ಉದ್ಯೋಗಾವಕಾಶದ ತಾಂತ್ರಿಕ ಕೋರ್ಸ್
ಉದಯವಾಣಿ ಫೋನ್‌ಇನ್‌ನಲ್ಲಿ ನೋಡಲ್ ಅಧಿಕಾರಿ ಪರಂಧಾಮ ಅಭಿಮತ
Team Udayavani, Jun 20, 2023, 1:20 PM IST
ಮಣಿಪಾಲ: ಸರಕಾರಿ ಐಟಿಐಗಳಲ್ಲಿ ಗುಣಮಟ್ಟದ ತರಬೇತಿಗೆ ಒತ್ತು ನೀಡುವ ಜತೆಗೆ ಬೋಧಕರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ದೀರ್ಘಾವಧಿ ಹಾಗೂ ಅಲ್ಪಾವಧಿ ಕೋರ್ಸ್‌ಗಳನ್ನು ಒದಗಿಸುತ್ತಿದ್ದೇವೆ. ಉಡುಪಿ ಜಿಲ್ಲೆಯ 4 ಮತ್ತು ದ.ಕ. ಜಿಲ್ಲೆಯ 5 ಐಟಿಐಗಳನ್ನು ಅಧುನಿಕ ಉಪಕರಣಗಳೊಂದಿಗೆ ಉನ್ನತೀಕರಿಸಲಾಗಿದೆ. ಉಪ್ಪೂರು ಹಾಗೂ ಬೈಕಂಪಾಡಿಯಲ್ಲಿ ಸುಸಜ್ಜಿತ ಜಿಟಿಟಿಸಿ ಕೇಂದ್ರಗಳಿವೆ. ಈಗಾಗಲೇ ಮೊದಲ ಸುತ್ತಿನ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಜುಲೈನಲ್ಲಿ ಎರಡನೇ ಸುತ್ತಿನ ದಾಖಲಾತಿ ಪ್ರಕ್ರಿಯೆ ನಡೆಯಲಿದ್ದು, ಎಲ್ಲ ಐಟಿಐಗಳಲ್ಲೂ ಈ ಬಗ್ಗೆ ಮಾಹಿತಿ ಸಿಗಲಿದೆ ಎಂದು ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ದ.ಕ., ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ಪರಂಧಾಮ ಅವರು ತಿಳಿಸಿದರು.
ಸೋಮವಾರ ಮಣಿಪಾಲದಲ್ಲಿರುವ ಉದಯವಾಣಿ ಪ್ರಧಾನ ಕಚೇರಿಯಲ್ಲಿ ನಡೆದ ಫೋನ್‌ಇನ್ ಕಾರ್ಯಕ್ರಮ ದಲ್ಲಿ ಹಲವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ವಿದ್ಯಾರ್ಥಿನಿಯರಿಗೆ ಅವಕಾಶ
ಐಟಿಐಗಳಿಗೆ ವಿದ್ಯಾರ್ಥಿನಿಯರು ಸೇರುವುದು ತುಂಬ ಕಡಿಮೆಯಾಗಿದೆ. ವಿದ್ಯಾರ್ಥಿನಿಯರು ಐಟಿಐ ಪಡೆದು ಸರಕಾರಿ ಉದ್ಯೋಗವನ್ನು ಸುಲಭವಾಗಿ ಪಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಬಂದಿರುವ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಕೋರ್ಸ್‌ಗಳನ್ನು ಪಡೆದು ಮನೆಯಿಂದಲೇ ಕೆಲವು ಉತ್ಪನ್ನಗಳನ್ನು ಸಿದ್ಧಪಡಿಸಬಹುದಾದ ಅವಕಾಶವೂ ಇದೆ. ಫ್ಯಾಶನ್ ಡಿಸೈನಿಂಗ್, ಬ್ಯುಟೀಶಿಯನ್, ರೊಬೋಟಿಕ್ ಮೊದಲ್ಗೊಂಡು ಫಿಟ್ಟರ್, ಮೆಕ್ಯಾನಿಕ್ ಹೀಗೆ ಹಲವು ಅವಕಾಶಗಳು ಇವೆ. ವಿದ್ಯಾರ್ಥಿನಿಯರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಉದ್ಯೋಗ ಬೇಡಿಕೆ ಅಧಿಕ, ಪೂರೈಕೆ ಕಡಿಮೆ
ಕೈಗಾರಿಕೆಗಳಲ್ಲಿ ಪ್ರತೀ ವರ್ಷ 1 ಲಕ್ಷ ಉದ್ಯೋಗಗಳ ಬೇಡಿಕೆ ಇರುತ್ತದೆ. ಅದರಲ್ಲಿ ಹೆಚ್ಚಾಗಿ ಫಿಟ್ಟರ್, ಪ್ಲಂಬರ್, ಮೆಕ್ಯಾನಿಕ್, ಟೆಕ್ನೀಶಿಯನ್, ಎಸಿ ಮೆಕ್ಯಾನಿಕ್ ಹೀಗೆ ಹಲವು ಹುದ್ದೆಗಳಿಗೆ ಬೇಡಿಕೆ ಇರುತ್ತದೆ. ಆದರೆ ಅಷ್ಟು ಪ್ರಮಾಣದಲ್ಲಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಕೆಲವೊಂದು ಕೋರ್ಸ್‌ಗಳಲ್ಲಿ ಶೇ.50ರಷ್ಟು ಕೈಗಾರಿಕೆ ಆಧಾರಿತವಾಗಿಟ್ಟುಕೊಂಡಿದ್ದೇವೆ. ಒಂದು ವರ್ಷದ ಕೋರ್ಸ್ ಆಗಿದ್ದರೆ 6 ತಿಂಗಳು ಕೈಗಾರಿಕೆಗಳಲ್ಲೇ ತರಬೇತಿ ನೀಡಲಾಗುತ್ತದೆ. 2 ವರ್ಷದ ಕೋರ್ಸ್ ಆಗಿದ್ದರೆ 10 ತಿಂಗಳು ಕೈಗಾರಿಕೆ ತರಬೇತಿ ನೀಡಲಾಗುತ್ತದೆ. ಕೋರ್ಸ್‌ಗಳನ್ನು ಕೈಗಾರಿಕೆಗೆ ಅನು ಗುಣವಾಗಿಯೇ ವಿನ್ಯಾಸಗೊಳಿಸಲಾಗಿದೆ.
ಪಂಬ್ಲಿರ್ ಬೇಡಿಕೆ, ಟ್ರೈನರ್ ಇಲ್ಲ
ಪ್ಲಂಬರ್‌ಗಳಿಗೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ಉದ್ಯೋಗ ಯೋಜನೆಯಡಿ ಐಟಿಐಗಳಿಗೆ ಪ್ಲಂಬರ್ ಕೋರ್ಸ್ ನಡೆಸಲು ಬೇಕಾದ ಉಪಕರಣಗಳು ಬಂದಿವೆ. ಆದರೆ ತರಬೇತಿ ನೀಡುವವರ ಕೊರತೆ ಇದೆ. ಪ್ಲಂಬರ್ ವಿಷಯದಲ್ಲಿ ಎಂಜಿನಿಯರಿಂಗ್ ಅಥವಾ ಡಿಪ್ಲೊಮಾ ಪೂರೈಸಿರುವವರು ಬೇಕಾಗುತ್ತದೆ. ಪದವಿ ಪೂರೈಸಿ ಪ್ಲಂಬರ್ ವೃತ್ತಿಯಲ್ಲಿ ಅನುಭವ ಇದ್ದರು ಸಿಕ್ಕರೂ ಆಗುತ್ತದೆ. ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿದೆ. ತರಬೇತಿ ನೀಡಲು ಸೂಕ್ತರಾದವರು ಸಿಕ್ಕಿದರೆ ಅವರಿಗೆ ಅವಕಾಶ ನೀಡಲಾಗುವುದು. ಅದೇ ರೀತಿ ವೆಲ್ಡಿಂಗ್ ಕೋರ್ಸ್‌ಗಳಿಗೂ ಬೇಡಿಕೆಯಿದೆ. ಬಾರಕೂರಿನ ಲ್ಲಿರುವ ಐಟಿಐನಲ್ಲಿ ಮಾತ್ರ ಈ ಕೋರ್ಸ್ ಲಭ್ಯವಿದೆ.
ಅಲ್ಪಾವಧಿ ಕೋರ್ಸ್
ಎಲೆಕ್ಟ್ರಿಕಲ್ ಬ್ಯಾಟರಿ ಮೇಕಿಂಗ್, ರೊಬೊಟಿಕ್, ಆಟೋಮೊಬೈಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕ್ಯಾಡ್, ಐಒಟಿ, ಫಿಟ್ಟರ್ ಸೇರಿದಂತೆ ಸುಮಾರು 150 ಅಲ್ಪಾವಧಿ ಕೋರ್ಸ್‌ಗಳಿವೆ. ಎಲ್ಲ ಐಟಿಐಗಳಲ್ಲಿ ಇದನ್ನು ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಕೆಲವೊಂದು ಐಟಿಐಗಳಲ್ಲಿ ಅಲ್ಲಿರುವ ಬೋಧಕ ವರ್ಗಕ್ಕೆ ಅನುಗುಣವಾಗಿ ಬೇಡಿಕೆ ಆಧರಿಸಿ ಅಲ್ಪಾವಧಿ ಕೋರ್ಸ್‌ಗಳನ್ನು ಒದಗಿಸುತ್ತಿದ್ದೇವೆ. ಈ ಬಗ್ಗೆ ಉದ್ಯೋಗ ಯೋಜನೆಗೆ ಒಳಪಟ್ಟಿರುವ ಎಲ್ಲ ಐಟಿಐಗಳಲ್ಲೂ ಮಾಹಿತಿ ಲಭ್ಯವಿರುತ್ತದೆ.
ಖಾಸಗಿ, ಸರಕಾರಿ ಉದ್ಯೋಗ
ಐಟಿಐ ಪೂರೈಸಿದವರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗಲಿದೆ. ಮಣಿಪಾಲ, ಮಂಗಳೂರಿನ ಸರಕಾರಿ ಐಟಿಐನಲ್ಲಿ ಶೇ.100ರಷ್ಟು ಪ್ಲೇಸೆ¾ಂಟ್ ಇದೆ. ಹಲವು ಖಾಸಗಿ ಸಂಸ್ಥೆಗಳು ತರಬೇತಿಯ ಜತೆಗೆ ಉದ್ಯೋಗ ನೀಡುತ್ತಿವೆ. ಕೆಎಸ್ಸಾರ್ಟಿಸಿ, ಕೆಪಿಟಿಸಿಎಲ್, ಕೆಎಂಎಫ್, ಎಚ್‌ಎಎಲ್ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರದ ಹಲವು ಸಂಸ್ಥೆಗಳಲ್ಲಿ ಐಟಿಐ ಪೂರೈಸಿದವರಿಗೆ ಸದಾ ಉದ್ಯೋಗಾವಕಾಶ ಇರುತ್ತದೆ. ಕಾರ್ಕಳ ಹಾಗೂ ಮಂಗಳೂರಿನಲ್ಲಿ ಕೆಜಿಟಿಟಿಐ ಸಂಸ್ಥೆಗಳಿದ್ದು, ಇಲ್ಲಿ ಇಂಟರ್‌ನೆಟ್ ಹಾಗೂ ಸೈಬರ್ ಸೆಕ್ಯೂರಿಟಿ ಬಗ್ಗೆಯೂ ಕೋರ್ಸ್‌ಗಳಿವೆ.
ಜಿಲ್ಲೆಯ ಐಟಿಐಗಳ ವಿವರ
ಜಿಲ್ಲೆಯಲ್ಲಿ 6 ಸರಕಾರಿ, 4 ಅನುದಾನಿತ ಹಾಗೂ 3 ಖಾಸಗಿ ಐಟಿಐಗಳಿವೆ. ಸರಕಾರದ 6 ಐಟಿಐಗಳಲ್ಲಿ ಮಣಿಪಾಲದ ಪ್ರಗತಿ ನಗರ, ಪೆರ್ಡೂರು, ಬೈಂದೂರು ಮತ್ತು ಕಾರ್ಕಳದಲ್ಲಿರುವ ಸರಕಾರಿ ಐಟಿಐಗಳನ್ನು ಉದ್ಯೋಗ ಯೋಜನೆಯಡಿ ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉನ್ನತೀಕರಿಸಲಾಗಿದೆ. ಒಂದೊಂದು ಐಟಿಐಗೂ ಸುಮಾರು 30 ಕೋ.ರೂ. ವೆಚ್ಚದಲ್ಲಿ ಹೊಸ ಉಪಕರಣಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಲಿಕ ವ್ಯವಸ್ಥೆಯ ಜತೆಗೆ ಬೋಧಕರು ಇಲ್ಲಿದ್ದಾರೆ. ಕುಂದಾಪುರ ಭಾಗದವರಿಗೆ ಬಿದ್ಕಲ್‌ಕಟ್ಟೆ, ನಾಡಗುಡ್ಡಿ ಅಂಗಡಿ ಹಾಗೂ ಬೈಂದೂರಿನಲ್ಲಿ ಐಟಿಐಗಳಿವೆ.
ದುಬಾರಿ ಶುಲ್ಕ ಪಡೆಯುವಂತಿಲ್ಲ
ಸರಕಾರಿ ಐಟಿಐಗಳಲ್ಲಿ 1,500 ರೂ. ಶುಲ್ಕ ಇರುತ್ತದೆ. ಖಾಸಗಿ ಮತ್ತು ಅನುದಾನಿತ ಐಟಿಐಗಳು ಸರಕಾರ ನಿಗದಿ ಮಾಡಿದ ಶುಲ್ಕ ಪಡೆಯಬೇಕಾಗುತ್ತದೆ. ವಿದ್ಯಾ ರ್ಥಿಗಳಿಂದ ಅತಿಯಾಗಿ ಶುಲ್ಕ ವಸೂಲಿ ಮಾಡುತ್ತಿ ರುವುದು ಕಂಡು ಬಂದಲ್ಲಿ ದೂರು ಸಲ್ಲಿಸಬಹುದು.
ಪ್ರಾಯೋಗಿಕ
ಪರೀಕ್ಷೆ ಮಾತ್ರ
ಐಟಿಐನಲ್ಲಿ ಥಿಯರಿ ಪರೀಕ್ಷೆ ತೀರ ಕಡಿಮೆ. ಪ್ರಾಯೋಗಿಕ ಪರೀಕ್ಷೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇಲ್ಲಿ ಪ್ರಾಯೋ ಗಿಕವಾಗಿ ಕಲಿಯುವುದೇ ಹೆಚ್ಚಿರುವುದರಿಂದ ಥಿಯರಿಗೆ ಆದ್ಯತೆ ಕಡಿಮೆ ಇರುತ್ತದೆ. ಕೆಲವೊಂದು ವಿಷಯಗಳಲ್ಲಿ ಥಿಯರಿಯ ಜತೆಗೆ ಪ್ರಾಯೋಗಿಕವಾಗಿ ಕಲಿಯುವುದು ಇರುತ್ತದೆ.
ಪ್ರಶ್ನೆ ಕೇಳಿದವರು
ಮಂಜುನಾಥ್ ಸಿದ್ದಾಪುರ, ರಮೇಶ್ ಹೆಮ್ಮಾಡಿ, ಸೌಜನ್ಯ ಉಡುಪಿ, ಕೃಷ್ಣ ಐಕಳ, ಪ್ರದೀಪ್ ಕಾಪು, ಶಿವರಾಜ್ ಕಾರ್ಕಳ, ವಿಜಯಲಕ್ಷ್ಮೀ ಬ್ರಹ್ಮಾವರ, ವಿನಿತಾ ಹೆಬ್ರಿ, ಆನಂದ ಉಪ್ಪುಂದ ಮೊದಲಾದವರು ಕರೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.