ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ತುರ್ತು ಸೇವೆಗಳು ಸ್ಥಗಿತ

ಆಲ್‌ ಇನ್‌ ಒನ್‌ ಆ್ಯಂಬುಲೆನ್ಸ್‌; ಗುಜರಿ ಟೋಯಿಂಗ್‌ ವಾಹನ; ಸಂಪರ್ಕ ಕಳೆದುಕೊಂಡ ಫೋನ್‌ಬೂತ್‌; ಹಳೆಯ ಕ್ರೈನ್‌ಗಳು

Team Udayavani, Oct 13, 2019, 5:12 AM IST

1210KOTA1E

ಕೋಟ: ಶುಲ್ಕ ಸಂಗ್ರಹಕ್ಕೆ ಮುನ್ನ ಸಾರ್ವ ಜನಿಕರ ಉಪಯೋಗಕ್ಕಾಗಿ ಟೋಲ್‌ಪ್ಲಾಜಾಗಳಲ್ಲಿ ಹಲವು ತುರ್ತು ಸೇವೆಗಳನ್ನು ಕಲ್ಪಿಸಬೇಕೆನ್ನುವ ನಿಯಮವಿದೆ. ಆದರೆ ಸಾಸ್ತಾನ ಟೋಲ್‌ನಲ್ಲಿ ಶುಲ್ಕ ಸಂಗ್ರಹ ಆರಂಭಗೊಂಡು ಹಲವು ವರ್ಷ ಕಳೆದರೂ ಇಂದಿಗೂ ಸಮರ್ಪಕ ತುರ್ತು ಸೇವೆಗಳಿಲ್ಲ.

ಕುಂದಾಪುರದಿಂದ-ಉದ್ಯಾವರ ತನಕದ 40ಕಿ.ಮೀ. ವ್ಯಾಪ್ತಿಯನ್ನು ಸಾಸ್ತಾನ ಟೋಲ್‌ ಹೊಂದಿದ್ದು, ಈ ಪ್ರದೇಶದಲ್ಲಿ ಯಾವುದೇ ಅಪಘಾತವಾದರೆ ಟೋಲ್‌ನವರು ತುರ್ತಾಗಿ ನೆರವಿಗೆ ಧಾವಿಸಬೇಕಿದೆ. ಆದರೆ ಇಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಒಂದೆರಡು ಕಿ.ಮೀ. ವ್ಯಾಪ್ತಿಗೂ ಸೇವೆ ನೀಡಲು ಅಸಾಧ್ಯ.

ಆಲ್‌ ಇನ್‌ ಒನ್‌ ಆ್ಯಂಬುಲೆನ್ಸ್‌
ಇಲ್ಲಿನ ಆ್ಯಂಬುಲೆನ್ಸ್‌ ಅಪಘಾತದ ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸುವುದಕ್ಕಿಂತ ಹೆಚ್ಚು ಇತರ ಕೆಲಸಗಳಿಗೆ ಉಪಯೋಗವಾಗುತ್ತದೆ. ಟೋಲ್‌ನ·ಕಾರ್ಮಿಕರನ್ನು ಕೆಲಸಕ್ಕೆ ಕರೆತರಲು ಮತ್ತು ಬಿಟ್ಟುಬರಲು, ದಾರಿ ದೀಪ ಹಾಳಾದರೆ ರಿಪೇರಿ ಮಾಡುವವರನ್ನು ಕರೆದೊಯ್ಯಲು, ಬ್ಯಾಂಕ್‌ಗೆ ಹಣ ಜಮಾ ಮಾಡಲು, ಪೊಲೀಸ್‌ ಠಾಣೆ ಮುಂತಾದ ಕಚೇರಿಗಳಿಗೆ ತೆರಳಲು ಆಲ್‌ ಇನ್‌ ಒನ್‌ ರೀತಿಯಲ್ಲಿ ಇದನ್ನು ಉಪಯೋಗಿಸಲಾಗುತ್ತದೆ ಮತ್ತು ತಾಂತ್ರಿಕ ಸಮಸ್ಯೆಯಿಂದ ಯಾವಾಗಲೂ ಕೆಟ್ಟು ನಿಲ್ಲುತ್ತದೆ. ಪ್ರಾಥಮಿಕ ಚಿಕಿತ್ಸೆ ನೀಡಲು ಸೂಕ್ತ ಸಲಕರಣೆಗಳಿಲ್ಲದ ಕಾರಣ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಿಬಂದಿ ಹರಸಾಹಸಪಡುತ್ತಾರೆ. ಕೆಲವೊಮ್ಮೆ ಸಿಬಂದಿಗಳೇ ತಮ್ಮ ಕೈಯಿಂದ ಖರ್ಚು ಮಾಡಿ ವಾಹನ ದುರಸ್ತಿ ಮಾಡಿಸಿದ ಉದಾಹರಣೆ ಕೂಡ ಇದೆ.

ಟೋಯಿಂಗ್‌ ವಾಹನ ಗುಜರಿಗೆ
ಅಪಘಾತವಾದ ವಾಹನಗಳನ್ನು ಪೊಲೀಸ್‌ ಠಾಣೆ ಅಥವಾ ರಿಪೇರಿಗೆ ಸಾಗಿಸಲು ಟೋಯಿಂಗ್‌ ವಾಹನವೊಂದು ಟೋಲ್‌ನಲ್ಲಿರಬೇಕು ಎನ್ನುವ ನಿಯಮವಿದೆ. ಆದರೆ ಸಾಸ್ತಾನದಲ್ಲಿರುವ ಟೋಯಿಂಗ್‌ ವಾಹನ ಸಂಪೂರ್ಣ ಹಾಳಾಗಿದೆ. ಇದರ ಬಿಡಿ ಭಾಗಗಳೆಲ್ಲ ಕಳಚಿಕೊಂಡು ಗುಜರಿ ಸೇರಲು ತಯಾರಾಗಿ ನಿಂತಿದೆ.

ಸಂಪರ್ಕ ಕಳೆದುಕೊಳ್ಳುವ ಫೋನ್‌
ಅಪಘಾತ ಹಾಗೂ ಇನ್ನಿತರ ಸಮಸ್ಯೆಗಳನ್ನು ಟೋಲ್‌ನವರ ಗಮನಕ್ಕೆ ತರಲು ಹೆದ್ದಾರಿಯ ಪ್ರತಿ ಕಿ.ಮೀ.ಗೊಂದು ಪೋನ್‌ ಬೂತ್‌ ವ್ಯವಸ್ಥೆ ಇದೆ. ಆದರೆ ಇಲ್ಲಿರುವ ಬೂತ್‌ಗಳು ಯಾವಾಗಲು ಸಂಪರ್ಕ ಕಳೆದುಕೊಂಡು ನಿಷ್ಕ್ರಿಯವಾಗಿರುತ್ತವೆ.

ಹಳೆಯ ಕ್ರೈನ್‌ ಗಳು
ಟೋಲ್‌ನಲ್ಲಿ ಎರಡು ಹಳೆಯ ಕ್ರೈನ್‌ ಗಳಿದ್ದು ಆಗಾಗ ಕೆಟ್ಟು ನಿಲ್ಲುತ್ತದೆ ಮತ್ತು ಸಮರ್ಪಕ ಕಾರ್ಯನಿರ್ವಹಣೆ ಅಸಾಧ್ಯವಾಗಿದೆ.

ಆ್ಯಂಬುಲೆನ್ಸ್‌ಗಿಲ್ಲ ಪ್ರತ್ಯೇಕ ಲೈನ್‌
ಆ್ಯಂಬುಲೆನ್ಸ್‌ ಸೇರಿದಂತೆ ಕೆಲವು ವಿ.ವಿ.ಐ.ಪಿ. ಗಳಿಗೆ ಟೋಲ್‌ಗೇಟ್‌ನಲ್ಲಿ ಪ್ರತ್ಯೇಕ ಲೈನ್‌ನ ವ್ಯವಸ್ಥೆ ಮಾಡಬೇಕು ಮತ್ತು ಇವುಗಳ ಸಂಚಾರಕ್ಕೆ ಯಾವುದೇ ಅಡೆ-ತಡೆ ಇರಬಾರದು ಎಂದು ಮದ್ರಾಸ್‌ ಹೆ„ಕೋರ್ಟ್‌ 2018 ಆಗಸ್ಟ್‌ನಲ್ಲಿ ಆದೇಶ ನೀಡಿತ್ತು. ಆದರೆ ಸಾಸ್ತಾನದ ಟೋಲ್‌ ಪ್ಲಾಜಾದಲ್ಲಿ ಇದುವರೆಗೂ ಈ ಆದೇಶ ಪಾಲನೆಯಾಗುತ್ತಿಲ್ಲ. ವಾಹನ ದಟ್ಟನೆ ಸಂದರ್ಭ ಆ್ಯಂಬುಲೆನ್ಸ್‌ಗಳು ಇತರ ವಾಹನಗಳ ಮಧ್ಯದಲ್ಲಿ ದಾರಿ ಮಾಡಿಕೊಂಡು ಹೋಗಬೇಕು ಮತ್ತು ಟೋಲ್‌ನ ಸಿಬಂದಿ ಮುಂದೆ ನಿಂತು ದಾರಿ ಮಾಡಿಕೊಡಬೇಕು. ಹಬ್ಬ,ಹರಿದಿನ ಗಳಲ್ಲಿ ಉದ್ದನೆ ಸರತಿ ಸಾಲಿನಲ್ಲಿ ವಾಹನಗಳು ನಿಂತಿರುವಾಗ ಆ್ಯಂಬುಲೆನ್ಸ್‌ಗಳು ಮುಂದೆ ಸಾಗಲು ಸಮಸ್ಯೆಯಾಗುತ್ತದೆ.

ಶೌಚಾಲಯ ಕೂಡ ಸರಿಯಾಗಿಲ್ಲ
ಟೋಲ್‌ನಲ್ಲಿ ಸಾರ್ವಜನಿಕ ಶೌಚಾಲಯವಿದೆ. ಆದರೆ ಶೌಚಾಲಯ ಗುಂಡಿ ಸರಿಯಾಗಿಲ್ಲದ ಕಾರಣ ಒಳಗಡೆ ಗಲೀಜು ನೀರು ನಿಲ್ಲುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ವಿಪರೀತವಾಗಿರುತ್ತದೆ.

ಶೀಘ್ರ ಸಮಸ್ಯೆ ಪರಿಹಾರ
ಟೋಲ್‌ನಲ್ಲಿ ತುರ್ತು ಸೇವೆಗಳ ಸಮಸ್ಯೆ ಇರುವ ಕುರಿತು ಗಮನಕ್ಕೆ ಬಂದಿದೆ. ಟೋಯಿಂಗ್‌ ವಾಹನದ ಬದಲಿಗೆ ತಾತ್ಕಾಲಿಕವಾಗಿ ಬೇರೊಂದು ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಶೀಘ್ರದಲ್ಲಿ ಆರ್‌.ಪಿ. ವಾಹನವೊಂದರ ಖರೀದಿಸಲಿದ್ದೇವೆ. ಆ್ಯಂಬುಲೆನ್ಸ್‌ ಬೇರೆ ಕೆಲಸಗಳಿಗೆ ಉಪಯೋಗಿಸದಂತೆ ಸೂಚನೆ ನೀಡಲಾಗಿದೆ. ಪೋನ್‌ ಬೂತ್‌ಗಳ ದುರಸ್ತಿಗೂ ಸೂಚಿಸಲಾಗಿದೆ.
-ಶಿವಪ್ರಸಾದ್‌, ಟೋಲ್‌ ನಿರ್ವಾಹಕರು

ತುರ್ತು ಸೇವೆ ಕಲ್ಪಿಸಿ
ಸಾಸ್ತಾನ ಟೋಲ್‌ನಲ್ಲಿ ಕ್ರೈನ್‌ ಹೊರತುಪಡಿಸಿ ಇತರ ಯಾವುದೇ ಸೇವೆಗಳು ಸರಿಯಾಗಿಲ್ಲ. ಆ್ಯಂಬುಲೆನ್ಸ್‌ಗಳಿಗೆ ಪ್ರತ್ಯೇಕ ಲೈನ್‌ ವ್ಯವಸ್ಥೆ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಸ್ಪಂದಿಸಿಲ್ಲ. ಟೋಯಿಂಗ್‌ ವಾಹನ ಇಲ್ಲದಿರುವುದರಿಂದ ಖಾಸಗಿ ಟೋಯಿಂಗ್‌ ವಾಹನವನ್ನು ಅವಲಂಭಿಸಬೇಕಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಆದಷ್ಟು ಶೀಘ್ರ ತುರ್ತು ಸೇವೆಗಳನ್ನು ವ್ಯವಸ್ಥೆ ಮಾಡಬೇಕು.
-ಜೀವನ್‌ ಮಿತ್ರ ನಾಗರಾಜ್‌ ಪುತ್ರನ್‌, ಸ್ಥಳೀಯರು

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.