ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Team Udayavani, Jan 12, 2025, 2:11 AM IST

1-a-mahe-bg

ಮಣಿಪಾಲ: ಡಾ| ಟಿಎಂಎ ಪೈ ಅವರು ಕರಾವಳಿ ಪ್ರದೇಶದಲ್ಲಿ ಬಡತನ, ನಿರುದ್ಯೋಗ, ಅನಾರೋಗ್ಯ ನಿಯಂತ್ರಣಕ್ಕೆ ಬಹಳ ದೊಡ್ಡ ಕೊಡುಗೆಗಳನ್ನು ಸಲ್ಲಿಸಿದಂತೆ ದೇಶಾಭಿವೃದ್ಧಿಗೆ ಪ್ರತಿಯೊಬ್ಬರೂ ತನ್ನ ಕೈಲಾದ ಸೇವೆಯನ್ನು ಮಾಡುವುದು ಕರ್ತವ್ಯವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಉಡುಪಿ ಮೂಲದ ನ್ಯಾ| ಪಿ.ವಿಶ್ವನಾಥ ಶೆಟ್ಟಿ ಕರೆ ನೀಡಿದ್ದಾರೆ.

ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ (ಎಜಿಇ), ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ), ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ (ಎಂಇಎಂಜಿ), ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., (ಎಂಎಂಎನ್‌ಎಲ್‌), ಡಾ| ಟಿಎಂಎ ಪೈ ಫೌಂಡೇಶನ್‌ ವತಿಯಿಂದ ಕೆಎಂಸಿ ಗ್ರೀನ್ಸ್‌ನಲ್ಲಿ ಶನಿವಾರ ಜರಗಿದ ಹೊಸ ವರ್ಷದ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಅಸಮ ತೋಲನವನ್ನು ಸರಿಪಡಿಸು ವುದು ಸರಕಾರದಿಂದಷ್ಟೇ ಅಸಾಧ್ಯ. ಈ ಕೆಲಸಕ್ಕೆ ಎಲ್ಲ ಸಾಮಾಜಿಕರು ಕೈಜೋಡಿಸಬೇಕು. ಈಗಿನ ಯಾವ ಅಭಿವೃದ್ಧಿ ಮುನ್ನೋಟವೂ ಇಲ್ಲದ 1950ರ ದಶಕದಲ್ಲಿಯೇ ಇಂತಹ ಕೆಲಸಕ್ಕೆ ಧೈರ್ಯದಿಂದ ಕೈ ಹಾಕಿದ ಡಾ| ಟಿಎಂಎ ಪೈಯವರು ನಮಗೆಲ್ಲ ಮಾದರಿಯಾಗಿದ್ದಾರೆ. ಅವರ ಕೊಡುಗೆಗೆ ಭಾರತರತ್ನ ಪ್ರಶಸ್ತಿಯನ್ನು ಕೊಡಬೇಕು ಎಂದು ನ್ಯಾ| ಶೆಟ್ಟಿ ಹೇಳಿದರು.

ವಿದ್ಯೆ ಜತೆ ಕೌಶಲಾಭಿವೃದ್ಧಿ ಅಗತ್ಯ
ಕಲಿತ ವಿದ್ಯೆಯಿಂದ ಕೇವಲ ಉದ್ಯೋಗ ದೊರಕಿಸಿಕೊಳ್ಳಬಹುದು. ಆದರೆ ವೃತ್ತಿಯಲ್ಲಿ ಪ್ರಗತಿಯನ್ನು ಅದು ಸಾಧಿಸದು. ಜ್ಞಾನವನ್ನು ಹೆಚ್ಚಿಸಿಕೊಂಡು ಕೌಶಲವನ್ನು ಸಾಧಿಸಿ ಪರಿಸರದಲ್ಲಿ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಬೇಕು. ಇದುವೇ ಯಶಸ್ಸಿನ ಗುಟ್ಟು ಎಂದು ಹಿರಿಯ ಬ್ಯಾಂಕರ್‌, ಉಪ್ಪಿನಂಗಡಿ ಮೂಲದ ತೆಕ್ಕಾರು ಯಶವಂತ ಪ್ರಭು ಹೇಳಿದರು.

ತಂಡದ ಸದಸ್ಯರಿಗೆಲ್ಲ ಪ್ರೋತ್ಸಾಹ ನೀಡಿ ಸ್ಫೂರ್ತಿದಾಯಕರಾಗಿರಬೇಕು. ತಮ್ಮ ಕ್ಷೇತ್ರಗಳಲ್ಲಿ ಹೊಸ ಶೋಧಗಳನ್ನು ನಡೆಸುತ್ತ ಉನ್ನತ ಸ್ತರದ ಸಮಗ್ರತೆಯನ್ನು ಸಾಧಿಸಬೇಕು. ಸ್ಪರ್ಧಾತ್ಮಕತೆ, ಬದ್ಧತೆ, ಗುಣನಡತೆಯು ವ್ಯಕ್ತಿಯನ್ನು ಉತ್ತಮ ಸ್ತರಕ್ಕೆ ಕೊಂಡೊಯ್ಯುತ್ತದೆ. ಆರೋಗ್ಯವೃದ್ಧಿ, ಮನಃಸಂತೋಷ, ವಿನೋದಪ್ರಜ್ಞೆಯು ಒತ್ತಡ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವೆಲ್ಲರೂ ಇತರರ ಕೊಡುಗೆಗಳ ಫ‌ಲವನ್ನು ಅನು ಭವಿಸುತ್ತಿದ್ದೇವೆ. ಇತರರ ಸಂಕಷ್ಟ ಗಳ ಬಗ್ಗೆ ಅನುಕಂಪದಿಂದ ವ್ಯವಹರಿಸ ಬೇಕು. ಇತರರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡಿದರೆ ಸಂಸ್ಥೆಗಳು ಅತ್ಯದ್ಭುತಗಳನ್ನು ಸಾಧಿಸಬಹುದು ಎಂದು ಅವರು ಹೇಳಿದರು.

ಕಲಾಸಕ್ತಿ, ಕೌಶಲ, ರಸದೃಷ್ಟಿಯ ಸತ್ಯ: ವಸುಂಧರಾ
ಕಷ್ಟ ನಷ್ಟ, ಸೋಲು ಗೆಲುವುಗಳನ್ನು ಸಮಚಿತ್ತ, ಸಮದೃಷ್ಟಿಯಿಂದ ಸಮಭಾವದಿಂದ ಸ್ವೀಕರಿಸಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಲಾಸಕ್ತಿ, ಕಲಾಕೌಶಲ, ಕಲೆಯ ರಸದೃಷ್ಟಿಗಳೇ ಎಲ್ಲ ಏರಿಳಿತಗಳಲ್ಲಿ, ನೋವು ನಲಿವುಗಳಲ್ಲಿ ಕುಂದದಂತೆ, ನಲುಗದಂತೆ ಹುರಿದುಂಬಿಸಿರುವುದು ನಾನು ಕಂಡುಕೊಂಡ ಕಲಾಸತ್ಯ ಎಂದು ಹಿರಿಯ ನೃತ್ಯವಿದುಷಿ, ಮೂಲತಃ ಮೂಡಬಿದಿರೆಯವರಾದ ಡಾ| ವಸುಂಧರಾ ದೊರಸ್ವಾಮಿ ಹೇಳಿದರು.
ವಿಶ್ವನಾಥ ಶೆಟ್ಟಿ ಅವರನ್ನು ಮಾಹೆ ಸಹಕುಲಾಧಿಪತಿ, ಎಜಿಇ ಅಧ್ಯಕ್ಷ ಡಾ| ಎಚ್‌.ಎಸ್‌.ಬಲ್ಲಾಳ್‌, ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌, ಡಾ| ವಸುಂಧರಾ ದೊರಸ್ವಾಮಿ ಅವರನ್ನು ಮಾಹೆ ಟ್ರಸ್ಟಿ ವಸಂತಿ ಆರ್‌. ಪೈ, ಎಂಎಂಎನ್‌ಎಲ್‌ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ, ತೆಕ್ಕಾರು ಯಶವಂತ ಪ್ರಭು ಅವರನ್ನು ಡಾ| ಟಿಎಂಎ ಪೈ ಫೌಂಡೇಶನ್‌ ಅಧ್ಯಕ್ಷ ಟಿ.ಅಶೋಕ್‌ ಪೈ, ಟಿ.ಸತೀಶ್‌ ಯು. ಪೈ, ಡಾ| ಪಿ.ಮೋಹನ ರಾವ್‌ ಅವರನ್ನು ಡಾ| ಎಚ್‌.ಎಸ್‌.ಬಲ್ಲಾಳ್‌, ಲೆ| ಜ|ಡಾ| ಎಂ.ಡಿ.ವೆಂಕಟೇಶ್‌ ಅವರು ಹೊಸವರ್ಷದ ಪ್ರಶಸ್ತಿ ನೀಡಿ ಗೌರವಿಸಿದರು.
ಡಾ| ಎಚ್‌.ಎಸ್‌.ಬಲ್ಲಾಳ್‌ ಸ್ವಾಗತಿಸಿ, ಲೆ|ಜ| ಡಾ| ಎಂ.ಡಿ.ವೆಂಕಟೇಶ್‌ ಅಭಿನಂದಿಸಿದರು. ಮಾಹೆ ಸಹಕುಲಪತಿ ಡಾ| ಶರತ್‌ಕುಮಾರ್‌ ರಾವ್‌ ವಂದಿಸಿದರು. ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯೂನಿಕೇಶನ್‌ ಸಹಾಯಕ ಪ್ರಾಧ್ಯಾಪಕಿ ಶ್ರುತಿ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ| ವಸುಂಧರಾ ದೊರೆಸ್ವಾÌಮಿಯವರಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

ಯುಕ್ತಾಹಾರ ವಿಹಾರದಿಂದ ಆರೋಗ್ಯ ರಕ್ಷಣೆ: ಡಾ| ಮೋಹನ ರಾವ್‌
ಯುಕ್ತವಾದ ಆಹಾರವನ್ನು ಸಕಾಲದಲ್ಲಿ ಸ್ವೀಕರಿಸಬೇಕು. ಸೂಕ್ತ ವ್ಯಾಯಾಮ, ಸಕಾಲದಲ್ಲಿ ನಿದ್ರೆ, ಕ್ರಿಯೆ ಮತ್ತು ಭಾವನೆಗಳ ನಡುವೆ ಸಮತೋಲನ, ಕರ್ತವ್ಯಪ್ರಜ್ಞೆಯಿಂದ ಕಾರ್ಯಚಟುವಟಿಕೆಗಳನ್ನು ಮಾಡಿದರೆ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಇದನ್ನು ಭಗವದ್ಗೀತೆಯಲ್ಲಿ “ಯುಕ್ತಾಹಾರ ವಿಹಾರಸ್ಯ…’ ಎಂಬ ಶ್ಲೋಕದಲ್ಲಿ ಶ್ರೀಕೃಷ್ಣ ಸ್ಪಷ್ಟಪಡಿಸಿದ್ದಾನೆ ಎಂದು ಹೆಸರಾಂತ ವೈದ್ಯ, ಆಸ್ಪತ್ರೆಗಳ ಆಡಳಿತ ನಿರ್ವಹಣತಜ್ಞ ಉಡುಪಿ ಮೂಲದ ಡಾ| ಪಿ.ಮೋಹನ ರಾವ್‌ ಹೇಳಿದರು.

ಮನಃಸಂತೋಷ ಮತ್ತು ಉತ್ತಮ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಿದೆ. ಸಂತೋಷವಿದ್ದರೆ ಮಾತ್ರ ಆರೋಗ್ಯ ಕಾಪಾಡಲು ಸಾಧ್ಯ. ಸಂತೋಷ ಎನ್ನುವುದು ಮಾನಸಿಕ ಸ್ಥಿತಿ ಎನ್ನುವುದನ್ನು ಭಾರತೀಯ ವೈದ್ಯಶಾಸ್ತ್ರದ ಪಿತಾಮಹನೆನಿಸಿದ ಸುಶ್ರುತ ಹೇಳಿದ್ದಾನೆ. ಪ್ರಸನ್ನ ಆತ್ಮ, ಇಂದ್ರಿಯ, ಮನಸ್ಸನ್ನು ಕಾಪಾಡಿಕೊಳ್ಳುವುದರಲ್ಲಿ ಆರೋಗ್ಯದ ಗುಟ್ಟಿದೆ. ಮನಸ್ಸು ಮತ್ತು ಕಾಯಿಲೆಗಳಿಗೂ ಸಂಬಂಧವಿದೆ. ಇದನ್ನು ಕೂಡ ಗೀತೆಯಲ್ಲಿ ಹೇಳಲಾಗಿದೆ ಎಂದರು.

ಬಡತನವಿದ್ದರೆ ಹಸಿವಿನಿಂದ ಸಾಯುವುದಾದರೆ, ಸಂಪತ್ತಿನಿಂದ ಹೆಚ್ಚು ತಿಂದು ಸಾಯುತ್ತಾರೆ ಎಂದು ಗ್ರೀಕ್‌ ವೈದ್ಯ, ತಣ್ತೀಜ್ಞಾನಿ ಲುಕ್ರಿಟಸ್‌ ಬಹುಹಿಂದೆಯೇ ಹೇಳಿದ್ದಾನೆ. ಇಂದಿನ ಬಹುತೇಕ ಕಾಯಿಲೆಗಳು ತಪ್ಪು ಜೀವನ ಶೈಲಿಯಿಂದ ಬರುತ್ತಿದೆ. ಸರಿಯಾದ ಆಹಾರವನ್ನು ತೆಗೆದುಕೊಳ್ಳದಿರುವುದು, ವ್ಯಾಯಾಮ ಮಾಡದಿರುವುದು, ಮದ್ಯಪಾನ- ಧೂಮಪಾನ ಇತ್ಯಾದಿ ದುಃಶ್ಚಟಗಳಿಂದ ಬೊಜ್ಜು, ರಕ್ತದೊತ್ತಡ, ಮಾನಸಿಕ ಒತ್ತಡ, ಮಧುಮೇಹದಂತಹ ಸಮಸ್ಯೆಗಳು ಕಾಡುತ್ತಿವೆ. ಆದ್ದರಿಂದ ಮದ್ಯಪಾನ, ಧೂಮಪಾನವನ್ನು ಎಂದಿಗೂ ಮಾಡಬೇಡಿ ಎಂದು ಡಾ|ರಾವ್‌ ಕಿವಿಮಾತು ಹೇಳಿದರು.

ಟಾಪ್ ನ್ಯೂಸ್

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.