ತಾಲೂಕು ಘೋಷಣೆ ನಿರೀಕ್ಷೆ, ಅಭಿವೃದ್ಧಿಯ ಅಪೇಕ್ಷೆ!
Team Udayavani, Jan 6, 2018, 12:07 PM IST
ಬೈಂದೂರು: ತಾಲೂಕಾಗಿ ರೂಪುಗೊಳ್ಳುತ್ತಿರುವ ಬೈಂದೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶಕ್ಕಾಗಿ ಜ. 8ರಂದು ಆಗಮಿಸಲಿದ್ದು, ಕ್ಷೇತ್ರದ ಅಭಿವೃದ್ಧಿಯ ಕುರಿತ ನಿರೀಕ್ಷೆಗಳು ಗರಿಗೆದರಿವೆ. ಇದಕ್ಕೆ ಪೂರಕವಾಗಿ ಸ್ವಾಗತಕ್ಕೆ ಬೈಂದೂರು ಸಜ್ಜುಗೊಂಡಿದೆ.
ಸಾಧನಾ ಸಮಾವೇಶದಲ್ಲಿ 490.97 ಕೋಟಿ ರೂ. ಅನುದಾನದ ಯೋಜನೆಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ 35 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದ್ದು, ಪಾರ್ಕಿಂಗ್, ಊಟದ ವ್ಯವಸ್ಥೆಗೆ ತಯಾರಿ ಸಾಗಿದೆ. ತ್ರಾಸಿಯಿಂದ ಬೈಕ್ ರ್ಯಾಲಿಯನ್ನೂ ಆಯೋಜಿಸಲಾಗಿದೆ. ಸಿಎಂ ಭೇಟಿಯಿಂದ ಕ್ಷೇತ್ರದ ಪ್ರಗತಿಗೆ ಇನ್ನಷ್ಟು ವೇಗ ದೊರೆಯಲಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಎರಡನೇ ಬಾರಿ ಭೇಟಿ
ಸಿದ್ದರಾಮಯ್ಯ ಅವರು ಅಧಿಕಾರಕ್ಕೇರಿದ ಬಳಿಕ ಎರಡನೇ ಬಾರಿಗೆ ಬೈಂದೂರಿಗೆ ಆಗಮಿಸುತ್ತಿದ್ದಾರೆ. ಹಿಂದೆ ವಾರಾಹಿ ಯೋಜನೆ ಉದ್ಘಾಟನೆಗೆ ಅವರು ಆಗಮಿಸಿದ್ದರು. ಸದ್ಯ ಬೈಂದೂರು ತಾಲೂಕು ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿದ್ದು ಭೇಟಿ ವೇಳೆ ಸಿಎಂ ತಾಲೂಕು ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಅಭಿವೃದ್ಧಿಯ ನಿರೀಕ್ಷೆಗಳು
ಉಳಿದ ಭಾಗಗಳಿಗೆ ಹೋಲಿಸಿದರೆ, ಬೈಂದೂರು ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಭಾಗದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಅವಕಾಶಗಳಿಲ್ಲ. ಶಿಕ್ಷಣ ಸಂಸ್ಥೆಗಳ ಕೊರತೆಯೂ ಇದೆ. ಬೈಂದೂರು ತಾಲೂಕು ಘೋಷಣೆಯಾದ ಬಳಿಕ ಬೈಂದೂರು, ಯಡ್ತರೆ ಸೇರಿದಂತೆ ಪುರಸಭೆಯಾಗಿ ಮಾರ್ಪಡುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ.
· ಶ್ರೀಕ್ಷೇತ್ರ ಕೊಲ್ಲೂರಿಗೆ ಬೈಂದೂರು ಉಪನಗರವಾಗಿ ಮಾರ್ಪಡಬೇಕು.
· ಒತ್ತಿನೆಣೆ, ಶಿರೂರು, ಮರವಂತೆ, ಆನೆಜರಿ, ಕೂಸಳ್ಳಿ ಮುಂತಾದ ಪ್ರವಾಸಿ ಸ್ಥಳಗಳ ಅಭಿವೃದ್ಧಿ
· ಬಹುಗ್ರಾಮ ಕುಡಿವ ನೀರಿನ ಯೋಜನೆ, ಶಿರೂರಿನ ಉಪ್ಪು ನೀರು ಸಂಸ್ಕರಣ ಘಟಕ ಕಾಮಗಾರಿಗೆ ಇನ್ನಷ್ಟು ವೇಗ ಅವಶ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.