ಶ್ರೀಕೃಷ್ಣ ಮಠ: ವಿಶ್ವಾರ್ಪಣ ಕೃಷ್ಣಾರ್ಪಣ
Team Udayavani, Dec 27, 2021, 6:20 AM IST
ಉಡುಪಿ: ಎಲ್ಲ ಸ್ವಾಮೀಜಿಯವರ ಸಹಕಾರದಿಂದ ಪರ್ಯಾಯ ಪೂಜಾವಧಿ ತೃಪ್ತಿದಾಯಕವಾಗಿ ಮುಕ್ತಾಯಗೊಳ್ಳುತ್ತಿದೆ. ಏನಾದರೂ ಯಶಸ್ವಿಯಾದರೆ ಅದು ಇತರರ ಸಹಕಾರದಿಂದ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಕೃಷ್ಣಮಠ, ಪರ್ಯಾಯ ಅದಮಾರು ಮಠದ ವತಿಯಿಂದ ರವಿವಾರ ರಾಜಾಂಗಣದಲ್ಲಿ ನಡೆದ “ವಿಶ್ವಾರ್ಪಣಮ್’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು.
ಅದಮಾರು ಮಠದಿಂದ ನೀಡುವ ದ್ವಿತೀಯ ವರ್ಷದ 50,000 ರೂ. ನಗದು ಒಳಗೊಂಡ “ಶ್ರೀ ನರಹರಿತೀರ್ಥ ಪ್ರಶಸ್ತಿ’ಯನ್ನು ಯಕ್ಷಗಾನ ಕ್ಷೇತ್ರದಲ್ಲಿ 5 ದಶಕಗಳ ಸಾಧಕ ಶ್ರೀಪಾದ ತಿಮ್ಮಪ್ಪ ಭಟ್ಟ ಸಾಲ್ಕೋಡು ಅವರಿಗೆ ಶ್ರೀಪಾದರು ಪ್ರದಾನ ಮಾಡಿದರು.
ದೇವರ ಅನುಗ್ರಹದಿಂದ ನಮಗೆ ಸಿಕ್ಕಿದ ಶಿಷ್ಯರಿಂದ ಪರ್ಯಾಯ ಪೂಜಾ ಉತ್ಸವ ಯಶಸ್ವಿಯಾಗಿ ನಡೆಯಿತು ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ತೃಪ್ತಿ ವ್ಯಕ್ತಪಡಿಸಿದರು.
ಏನು ಇದೆಯೋ ಅದನ್ನು ಸಮ ರ್ಪಿಸುವುದೇ ಯಜ್ಞ. ಈ ದಿನ ಶ್ರೀಈಶ ಪ್ರಿಯತೀರ್ಥ ಶ್ರೀಪಾದರು ತನ್ನೆಲ್ಲವನ್ನೂ ಕೃಷ್ಣನಿಗೆ ಸಮರ್ಪಿಸಿದ್ದಾರೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಕೊರೊನಾ ಕಾಲಘಟ್ಟದಲ್ಲಿಯೂ ಆಚಾರ್ಯ ಮಧ್ವರಿದ್ದು ಶ್ರೀಈಶ ಪ್ರಿಯತೀರ್ಥರು ಪರ್ಯಾಯ ಪೂಜಾವಧಿ ನೆರವೇರಿಸಿಕೊಂಡರು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಇರುವೆಗಳು ಸಿಹಿ ಇರುವಲ್ಲಿ ಹೋಗು ವಂತೆ ಅದಮಾರು ಶ್ರೀಗಳು ಕೃಷ್ಣನ ಪೂಜೆಯನ್ನು ಶ್ರದ್ಧೆಯಿಂದ ಮಾಡಿದರು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಎಂದರು.
ನಾವು ಹೊರಗೆ ಅನುರೇಣು ತೃಣ ಕಾಷ್ಠದಲ್ಲಿ ದೇವರನ್ನು ನೋಡುತ್ತೇವೆ. ಆದರೆ ನಮ್ಮೊಳಗಿರುವ ದೇವರನ್ನು ಕಾಣಬೇಕು ಎನ್ನುವುದು ಶ್ರೀಕೃಷ್ಣನ ಸಂದೇಶ. ಇಂತಹ ಗುಣವನ್ನು ಹೊಂದಿರುವುದರಿಂದಲೇ ಅದಮಾರು ಶ್ರೀಗಳ ಪರ್ಯಾಯ ಯಶಸ್ವಿಯಾಗಿದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು.
ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಬೃಜ್ ಮೋಹನ್ ಶರ್ಮ, ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಆಸ್ರಣ್ಣ, ನಿವೃತ್ತ ಅಧಿಕಾರಿ ಟಿ. ಶ್ಯಾಮ ಭಟ್, ಉದ್ಯಮಿ ಸಿ.ಆರ್. ಬಾಲಕೃಷ್ಣ ಭಟ್ ಚೆನ್ನೈ ಪಾಲ್ಗೊಂಡರು.
ಶಾಸಕ ಕೆ. ರಘುಪತಿ ಭಟ್, ಪಿಪಿಸಿ ಸಂಸ್ಕೃತ ಪ್ರಾಧ್ಯಾಪಕ ಡಾ| ಟಿ.ಎಸ್.ರಮೇಶ್, ವಿದ್ವಾಂಸ ವಿ| ಹೆರ್ಗ ರವೀಂದ್ರ ಭಟ್, ಕಲಾವಿದ ಪ್ರಾದೇಶ ಆಚಾರ್ಯ ಬೆಂಗಳೂರು, ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ಟ, ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಕಲಾ ಸಂಘಟಕ ಪುರುಷೋತ್ತಮ ಅಡ್ವೆ ಅವರನ್ನು ಸಮ್ಮಾನಿಸಲಾಯಿತು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.