“ಜೀವ ರಕ್ಷಣೆಗಾಗಿ ಎಲ್ಲರೂ ಈಜು ಕಲಿಯಬೇಕಾಗಿದೆ’
ಕಡೆಕಾರು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ : ಜಿಲ್ಲಾ ಮಟ್ಟ ಈಜು ಸ್ಪರ್ಧೆ ಉದ್ಘಾಟನೆ
Team Udayavani, Sep 12, 2019, 5:59 AM IST
ಮಲ್ಪೆ: ಕಡೆಕಾರು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್‌ನ ವತಿಯಿಂದ ಜಿಲ್ಲಾ ಮಟ್ಟ ಈಜು ಸ್ಪರ್ಧೆಯು ಇತ್ತೀಚೆಗೆಕಡೆಕಾರು ದೇವರಕೆರೆಯಲ್ಲಿ ನಡೆಯಿತು.
ಸ್ಪರ್ಧೆಯನ್ನು ಉದ್ಘಾಟಿಸಿ ಅಂಬಲಪಾಡಿ ಲಕ್ಷ್ಮೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ವಿಜಯ ಬಲ್ಲಾಳ್ ಅವರು ಆತ್ಮ ರಕ್ಷಣೆಗಾಗಿ ಈಜು ಪ್ರತಿಯೊಬ್ಬರು ಕಲಿಯಬೇಕಾಗಿದೆ. ಇದು ದೈಹಿಕ ಮತ್ತು ಮಾನಸಿಕ ಸ್ಥಿರತೆಗೂ ಪೂರಕವಾಗಿದೆ.ಹಿಂದೆ ಮಕ್ಕಳು ಮನೆಯವರಿಗೆ ತಿಳಿಸದೆ ಕದ್ದು ಮುಚ್ಚಿ ಈಜು ಕಲಿಯುತ್ತಿದ್ದರು. ಕೆಲವು ಸಂದರ್ಭದಲ್ಲಿ ಅದು ಬಹಳ ಅಪಾಯಕಾರಿ. ಹಿಂದಿನ ಕಾಲದಲ್ಲಿ ಇದ್ದಷ್ಟು ಕೆರೆ, ಹಳ್ಳ, ಕೊಳ ಈಗ ಇಲ್ಲ . ಈ ನಿಟ್ಟಿನಲ್ಲಿ ಇಲ್ಲಿನ ಸ್ವಿಮ್ಮಿಂಗ್ ಕ್ಲಬ್ ಕಾರ್ಯ ಶ್ಲಾಘನೀಯ ಎಂದರು.
ಪಠ್ಯ ಪುಸ್ತಕದಲ್ಲೂ ಬರಲಿ
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆವರು ಮಾತನಾಡಿ ಈಜು ಕಲಿಯುವುದು ಅಗತ್ಯವಾಗಿದೆ. ವಿದೇಶದಲ್ಲಿ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿ ಈಜು ಕಲಿಸುತ್ತಿದ್ದಾರೆ. ನಮ್ಮ ಭಾರತ ದೇಶದಲ್ಲಿ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚು ಈಜುಪಟುಗಳು ಇರುವುದು ಅಂಕಿ ಅಂಶದಲ್ಲಿ ಕಂಡು ಬರುತ್ತದೆ. ಈಜುವಿಕೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಒಂದು ವಿಷಯವಾಗಿ ಅಳವಡಿಸಬೇಕು. ಈಜು ಕಡ್ಡಾಯ ಮಾಡಬೇಕು. ಈಜು ಬಂದರೆ ಮುಂದಿನ ತರಗತಿಗೆ ತೇರ್ಗಡೆಗೊಳಿಸು ವಂತಾಗಬೇಕು ಎಂದರು.
ಅಧ್ಯಕ್ಷತೆಯನ್ನು ಕಡೆಕಾರು ಗ್ರಾ.ಪಂ.ನ ಅಧ್ಯಕ್ಷ ರಘುನಾಥ್ ಕೋಟ್ಯಾನ್ ವಹಿಸಿದ್ದರು.ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕಡೆಕಾರು ಪಂಚಾಯತ್ ಸದಸ್ಯ ತಾರಾನಾಥ್ ಆರ್. ಸುವರ್ಣ, ಉಡುಪಿಯ ಡಿವೈಎಸ್ಪಿ ಟಿ. ಆರ್. ಜೈ ಶಂಕರ್, ಸ್ವಿಮ್ಮಿಂಗ್ ಕ್ಲಬ್‌ನ ಉಪಾಧ್ಯಕ್ಷರಾದ ಚಂದ್ರ ಕುಂದರ್, ಹರ್ಷ ಮೈಂದನ್ ಉಪಸ್ಥಿತರಿದ್ದರು.ವಿಶೇಷ ಮಕ್ಕಳಾದ ರಾಹುಲ್ ಅಂಬಲಪಾಡಿ ಮತ್ತು ಪ್ರೀತೇಶ್ ಕಟಪಾಡಿ ಅವರನ್ನು ಸಮ್ಮಾನಿಸಲಾಯಿತು.
ಸ್ವಿಮ್ಮಿಂಗ್ ಕ್ಲಬ್‌ನ ಅಧ್ಯಕ್ಷ ಗಂಗಾಧರ್ ಜಿ. ಕಡೆಕಾರ್ ಸ್ವಾಗತಿಸಿದರು. ಸಂಪೀÅತಾ ಪ್ರಾರ್ಥಿಸಿದರು. ಕಾರ್ಯದರ್ಶಿ ಕೃಪಾಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.