ಪರಿಸರ ದಿನಾಚರಣೆ: ಹಸಿರು ಶಿಷ್ಟಾಚಾರ ಪಾಲಿಸಲು ಜಿಲ್ಲಾಧಿಕಾರಿ ಕರೆ
Team Udayavani, Jun 6, 2018, 6:00 AM IST
ಉಡುಪಿ: ಉಡುಪಿ ಜಿಲ್ಲೆಯನ್ನು ಪರಿಸರ ಸ್ನೇಹಿ ಜಿಲ್ಲೆಯಾಗಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಪ್ರತಿಯೊಬ್ಬರು ಹಸಿರು ಶಿಷ್ಟಾಚಾರ ಪಾಲಿಸುವ ಮೂಲಕ ಉಡುಪಿಯನ್ನು ಸ್ವಚ್ಛ ಸುಂದರ ಜಿಲ್ಲೆಯಾಗಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆದಿಉಡುಪಿಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅರಣ್ಯ ಇಲಾಖೆ ರೂಪಿಸಿದ “ಬೀಟ್ ದ ಪ್ಲಾಸ್ಟಿಕ್’ ಧ್ಯೇಯ ವಾಕ್ಯವನ್ನು ಹೊಂದಿರುವ ಹಾಗೂ ಮಾಲಿನ್ಯರಹಿತ ಪರಿಸರಕ್ಕೆ ಅರಣ್ಯೀಕರಣವೇ ಉತ್ತರ ಎನ್ನುವ ಸಂದೇಶವನ್ನೊಳಗೊಂಡ ಟ್ಯಾಬ್ಲೋವನ್ನು ಉದ್ಘಾಟಿಸಿ ಡಿಸಿ ಮಾತನಾಡಿದರು.
ಉಡುಪಿಯನ್ನು ತ್ಯಾಜ್ಯ ಮುಕ್ತವಾಗಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಇಲ್ಲಿನ ನಾಗರೀಕರ ಸಹಕಾರ ಅತ್ಯಗತ್ಯ. ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಹಸಿರು ಶಿಷ್ಟಾಚಾರ ಪಾಲನೆಯಾಗುತ್ತಿದೆ. ಅರಣ್ಯ ಇಲಾಖೆಯ ಕಚೇರಿಗಳು ಸಹಿತ ಹಸಿರು ಶಿಷ್ಟಾಚಾರ ಪಾಲಿಸಿ ಎಂದು ಡಿಸಿ ಸಲಹೆ ಇತ್ತರು. ಪ್ರಯತ್ನಗಳಿಗೆ ಪ್ರತಿಫಲವೆನ್ನುವಂತೆ ಉಡುಪಿ ಜಿ.ಪಂ.ಗೆ ರಾಜ್ಯ ಪರಿಸರ ಪ್ರಶಸ್ತಿ ಗರಿ ಲಭಿಸಿದ್ದು ಅತೀವ ಸಂತಸ ತಂದಿದೆ ಎಂದರು.
ಎಸಿಎಫ್ ಅಚ್ಚಪ್ಪ, ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಫಾರೆಸ್ಟ್ ಸಿಬಂದಿ ದೇವರಾಜ ಪಾಣ, ಗಣಪತಿ, ಕೇಶವ, ದಯಾನಂದ ಉಪಸ್ಥಿತರಿದ್ದರು. ಟ್ಯಾಬ್ಲೊ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಶಾಲೆಗಳ ವಠಾರದಲ್ಲಿ ಟ್ಯಾಬ್ಲೋ ನಿಲ್ಲಿಸಿ ಮಕ್ಕಳಿಗೆ ಪರಿಸರ ಸಂದೇಶವನ್ನು ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.