ಕಾಮನ್ನ್ವೆಲ್ತ್ ಬಂಗಾರದ ಪದಕ ವಿಜೇತ ಲಿಫ್ಟರ್ ಗುರುರಾಜ್ಗೆ ಸಮ್ಮಾನ
Team Udayavani, Apr 20, 2018, 9:00 AM IST
ಕುಂದಾಪುರ: ಕಾಮನ್ವೆಲ್ತ್ ಗೇಮ್ಸ್ನ ವೇಯ್ಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಕುಂದಾಪುರ ತಾಲೂಕಿನ ಚಿತ್ತೂರಿನ ಗುರುರಾಜ್ ಅವರಿಗೆ ಕುಂದಾಪುರದ ಹರ್ಕ್ಯುಲಸ್ ಜಿಮ್ ವತಿಯಿಂದ ಗುರುವಾರ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದನೆ ಸಲ್ಲಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರುರಾಜ್, ತಾನು ಈ ಮಟ್ಟದ ಸಾಧನೆ ಮಾಡಲು ಹೆತ್ತವರು, ಗುರುಗಳು, ಊರವರು, ರಾಜ್ಯದ ಜನರ ಆಶೀರ್ವಾದ ಕಾರಣವಾಗಿದೆ. ನಿಮ್ಮೆಲ್ಲರ ಆಶೀರ್ವಾದವಿದ್ದರೆ ಮುಂದೆಯೂ ಇನ್ನಷ್ಟು ಪದಕಗಳನ್ನು ದೇಶಕ್ಕಾಗಿ ಗೆದ್ದು ತರುತ್ತೇನೆ ಎಂದರು.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದಿಸಿ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವುದು ಕುಂದಾಪುರದ ಹೆಮ್ಮೆ ಎಂದವರು ತಿಳಿಸಿದರು. ಕುಂದಾಪುರ ಎಸ್.ಐ. ಹರೀಶ್ ಆರ್., ರಮೇಶ್ ಕಾಂಚನ್, ವಿಠಲ, ಉದ್ಯಮಿ ಶ್ರೀಶನ್, ಮಹಮ್ಮದ್ ಆರೀಫ್, ಗುರುರಾಜ್ ತಂದೆ ಮಹಾಬಲ ಪೂಜಾರಿ, ಮೊದಲ ದೈಹಿಕ ಶಿಕ್ಷಣ ಶಿಕ್ಷಕ ಸುಕೇಶ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು. ಜಿಮ್ನ ಸತೀಶ್ ನಿರ್ವಹಿಸಿದರು.
ಕುಂದಾಪುರ: ಗುರುರಾಜ್ ಅವರಿಗೆ ಕುಂದಾಪುರ ತಾ| ಬಿಲ್ಲವ ಸಂಘದ ವತಿಯಿಂದ ಗುರುವಾರ ನಾರಾಯಣ ಗುರು ಮಂದಿರದಲ್ಲಿ ಗುರುವಾರ ಅಭಿನಂದನೆ ಸಲ್ಲಿಸಲಾಯಿತು. ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಮೆರವಣಿಗೆಯಲ್ಲಿ ಅವರನ್ನು ಬಿಲ್ಲವ ಸಂಘದ ಮುಖಂಡರು ಸ್ವಾಗತಿಸಿದರು.
ಬಿಲ್ಲವ ಸಂಘದ ಪ್ರ. ಕಾರ್ಯದರ್ಶಿ ಮಂಜು ಬಿಲ್ಲವ, ಮುಖಂಡರಾದ ನಾರಾಯಣ ಬಿಲ್ಲವ, ಕಲ್ಪನಾ ಭಾಸ್ಕರ್, ಯುವಕ ಮಂಡಲದ ಅಧ್ಯಕ್ಷ ಅಶೋಕ ಪೂಜಾರಿ, ಕಾರ್ಯದರ್ಶಿ ಅಜಿತ್ ಪೂಜಾರಿ, ದಿವಾಕರ್, ರಾಜೇಶ್, ಸುಮನಾ ಬಿದ್ಕಲ್ಕಟ್ಟೆ, ಟಿ.ಕೆ. ಕೋಟ್ಯಾನ್, ಮನೋಜ್ ನಾಯರ್, ಗುರುರಾಜ್ ತಂದೆ ಮಹಾಬಲ ಪೂಜಾರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.