ಹೆಬ್ರಿ ತಾಲೂಕಿಗೆ ಅತಿ ಶೀಘ್ರದಲ್ಲಿ ಇಎಸ್ ಐ ಆಸ್ಪತ್ರೆ : ಸಿಎಂ ಬೊಮ್ಮಾಯಿ ಭರವಸೆ
ಹೆಬ್ರಿ ತಾಲೂಕು ಆಡಳಿತ ಕಟ್ಟಡ ಉದ್ಘಾಟಿಸಿದ ಸಿಎಂ
Team Udayavani, Jun 1, 2022, 2:57 PM IST
ಹೆಬ್ರಿ : ಜನರ ಮನೆ ಬಾಗಿಲಿಗೆ ಸರಕಾರದ ಸೇವೆ ನೀಡುವ ನಿಟ್ಟಿನಲ್ಲಿ ಜನಪರ ಕಾಯ೯ಕ್ರಮಗಳನ್ನು ಮಾಡುತ್ತಿದೆ. ಹೆಬ್ರಿ ತಾಲೂಕಿನ ಜನರಿಗೆ ಉತ್ತಮ ಸೇವೆ ದೊರಕಿಸುವ ಕೆಲಸವನ್ನು ಈ ಭಾಗದ ಶಾಸಕ ಸುನಿಲ್ ಕುಮಾರ್ ಅವರಿಂದ ಆಗುತ್ತಿದೆ. ಆದಷ್ಟು ಶೀಘ್ರ ಹೆಬ್ರಿಗೆ ಇಎಸ್ ಐ ಆಸ್ಪತ್ರೆ ಯನ್ನು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ಜೂ.1ರಂದು ಹೆಬ್ರಿ ತಾಲೂಕಿನ 10 ಕೋಟಿ ವೆಚ್ಚದ ತಾಲೂಕು ಆಡಳಿತ ಕಟ್ಟಡದ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಆಧ್ಯಕ್ಷತೆಯನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಆರ್ ಅಶೋಕ್ ನೂತನ ಹೆಬ್ರಿ ತಾಲ್ಲೂಕು ಆಡಳಿತ ಸೌಧವನ್ನು ಉದ್ಘಾಟಿಸಿದರು .
1.5ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವ ,ಗೋವಿಂದ ಎಂ.ಕಾರಜೋಳ,ರಘಪತಿ ಭಟ್ ,ಸುಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ :ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗೆ ಇ.ಡಿ. ಸಮನ್ಸ್ ಜಾರಿ, ಕಾಂಗ್ರೆಸ್ ಆಕ್ರೋಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.