“ಕುಟುಂಬ ಸಮ್ಮಿಲನದಿಂದ ಮಾನವೀಯ ಸಂಬಂಧ ವೃದ್ಧಿ ‘
Team Udayavani, Jun 18, 2019, 6:24 AM IST
ಕಾಪು : ಪರಸ್ಪರ ಮಾನವೀಯ ಸಂಬಂಧಗಳನ್ನು ಭದ್ರಗೊಳಿಸುವಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸಹಕಾರಿಯಾಗುತ್ತದೆ.
ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳೂ ಕೂಡಾ ಪಾಲ್ಗೊಳ್ಳುವ ಮೂಲಕ ಮೌಲ್ಯಗಳು ವೃದ್ಧಿಸುತ್ತವೆ ಎಂದು ಜಾನಪದ ಕಲಾವಿದೆ ಕುಸುಮಾ ಕಾಮತ್ ಕರ್ವಾಲು ಹೇಳಿದರು.
ಕಾಪು ರೋಟರಿ ಶತಾಬ್ದಿ ಭವನದಲ್ಲಿ ರವಿವಾರ ಜರಗಿದ ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಪರಂಪರೆಯಲ್ಲಿ ಬೆಳೆದ ನಾವು ಇಂದು ಕೃಷಿಯಿಂದ ದೂರವಾಗುತ್ತಿರುವುದು ಭವಿಷ್ಯ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ. ಹಳ್ಳಿಯಲ್ಲಿ ಬೆಳೆದವರಿಗೆ ಪರಿಸರವೇ ಜೀವನ ಮೌಲ್ಯ ಹಾಗೂ ಬದುಕುವುದನ್ನು ಕಲಿಸುತ್ತದೆ. ಉತ್ತಮ ಸಂಸ್ಕಾರ, ಸಂಸ್ಕೃತಿಗಳು ಹಳ್ಳಿ ಪ್ರದೇಶದಲ್ಲಿ ಮಾತ್ರ ಉಳಿದಿವೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಜಿಲ್ಲಾ ವಲಯ ಐದರ ಸಹಾಯಕ ಗವರ್ನರ್ ಕೆ. ಸೂರ್ಯಕಾಂತ್ ಶೆಟ್ಟಿ, ವಲಯ ಸೇನಾನಿ ಸದಾಶಿವ ಭಟ್ ಶುಭ ಹಾರೈಸಿದರು. ಪುಟಾಣಿಗಳಿಗೆ ವಿವಿಧ ಸ್ವರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಿ ಅಭಿನಂದಿಸಲಾಯಿತು.
ನಿಯೋಜಿತ ರೋಟರಿ ಅಧ್ಯಕ್ಷ ಮನೋಹರ್ ರಾವ್ ಕುಂಜೂರು, ನಿಯೋಜಿತ ಕಾರ್ಯದರ್ಶಿ ಸುರೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ಮಣ್ ರೋಟರಿ ಪೂರ್ವಾಧ್ಯಕ್ಷ ಸುರೇಶ್ ರಾವ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಕೃಷ್ಣಮೂರ್ತಿ ಕಾಮತ್ ಕರ್ವಾಲು ರೋಟರಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ರೋಟರಿ ಅಧ್ಯಕ್ಷ ಜೇಮ್ಸ್ ಡಿ ಸೋಜ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು. ರೋಟರಿ ಸದಸ್ಯತನ ಹಾಗೂ ಸೌಹಾರ್ದ ಸಮಿತಿಯ ನಿರ್ದೇಶಕ ವಿದ್ಯಾಧರ್ ಪುರಾಣಿಕ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.