ವಿಸ್ತರಣೆಗೊಂಡ ಹಾಲ್ಕಲ್ ಜಂಕ್ಷನ್ ಮುಕ್ತ ವಾಹನ ಸಂಚಾರಕ್ಕೆ ಅನುವು
Team Udayavani, May 17, 2019, 6:23 AM IST
ಕೊಲ್ಲೂರು: ಹಾಲ್ಕಲ್ ಜಂಕ್ಷನ್ ವಿಸ್ತಾರಣೆಗೊಳ್ಳುವುದರ ಮೂಲಕ ಅಪಘಾತ ತಾಣ ಎಂಬ ಕುಖ್ಯಾತಿಯನ್ನು ಕಳಚಿಕೊಂಡು ಸುಗಮ ವಾಹನ ಸಂಚಾರಕ್ಕೆ ಅನುವಾಗಿದೆ.
ಬೈಂದೂರು, ಕೊಲ್ಲೂರು ಹಾಗೂ ಕುಂದಾಪುರಕ್ಕೆ ಸಾಗುವ ಮುಖ್ಯ ಜಂಕ್ಷನ್ ಹಾಲ್ಕಲ್ ಆಗಿದೆ. ಇಲ್ಲಿ ಹಲವು ವರ್ಷಗಳಿಂದ ಕಿರಿದಾದ ರಸ್ತೆಯ ನಡುವೆ ಅಮಿತ ವೇಗದಿಂದ ಸಾಗುವ ವಾಹನಗಳಿಂದಾಗಿ ಅಪಘಾತವಾಗುತ್ತಿತ್ತು. ಈ ಬಗ್ಗೆ ಉದಯವಾಣಿ ಸಚಿತ್ರ ವರದಿಯೊಡನೆ ಇಲಾಖೆಯ ಗಮನ ಸೆಳೆದಿತ್ತು.
ಯಾತ್ರಾರ್ಥಿಗಳ ನಿಟ್ಟುಸಿರು
ಕೊಲ್ಲೂರು ಕ್ಷೇತ್ರಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ನಾನಾ ಕಡೆಯಿಂದ ಆಗಮಿಸುತ್ತಾರೆ. ಅಗಲ ಕಿರಿದಾದ ಘಾಟಿ ಆರಂಭದ ಈ ಹಾದಿಯು, ಹೊಸತಾಗಿ ಬರುವ ವಾಹನ ಚಾಲಕರಿಗೆ ಗೊಂದಲ ಉಂಟು ಮಾಡುತ್ತಿತ್ತು. ಮೂರು ಗ್ರಾಮಗಳನ್ನು ಜೋಡಿಸುವ ಹಾಲ್ಕಲ್ ಜಂಕ್ಷನ್ ಇದೀಗ ವಿಸ್ತಾರ ಗೊಂಡಿದ್ದು ಯೋಗ್ಯ ಮಾರ್ಗವಾಗಿ ರೂಪ ಗೊಂಡಿದೆ. ರಸ್ತೆ ವಿಸ್ತರಣೆಗೊಂಡು ಡಾಮರು ಮಾಡಲಾಗಿದ್ದು, ವೇಗದ ಮಿತಿಗೆ ರಸ್ತೆ ಉಬ್ಬು ನಿರ್ಮಿಸಲಾಗಿದ್ದು ವೇಗಕ್ಕೆ ಕಡಿವಾಣ ಹಾಕಿದೆ.
ಹೆಮ್ಮಾಡಿ-ಕೊಲ್ಲೂರು ತಿರುವು ವಿಸ್ತರಣೆ
ಹೆಮ್ಮಾಡಿಯಿಂದ ಕೊಲ್ಲೂರು ತನಕ ಅಪಘಾತ ವಲಯವನ್ನು ತೆರವುಗೊಳಿಸಿ ವಿಸ್ತರಣೆ ಮಾಡಿದ್ದು ಪ್ರಯೋಜನಕಾರಿಯಾಗಿದೆ. ಹೆಮ್ಮಾಡಿ, ದೇವಲ್ಕುಂದ ಸಹಿತ ನೆಂಪು, ಚಿತ್ತೂರು, ಈಡೂರು, ಜಡ್ಕಲ್, ಹಾಲ್ಕಲ್‌ನಲ್ಲಿ ವಿಸ್ತರಣೆ ಕಾಮಗಾರಿ ಪೂರ್ಣ ಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.