ಶಿರ್ವದ ಗೂಡ್ಸ್ ಟೆಂಪೋಚಾಲಕನ ಪರಿಸರ ಪ್ರೇಮ
Team Udayavani, Jan 21, 2020, 5:15 AM IST
ಶಿರ್ವ: ಸ್ವಚ್ಛ ಶಿರ್ವ-ಸುಂದರ ಶಿರ್ವ ಪರಿಕಲ್ಪನೆಯಡಿಯದಲ್ಲಿ ಶಿರ್ವದ ಗೂಡ್ಸ್ ಟೆಂಪೋ ಚಾಲಕ-ಮಾಲಕ ಜಾಫರ್ ಸಾಹೇಬ್‌ಶಿರ್ವ ಮಂಚಕಲ್ ಪೇಟೆಯ ಮಧ್ಯಭಾಗದಲ್ಲಿರುವ ರಸ್ತೆ ವಿಭಾಜಕದಲ್ಲಿ ಮಳೆಗಾಲದಲ್ಲಿ ಮಣ್ಣು ತುಂಬಿಸಿ ಸುಮಾರು 300 ಮೀ.ಜಾಗದಲ್ಲಿ ಆಕರ್ಷಕ ಹೂವಿನ ಗಿಡಗಳನ್ನು ಬೆಳೆಸಿ,ನೀರುಣಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.
ಮಳೆಗಾಲದಲ್ಲಿ ರಸ್ತೆ ವಿಭಾಜಕದ ಮಧ್ಯೆ ಹಾಕಿದ ಮಣ್ಣಿನಲ್ಲಿ ಹುಲ್ಲು ಕಸಕಡ್ಡಿ ಬೆಳೆದಿತ್ತು. ಇದನ್ನು ನೋಡಿದ ಜಾಫರ್ ಸಾಹೇಬರು ತನ್ನ ಬಿಡುವಿನ ವೇಳೆಯಲ್ಲಿ ಟೆಂಪೋ ಸ್ಟಾಂಡ್‌ನ ಎದುರುಗಡೆಯ ರಸ್ತೆ ವಿಭಾಜಕದಲ್ಲಿ ಮಣ್ಣು ತುಂಬಿಸಿ ಮಳೆಗಾಲದಲ್ಲಿ ಹೂವಿನ ಗಿಡ ನೆಟ್ಟಿದ್ದಾರೆ. ಅಲ್ಲಲ್ಲಿ ಬಿಸಾಡಿದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಹೆಕ್ಕಿ ತಂದು ನೀರು ತುಂಬಿಸಿ ಮುಚ್ಚಳಕ್ಕೆ ತೂತು ಕೊರೆದು ಕೋಲಿನ ಸಹಾಯದಿಂದ ಗಿಡಗಳ ಬುಡದಲ್ಲಿ ಕಟ್ಟಿ ಹನಿ ನೀರುಹಾಯಿಸುತ್ತಿದ್ದಾರೆ. ಇದರಿಂದಾಗಿ ಬಿರು ಬಿಸಿಲಿನ ಪೇಟೆಯ ವಾತಾವರಣದಲ್ಲಿ ಡಾಮಾರು ರಸ್ತೆಯ ಬದಿಯಲ್ಲಿಯೂ ಗಿಡಗಳ ಬುಡದಲ್ಲಿ ತೇವಾಂಶ ಕಾಯ್ದುಕೊಂಡಿದ್ದು ಹಸುರಾಗಿವೆ.
ಶಿರ್ವ ಮಂಚಕಲ್ ಪೇಟೆಯ ಮಧ್ಯೆ ಹಾದು ಹೋಗುವ ಆತ್ರಾಡಿ-ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿಯಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಿಂದ ಪೆಟ್ರೋಲ್ ಪಂಪ್‌ನವರೆಗೆ ರಸ್ತೆ ವಿಭಾಜಕದೊಂದಿಗೆ ದ್ವಿಪಥ ರಸ್ತೆ ನಿರ್ಮಾಣಗೊಂಡು ವರುಷಗಳೇ ಕಳೆದಿವೆ.ಆದರೆ ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಜಕದಲ್ಲಿ ಹಳೆಯ ರಸ್ತೆಯ ಡಾಮರು,ಮಣ್ಣು ತುಂಬಿಸಿ ಕಾಮಗಾರಿಯನ್ನು ಪೂರ್ತಿಗೊಳಿಸದೆ ಅರ್ಧಂಬರ್ಧ ನಡೆಸಿದ್ದು , ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಸುಮಾರು ಒಂದು ಕಿ.ಮೀ. ಉದ್ದದ ರಸ್ತೆ ವಿಭಾಜಕದಲ್ಲಿ ಹಸಿರು ಕಂಗೊಳಿಸಿವುದು ಕೇವಲ 300 ಮೀ.ನಲ್ಲಿ ಮಾತ್ರ.ಮಳೆಗಾಲದಲ್ಲಿ ಶಿರ್ವ ಲಯನ್ಸ್ ಕ್ಲಬ್‌ನವರು ಸಮುದಾಯ ಆರೋಗ್ಯ ಕೇಂದ್ರದಿಂದ ಕಾಪು ಸರ್ಕಲ್‌ನವರೆಗೆ ಗಿಡ ನೆಟ್ಟಿದ್ದರು ಆದರೆ ನೀರಿನ ಪೋಷಣೆಯಿಲ್ಲದೆ ಗಿಡಗಳು ಸತ್ತಿವೆ.
ಜಾಫರ್ ಸಾಹೇಬರ ಪರಿಸರ ಕಾಳಜಿ ಇತರರಿಗೆ ಮಾದರಿಯಾಗಿದೆ.ಅವರಂತೆ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು,ಸ್ಥಳಿಯಾಡಳಿತ,ರಸ್ತೆಬದಿಯ ಅಂಗಡಿಗಳ ಮಾಲೀಕರು ರಸ್ತೆ ವಿಭಾಜಕದಲ್ಲಿ ಹಸುರು ಗಿಡ ನೆಟ್ಟು ಬೆಳೆಸಿ ಪೋಷಿಸಿದಾಗ ಸ್ವತ್ಛ ಸುಂದರ ಪರಿಸರ ವಾಗುವುದರಲ್ಲಿ ಸಂಶಯವಿಲ್ಲ.
-ಆಲ್ವಿನ್ ದಾಂತಿ ಪೆರ್ನಾಲ್,ಶಿಕ್ಷಕರು.,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.