ಇಂಧನ ಸುಸ್ಥಿರತೆ ಅತ್ಯಾವಶ್ಯಕ: | ಡಾ| ಅನಿಲ್ ಕಾಕೋಡ್ಕರ್
Team Udayavani, Oct 21, 2022, 5:00 AM IST
ಮಣಿಪಾಲ: ಹಸುರು ಹಾಗೂ ಶುದ್ಧ ಇಂಧನದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಇಂಧನದ ಸುಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಹೋಮಿ ಭಾಭಾ ನ್ಯಾಶನಲ್ ಇನ್ಸ್ಟಿಟ್ಯೂಟ್ನ ಕುಲಾಧಿಪತಿ ಡಾ| ಅನಿಲ್ ಕಾಕೋಡ್ಕರ್ ತಿಳಿಸಿದರು.
ಮಣಿಪಾಲ ಎಂಐಟಿ ಲೈಬ್ರೆರಿ ಆಡಿಟೋರಿಯಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ “ರೆಲವೆನ್ಸ್ ಆಫ್ ನ್ಯೂಕ್ಲಿಯರ್ ಎನರ್ಜಿ ಇನ್ ಎಚೀವಿಂಗ್ ನೆಟ್ ಝೀರೋ ಸಿಒ2 ಎಮಿಶನ್’ ಬಗ್ಗೆ ಅವರು ಉಪನ್ಯಾಸ ನೀಡಿದರು.
ಭಾರತದಲ್ಲಿ ಕ್ಲೀನ್ ಅಥವಾ ಹಸುರು ಇಂಧನ ಬಳಕೆ ಪ್ರಮಾಣ ತೀರಾ ಕಡಿಮೆಯಿದೆ. ಒಟ್ಟಾರೆ ಇಂಧನ ಬಳಕೆಯಲ್ಲಿ ಶೇ. 3.9ರಷ್ಟು ಇರ ಬಹುದು. ಕೃಷಿ, ವಸತಿಗಳಿಗಿಂತ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಕೆಯಾಗುತ್ತಿದೆ. ಅಣುಶಕ್ತಿ ಇಂಧನದ ಬಳಕೆಯೂ ಹೆಚ್ಚಿದೆ. ಇಂಧನದಲ್ಲಿ ಸುಸ್ಥಿರತೆ ಕಾಪಾಡಿ ಕೊಳ್ಳುವ ಜತೆಗೆ ಎಮಿಶನ್ನ್ನು ಶೂನ್ಯಕ್ಕೆ ಇಳಿಸುವ ಸವಾಲು ಇದೆ ಎಂದರು.
ಮುಂದೆ ಬರಬಹುದಾದ ಇಂಧನ ಸವಾಲನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ನವೀಕರಿಸ ಬಹುದಾದ ಇಂಧನದ ಮೂಲವನ್ನು ಕಾಪಾಡಿಕೊಂಡು ಸೂಕ್ತ ಪರಿಹಾರ ಹುಡುಕಬೇಕು. ಮಾನವಾಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಇಂಧನ ಬಳಕೆ ಎಷ್ಟಾಗುತ್ತಿದೆ ಮತ್ತು ಭವಿಷ್ಯದಲ್ಲಿ ಇಂಧನ ಬಳಕೆ ಎಷ್ಟಾಗಲಿದೆ ಎಂಬುದು ಮತ್ತು ಅದಕ್ಕೆ ತಕ್ಕಂತೆ ಪೂರೈಕೆಯೂ ಆಗಬೇಕು. ಇಂಧನ ಪೂರೈಕೆಯಲ್ಲಿ ಶೇ. 100ರಷ್ಟು ಎಮಿಶನ್ ಫ್ರೀ ಮಾಡುವ ಆವಶ್ಯಕತೆಯಿದೆ ಎಂದರು.
ನವೀಕರಿಸಬಹುದಾದ ಇಂಧನಗಳ ಸದ್ಬಳಕೆಯ ಜತೆಗೆ ಇಂಧನ ವ್ಯವಸ್ಥೆಯನ್ನು ಇನ್ನಷ್ಟು ಸದೃಢ ಗೊಳಿಸಬೇಕು. ಹಸುರು ಇಂಧನದ ಮಹತ್ವ ಮತ್ತು ಅದರಿಂದ ಪರಿಸರಕ್ಕೆ ಆಗುವ ಅನುಕೂಲತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕು ಎಂದು ಹೇಳಿದರು.
ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣ, ಜಂಟಿ ನಿರ್ದೇಶಕ ಡಾ| ಸೋಮಶೇಖರ ಭಟ್, ಸಹ ನಿರ್ದೇಶಕ (ಎಫ್ಡಿ ಆ್ಯಂಡ್ ಡಬ್ಲೂé) ಡಾ| ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.