಸಿಯಾಲಜಿ ಸೌಲಭ್ಯ, ಪೇಸ್ ಮೇಕರ್ ಮತ್ತು ಆರಿತ್ಮಿಯಾ ಚಿಕಿತ್ಸಾಲಯ ಆರಂಭಗೊಂಡಿದೆ. ಸಿನ್ಕೊಪ್ ಮತ್ತು ತಲೆಸಿಡಿತದಿಂದ ಬಳಲುತ್ತಿರುವ ರೋಗಿಗಳು ಈ ಚಿಕಿತ್ಸಾಲಯದ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಪೂರ್ಣಾವಧಿ ಕಾರ್ಡಿಯಾಕ್ ಎಲೆಕ್ಟ್ರೊಫಿಸಿಯಾಲಜಿ ಸಲಹೆಗಾರ ಡಾ| ಮುಕುಂದ ಪ್ರಭು ನೇಮಕಗೊಂಡಿದ್ದಾರೆ. ಕಾರ್ಡಿಯಾಕ್ ಎಲೆಕ್ಟ್ರೊ ಫಿಸಿಯಾಲಜಿ ಪ್ರೋಗ್ರಾಂ ಒಂದು ಸಮಗ್ರ ಘಟಕವಾಗಿದ್ದು, ಯಾವುದೇ ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ತಂತ್ರಜ್ಞಾನವನ್ನು ಹೊಂದಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಕರ್ನಾಟಕದ ಅಗ್ರ ಐದು ಕೇಂದ್ರಗಳಲ್ಲಿ ಒಂದಾದ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗವು ಈಗ ಈ ಸೌಲಭ್ಯವನ್ನು ಹೊಂದಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ| ಕ| ಎಂ. ದಯಾನಂದ ತಿಳಿಸಿದ್ದಾರೆ.
ಡಾ| ಪ್ರಭು ಅವರು ತಿರುವನಂತಪುರದ ಶ್ರೀಚಿತ್ರ ತಿರುನಾಳ್ ಸಂಸ್ಥೆಯಲ್ಲಿ ಉನ್ನತ ಅಧ್ಯಯನ ಮಾಡಿ ಬೆಂಗಳೂರಿನ ಜಯದೇವ ಆಸ್ಪತ್ರೆ, ಕೊಚ್ಚಿಯ ಅಮೃತಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಾರ್ಡಿಯಾಕ್ ಎಲೆಕ್ಟ್ರೊಫಿಸಿಯಾಲಜಿ (ಇಪಿ) ಹೃದಯದ ಲಯದಲ್ಲಿ ತೊಂದರೆಗಳು, ಸಿಂಕೊಪ್, ಬಡಿತಗಳು, ಹೃದಯಾಘಾತ ಮತ್ತು ಹಠಾತ್ ಹೃದಯದ ಸ್ತಂಭನವಾಗಿ ಮರಣದ ಅಪಾಯದ ಬಗ್ಗೆ ವ್ಯವಹರಿಸುವ ಹೃದಯ ವಿಜ್ಞಾನದ ವಿಶೇಷ ವಿಭಾಗವಾಗಿದೆ. ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಅತ್ಯಾಧುನಿಕ ಚಿಕಿತ್ಸೆಯಿಂದ ಪರಿಹರಿಸುವ ತಂತ್ರಜ್ಞಾನ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.