“ಫೇಸ್ಬುಕ್ , ವಾಟ್ಸಾಪ್ ತ್ಯಜಿಸಿ ಪುಸ್ತಕ ಹಿಡಿದರೆ ಆರೋಗ್ಯ ವೃದ್ಧಿ’
Team Udayavani, Oct 15, 2019, 5:56 AM IST
ಕೋಟ: ನಾವು ಆರೋಗ್ಯದ ಉದ್ದೇಶಕ್ಕಾಗಿ ವೈದ್ಯರ ಸಲಹೆಯಂತೆ ಕೆಟ್ಟ ವಸ್ತುಗಳನ್ನು ತ್ಯಜ್ಯಿಸಿ, ಒಳ್ಳೆಯ ವಸ್ತುಗಳನ್ನು ಸ್ವೀಕರಿಸುತ್ತೇವೆ. ಅದೇ ರೀತಿ ಒಂದು ತಿಂಗಳು ಫೇಸ್ಬುಕ್ ವಾಟ್ಸಾಪ್‌ಗ್ಳನ್ನು ತ್ಯಜಿಸಿ ಪುಸ್ತಕವನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ. ಪುಸ್ತಕ ನಮಗೆ ಉತ್ತಮ ಜ್ಞಾನದೊಂದಿಗೆ ಜೀವ, ಜೀವನಕ್ಕೆ ಆರೋಗ್ಯ ನೀಡುತ್ತದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ಅವರು ಕೋಟ ಕಾರಂತ ಕಲಾಭವನದಲ್ಲಿ ಕಾರಂತೋತ್ಸವದ ಪ್ರಯುಕ್ತ ಅ.13ರಂದು ಜರಗಿದ ಕಾರಂತ ನಮನ-ಜಯಂತ ಗಾನ ವೈಭವ ಕಾರ್ಯಕ್ರಮದಲ್ಲಿ ಸಿನೆಮಾ ಒಂದು ಮಾಯೆ ಎಂಬ ವಿಚಾರದ ಕುರಿತು ಮಾತನಾಡಿದರು.ಸಿನಿಮಾ ಅಚ್ಚಳಿಯದ ನೆನಪು ಉಳಿಸಿಬಿಡುತ್ತದೆ ಕೆಲವೊಮ್ಮೆ ಸಿನೆಮಾಗಳು ನಮ್ಮ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿ ಬಿಡುತ್ತದೆ ಹಾಗೂ ನಮ್ಮ ಜೀವನದ ಯಾವುದಾದರೊಂದು ಘಟನೆಯ ಜತೆ ಬೆಸೆದುಕೊಂಡಿರುತ್ತದೆ ಎಂದರು.
ವಿರಹ ಗೀತೆ ಬರೆಯುವವರೆಲ್ಲ ವಿರಹಿಗಳಲ್ಲ
ಸಾಮಾನ್ಯವಾಗಿ ವಿರಹಗೀತೆಗಳನ್ನು ಬರೆಯುವವರನ್ನು ವಿರಹಿಗಳು ಎಂದು ಜನ ತಿಳಿದಿರುತ್ತಾರೆ. ನನಗೂ ಕೂಡ ಸಾಕಷ್ಟು ಜನ ಆ ರೀತಿ ಕೇಳಿದ್ದಾರೆ. ಆದರೆ ಕಥೆ, ಸನ್ನಿವೇಶಕ್ಕೆ ತಕ್ಕಂತೆ ವಿಹರಗೀತೆಯ ಸಂದರ್ಭ ವಿರಹಿಗಳಾಗಿ, ಪ್ರೇಮಗೀತೆಗೆ ಪ್ರೇಮಿಯಂತೆ ಕಲ್ಪಿಸಿಕೊಂಡು ಹಾಡುಗಳನ್ನು ರಚಿಸುತ್ತೇವೆ ಹೊರತು ವಿರಹಗೀತೆ ಬರೆಯುವವರೆಲ್ಲ ವಿರಹಿಗಳಲ್ಲ. ಪ್ರೇಮ ಗೀತೆ ಬರೆಯುವವರು ಪ್ರೇಮಿಗಳಲ್ಲ ಎಂದರು.
ಉದ್ಯಮಿ ಪ್ರಶಾಂತ್ ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮೋದ್ ಹಂದೆ,ನಿತ್ಯಾನಂದ ಗಾಂವ್ಕರ್, ರಘು ತಿಂಗಳಾಯ, ಶಿವರಾಮ ಪೂಜಾರಿ, ಯು.ಎಸ್. ಶೆಣೈ, ವರದೇಶ್, ಶ್ರೀರಾಜ್ ಗುಡಿ, ಅವಿನಾಶ್ ಕಾಮತ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಅನಂತರ ಖ್ಯಾತ ಗಾಯಕರಿಂದ ಜಯಂತ ಕಾಯ್ಕಿಣಿಯವರು ರಚಿಸಿದ ಹಾಡುಗಳ ಜಯಂತ ಗಾನ ವೈಭವ ಜರಗಿತು.
ಸಿನೆಮಾವೇ ಒಂದು ದೊಡ್ಡ ಧರ್ಮ
ಸಿನೆಮಾ ಭಾಷೆ, ಧರ್ಮ,ದೇಶಗಳನ್ನು ಮೀರಿದ ಭಾವನಾತ್ಮಕ ಜಗತ್ತು.ಎಲ್ಲರನ್ನೂ, ಎಲ್ಲವನ್ನೂ ಒಂದಾಗಿಸುವ ದೊಡ್ಡ ಶಕ್ತಿ ಇದಕ್ಕಿದೆ. ವ್ಯಕ್ತಿಯೊಬ್ಬ ಹೇಗೆ ಜೀವಿಸಬೇಕು, ಯಾವುದನ್ನು ಆದರ್ಶವಾಗಿ ಪಾಲಿಸಬೇಕು ಎನ್ನುವುದನ್ನು ಸಿನೆಮಾ ನಮಗೆ ತಿಳಿಸಿಕೊಡುತ್ತದೆ. ಕಲಾವಿದನಿಗೆ ತಾಯಿಯಂತೆ ಪ್ರೀತಿ ತೋರುತ್ತದೆ. ಆದ್ದರಿಂದ ಸಿನಿಮಾಕ್ಕಿಂತ ದೊಡ್ಡ ಧರ್ಮ ಬೇರೆ ಇಲ್ಲ ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು ಹಾಗೂ ಸಿನಿಮಾದಲ್ಲಿ ಅಭಿನಯ ಸಹಜವಾಗಿರಬೇಕು, ಅಭಿನಯ ಭಾವನೆಯ ಪ್ರತಿ ಬಿಂಬವಾಗಿರಬೇಕು,ಚಹರೆಯ ಮೂಲಕವೇ ಎಲ್ಲವನ್ನು ಅರ್ಥ ಮಾಡಿಕೊಳ್ಳುವಂತಿರಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.