ಕೋವಿಡ್- 19 ಮಣಿಸಲು ತುರ್ತು ಕಾರ್ಯಯೋಜನೆ ಅಗತ್ಯ
ಜಾಗತಿಕ ಧಾರ್ಮಿಕ ನಾಯಕರ ವೀಡಿಯೋ ಸಮ್ಮೇಳನದಲ್ಲಿ ಪುತ್ತಿಗೆ ಶ್ರೀ
Team Udayavani, Apr 3, 2020, 11:32 AM IST
ಉಡುಪಿ: ಇಡೀ ಜಗತ್ತನ್ನೇ ಸಂಕಷ್ಟಕ್ಕೆ ತಳ್ಳಿರುವ ಕೋವಿಡ್- 19 ನಿವಾರಣೆ ಅತ್ಯಂತ ಭಯಾನಕ ಸವಾಲಾಗಿದ್ದು, ಅದನ್ನು ಎದುರಿಸಲು ವಿಶ್ವಶಾಂತಿ ಧರ್ಮಸಂಸ್ಥೆಯ ಪ್ರತಿನಿಧಿಗಳು ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಜಗತ್ತಿನಾದ್ಯಂತ ಗರಿಷ್ಠ ಪ್ರಯತ್ನ ಮಾಡಬೇಕು; ಜತೆಗೆ ತುರ್ತು ಕಾರ್ಯಯೋಜನೆ ಅಗತ್ಯವಾಗಿದೆ ಎಂದು ಸಂಸ್ಥೆಯ ಅಂತಾರಾಷ್ಟ್ರೀಯ ಅಧ್ಯಕ್ಷ, ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರತಿಪಾದಿಸಿದರು.
ವಿಶ್ವಶಾಂತಿ ಧರ್ಮಸಂಸ್ಥೆಯ ಒಂದು ಸಾವಿರ ಜಾಗತಿಕ ಪ್ರತಿನಿಧಿಗಳ ತುರ್ತು ವೀಡಿಯೋ ಸಮಾವೇಶ ಗುರುವಾರ ನಡೆದಿದ್ದು, ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶಯ ಭಾಷಣ ಮಾಡಿದರು.
ಆಧ್ಯಾತ್ಮಿಕ ಜೀವನಪದ್ಧತಿ ಅಗತ್ಯ
ದೀರ್ಘಕಾಲೀನ ಪರಿಹಾರದ ದೃಷ್ಟಿಯಲ್ಲಿ ಭಾರತೀಯ ಯೋಗ ಪದ್ಧತಿಗೆ ಹಾಗೂ “ಪರಸ್ಪರಂ ಭಾವ ಯಂತಃ’ ಎಂಬ ಗೀತಾಧಾರಿತ ಗಳಾದಭಾರತೀಯ ಆಧ್ಯಾತ್ಮಿಕ ದೃಷ್ಟಿಯ ಜೀವನಪದ್ಧತಿಗೆ ವಿಶ್ವಸಮುದಾ ಯವು ಹೆಚ್ಚಿನ ಗಮನಹರಿಸುವಂತೆ ಮಾಡು ವುದೂ ಸೂಕ್ತವೆನಿಸುತ್ತಿದೆ. ಒಟ್ಟಿನಲ್ಲಿ ಕೋವಿಡ್- 19 ವಿಶ್ವದ ಮಾನವ ಸಮುದಾಯವನ್ನೇ ಒಂದು ಗಂಭೀರ ಮತ್ತು ಆಳ ಚಿಂತನೆಗೆ ಹಚ್ಚಿದೆ. ಲಾಕ್‌ಡೌನ್ ಮೊದಲಾದ ವಿನೂತನ ಕ್ರಮಗಳಿಂದ ಮನುಷ್ಯರನ್ನು ಅಂತರ್ಮುಖೀಗೊಳಿಸುವುದರ ಜತೆಗೆ ಕೌಟುಂಬಿಕ ಮೌಲ್ಯಗಳ ಕಡೆಗೆ ಹೆಚ್ಚಿನ ಗಮನಹರಿಸಲು ಮಾನವ ಸಮುದಾಯವನ್ನು ಸೂಚಿಸುತ್ತಿದೆ. ಅಂತಿಮವಾಗಿ ವಿಶ್ವಮಾನವ ಸಮು ದಾಯವು ತಾನು ನಡೆದು ಬಂದ ದಾರಿಯನ್ನು ಇದೀಗ ಪುನರ್ವಿಮರ್ಶಿಸುವಂತೆ ಈ ಕೋವಿಡ್- 19 ಸೂಚಿಸುತ್ತದೆ ಎಂದು ಹೇಳಿದರು.
ಮಾನವನ ತಪ್ಪುಗಳ ಪರಿಣಾಮ
ಮಾನವ ಸಮುದಾಯ ಇತ್ತೀಚಿನ ಅನೇಕ ದಶಕಗಳಿಂದ ತುಳಿದಿರುವ ತಪ್ಪು ಹೆಜ್ಜೆಗಳು, ಅಸಹಜ ಜೀವನಶೈಲಿ ಹಾಗೂ ಪ್ರಾಣಿಹಿಂಸೆಗಳೇ ಕೋವಿಡ್- 19 ಸಮಸ್ಯೆಗೆ ಕಾರಣ. ಇದರ ಹಿಂದೆ ದೈವೀಪ್ರಕೋಪದ ಜತೆಗೆ ವಿಶ್ವಮಾನವ ಸಮುದಾಯಕ್ಕೆ ಬಹುವಿಧದ ಸಂದೇಶಗಳು ರವಾನೆಯಾಗುತ್ತಿವೆ ಎಂದು ಶ್ರೀಗಳು ಹೇಳಿದರು.
ದುರ್ಲಾಭ ಪಡೆಯದಿರಿ
ಕೋವಿಡ್- 19 ಸಮಸ್ಯೆ ಪರಿಹಾರಕ್ಕೆ ತುರ್ತು ಕಾರ್ಯಯೋಜನೆಯ ಜತೆಗೆ ದೀರ್ಘಾವಧಿಯ ಶಾಶ್ವತ ಪರಿಹಾರೋಪಕ್ರಮಗಳ ಆವಶ್ಯಕತೆಯೂ ಎದ್ದು ತೋರುತ್ತಿದೆ. ಇದರೊಂದಿಗೆ ಭಯೋತ್ಪಾದನೆ ಸಮಸ್ಯೆ, ಮತೀಯ ಕೋಮು ಸಮಸ್ಯೆಗಳೂ ತಳಕು ಹಾಕಿಕೊಳ್ಳದಂತೆ ಪರಿಸ್ಥಿತಿಯ ದುರ್ಲಾಭವನ್ನು ಯಾರೂ ಪಡೆಯದಂತೆ ಎಚ್ಚರ ವಹಿಸುವುದು ಕೂಡ ಅಷ್ಟೇ ಅವಶ್ಯ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.