ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಪರಿಸರ ಕಾಳಜಿ
Team Udayavani, Nov 22, 2019, 5:08 AM IST
ಉಡುಪಿ: ಮದುವೆ ಸಂಬಂಧವನ್ನು ಬೆಸೆದು ಒಂದು ಮಾಡುತ್ತದೆ. ಎಲ್ಲ ಪರಿವಾರದವರು, ಸ್ನೇಹಿತರನ್ನು ಒಂದುಗೂಡಿಸಲು ಮದುವೆಯ ಆಮಂತ್ರಣ ಪತ್ರ ನೀಡಿ ಆಹ್ವಾನಿಸುವುದು ನಮ್ಮ ಸಂಪ್ರದಾಯ.
ಮಾಲಿನ್ಯದಿಂದಾಗಿ ಇಂದಿನ ಕಲುಷಿತ ವಾತಾವರಣದಲ್ಲಿ ನಾವು ಪರದಾಡುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.24ರಂದು ಶಾರದಾ ಕಲ್ಯಾಣಮಂಟಪದಲ್ಲಿ ನಡೆಯಲಿರುವ ಕುಂಜಿಬೆಟ್ಟುವಿನ ಅಂಬಿಕಾ ಪ್ರಕಾಶ ಅವರ ಪುತ್ರ ವಿಜಯ್ ಪಿ.ಹಂದೆ ಮತ್ತು ಪುಣ್ಯಪ್ರಭಾ ಮತ್ತು ಶ್ರೀ ರಾಮಚಂದ್ರ ಮಯ್ಯರ ಪುತ್ರಿನಿವೇದಿತಾ ಅವರ ಮದುವೆಯ ಆಮಂತ್ರಣ ಗಮನಸೆಳೆದಿದೆ.
ಈ ಆಮಂತ್ರಣ ಪತ್ರಿಕೆ ಹೇಗಿದೆಯೆಂದರೆ ಮದುವೆ ಮುಗಿದ ಅನಂತರವೂ ಬಿಸಾಕುವಂತಿಲ್ಲ! ಯಾಕೆಂದರೆ ಇದರ ಒಳಗೆ ತುಳಸೀ ಗಿಡದ ಬೀಜಗಳಿವೆ. ಪತ್ರದ ಮತ್ತೂಂದು ಪ್ರತಿಯನ್ನು ಮಣ್ಣಲ್ಲಿರಿಸಿ ನೀರು ಹಾಕಿದರೆ ಪೇಪರ್ ಗೊಬ್ಬರ, ತುಳಸೀ ಉದ್ಬವವಾಕುವ ಕಲೆಗಾರಿಕೆಯನ್ನು ಅಚ್ಚೆಹಾಕಲಾಗಿದೆ ಇದು ನೋಡುಗರನ್ನು ಕುತೂಹಲಕ್ಕೆ ಎಡೆಮಾಡಿಕೊಡುತ್ತದೆ.
ಜನರು ತಮ್ಮ ಪ್ರತಿಷ್ಠೆಗಾಗಿ ವಿವಿಧ ರೀತಿಯ ಆಮಂತ್ರಣ ಪತ್ರಿಕೆಗಳನ್ನು ಪ್ರಕಟಮಾಡುವುದನ್ನು ನಾವು ಈಗಾಗಲೇ ನೋಡಿರುತ್ತೇವೆ. ಆದರೆ ಇದರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬಹುದು ಎನ್ನುವ ವಿಚಾರ ಹೊಳೆದಿರುವುದು ಮಾದರಿಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿ ಪರಿಸರ ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕಿದೆ. ಆ ಹಿನ್ನಲೆಯನ್ನು ಬೆಳೆಸುವ ಕೆಲಸ ಈ ಆಮಂತ್ರಣ ಪತ್ರಿಕೆ ಮೂಲಕ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.